ಅಮಾನತಾಗಿದ್ದ ಶಿಕ್ಷಕನಿಗೆ ʼಎʼ ವಲಯಕ್ಕೆ ವರ್ಗಾವಣೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ತಾನು ಕೆಲಸ ನಿರ್ವಹಿಸುತ್ತಿದ್ದ ಶಾಲೆಯಲ್ಲಿಯೇ ಶಿಕ್ಷಕಿಯೊಬ್ಬರೊಂದಿಗೆ ಅನುಚಿತವಾಗಿ ವರ್ತಿಸಿ ಸಿಕ್ಕಿಬಿದ್ದು ಅಮಾನತಾಗಿದ್ದ ಶಿಕ್ಷಕನನ್ನು, ಇಲಾಖಾ ವಿಚಾರಣೆ ಕಾಯ್ದಿರಿಸಿ, ನಿಯಮಬಾಹಿರವಾಗಿ ʼಎʼ ವಲಯಕ್ಕೆ ವರ್ಗಾವಣೆ ಮಾಡಿರುವ ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ.

ಕಾಮದಾಟ ಆಡಲು ಹೋಗಿ ದಾಖಲೆ ಸಮೇತ ಸಿಕ್ಕಿಬಿದ್ದ ಸೈಯದ್‌ ಅಬ್ದುಲ್‌ ರೆಹಮಾನ್‌ ಹಾಗೆ ವರ ಪಡೆದ ಮುಖ್ಯ ಶಿಕ್ಷಕನಾಗಿದ್ದರೆ, ಇಂತಹ ಕಾನೂನುಬಾಹಿರ ಕೆಲಸಗಳನ್ನು ಮಾಡಲೆಂದೇ ಕೊಪ್ಪಳದ ಡಿಡಿಪಿಐ ಪ್ರಭಾರ ವಹಿಸಿಕೊಂಡಿದ್ದ ಎಂ.ಎಸ್.‌..ಮುಂದೆ ಓದಿ

ಗವಿಮಠ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ ಸ್ಫೋಟ

ವಿಜಯಪರ್ವ ಸುದ್ದಿ | ಕೊಪ್ಪಳ

ಶುಕ್ರವಾರ ಸಂಜೆ ಇಲ್ಲಿಯ ಗವಿಮಠದ ಕೋವಿಡ್‌ ಆಸ್ಪತ್ರೆಯಲ್ಲಿ ಸಂಭವಿಸಿದ ಆಕಸ್ಮಿಕದಲ್ಲಿ ಡಿ ದರ್ಜೆ ನೌಕರನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಲಿಂಡರ್‌ ನಿರ್ವಹಣೆ ಮಾಡುವಾಗ, ತಾಂತ್ರಿಕ ಅಸಮರ್ಪಕತೆಯಿಂದಾಗಿ ಸಿಲಿಂಡರೊಂದರ ಹಿಡಿಕೆ ಸಡಿಲವಾಗಿ ಸ್ಫೋಟವಾಗಿದೆ. ಈ ಸಂದರ್ಭದಲ್ಲಿ ಅಭಿಷೇಕ್‌ ಎಂಬ ಸಿಬ್ಬಂದಿಯ ಹಣೆಗೆ ಸ್ಪ್ಯಾನರ್‌ ಬಡಿದು ಆತ ಗಂಭೀರವಾಗಿ ಗಾಯಗೊಂಡಿದ್ದಾನೆ ಎನ್ನಲಾಗಿದೆ...ಮುಂದೆ ಓದಿ

ಇಷ್ಟೆಲ್ಲ ಧೈರ್ಯಸ್ಥರು ಜೊತೆಗಿದ್ದಾಗ ಎತ್ಲಾಗ್‌ ಹೋದ್ರಿ ಗೌಡ್ರೇ…

ವಿಜಯ ಪರ್ವ ಸುದ್ದಿ | ಕೊಪ್ಪಳ

ಆತ್ಮೀಯ ವೃತ್ತಿಮಿತ್ರ, ಹೊಸದಿಗಂತ ಪತ್ರಿಕೆಯ ಕೊಪ್ಪಳ ಜಿಲ್ಲಾ ವರದಿಗಾರರಾಗಿದ್ದ ತಿಪ್ಪನಗೌಡ ಮಾಲೀಪಾಟೀಲ್‌ ಇನ್ನಿಲ್ಲ.

ಅವರ ಸಾವಿನ ಸುದ್ದಿ ಬರುವುದಕ್ಕೆ ಕೇವಲ ಅರ್ಧ ಗಂಟೆ ಮುಂಚೆ ಕೊಪ್ಪಳ ಟಿವಿ 9 ವರದಿಗಾರ ಶಿವಕುಮಾರ ಪತ್ತಾರ್‌ ಅವರ ಮನೆಯಲ್ಲಿ ಮಿತ್ರರಾದ ಸೋಮರೆಡ್ಡಿ ಅಳವಂಡಿ, ಗಂಗಾಧರ ಬಂಡಿಹಾಳ, ವಕೀಲ ಮಂಜುನಾಥ ಉಮಚಗಿ, ಕಸಾಪ ಕೊಪ್ಪಳ ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಹಾಗೂ ವೈದ್ಯಮಿತ್ರ ಡಾ...ಮುಂದೆ ಓದಿ

ಸಾಂಕ್ರಾಮಿಕ ರೋಗಶಾಸ್ತ್ರಜ್ಞನ ನೇಮಕಾತಿ: DHO ಮತ್ತೊಂದು ಅಕ್ರಮ

ವಿಜಯಪರ್ವ ಸುದ್ದಿ | ಕೊಪ್ಪಳ

ಸಂಬಂಧಿತ ವಿದ್ಯಾರ್ಹತೆಯ ಕೊರತೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿರದ ಅಭ್ಯರ್ಥಿಯನ್ನು ಮಹತ್ವದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ (ಎಪಿಡೆಮಿಯಾಲಜಿಸ್ಟ್) ಹುದ್ದೆಗೆ ನೇಮಿಸಿಕೊಳ್ಳಲು ಮುಂದಾಗುವ ಮೂಲಕ ಕೊಪ್ಪಳದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್ಒ) ಡಾ. ಲಿಂಗರಾಜು ಟಿ. ಮತ್ತೊಂದು ವಿವಾದಕ್ಕೆ ಕಾರಣರಾಗಿದ್ದಾರೆ.

ಸದರಿ ಹುದ್ದೆಯೂ ಸೇರಿದಂತೆ ಐದು ವಿವಿಧ ಹುದ್ದೆಗಳಿಗಾಗಿ 2021-22 ನೇ ಸಾಲಿಗೆ NHM IDSP ಯೋಜನೆಯಡಿ ಇದೇ ಏಪ್ರಿಲ್ 27 ರಂದು ಅರ್ಜಿ ಆಹ್ವಾನಿಸಲಾಗಿತ್ತು...ಮುಂದೆ ಓದಿ

ರೆಮ್ಡಿಸಿವಿರ್‌ ದಂಧೆ: ಚಿಕ್ಕ ಮೀನುಗಳು ಗಾಳಕ್ಕೆ, ದೊಡ್ಡವು ಹೊರಕ್ಕೆ

ವಿಜಯಪರ್ವ ಸುದ್ದಿ | ಕೊಪ್ಪಳ

ಪ್ರತಿಯೊಂದು ಸಂಕಷ್ಟಕರ ಪರಿಸ್ಥಿತಿಯೂ ಭ್ರಷ್ಟರಿಗೆ ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂಬ ಮಾತಿದೆ. ಕೊರೊನಾ ಸಂಕಷ್ಟದ ಈ ಕಾಲದಲ್ಲಿ ನಡೆಯುತ್ತಿರುವ ತರಹೇವಾರಿ ಹಗರಣಗಳು ಆ ಮಾತನ್ನು ಮತ್ತೆ ಸಾಬೀತುಪಡಿಸುತ್ತಿವೆ.

ರೆಮ್ಡಿಸಿವಿರ್‌ ದಂಧೆ

ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆ ಮಾತಿಗೆ ನಿದರ್ಶನ ಅಂದರೆ ರೆಮ್ಡಿಸಿವಿರ್‌ ಎಂಬ ಚುಚ್ಚುಮದ್ದು ಔಷಧ. ಕೊರೊನಾ ಮೊದಲ ಅಲೆಯಲ್ಲಿ ಇದರ ಹೆಸರು ಚಾಲ್ತಿಯಲ್ಲಿರಲಿಲ್ಲ...ಮುಂದೆ ಓದಿ

ಡಾ. ಲಿಂಗರಾಜು ವಿರುದ್ಧ ಸಾಲುಸಾಲು ಆರೋಪಗಳು

ವಿಜಯಪರ್ವ ಸುದ್ದಿ | ಕೊಪ್ಪಳ

ಜಿಲ್ಲೆಯ ಆರೋಗ್ಯ ಕ್ಷೇತ್ರದ ಸಮಗ್ರ ಜವಾಬ್ದಾರಿಯುಳ್ಳ ಹುದ್ದೆಯಲ್ಲಿರುವ ವ್ಯಕ್ತಿಯೇ ಭ್ರಷ್ಟನಾದರೆ?

ಡಿಎಚ್‌ಒ ಹುದ್ದೆಗೆ ಮರುನಿಯೋಜನೆಯಾಗಿರುವ ಡಾ. ಲಿಂಗರಾಜು ಟಿ. ಅವರ ಕುರಿತು ಇಂಥದೊಂದು ಪ್ರಶ್ನೆ ಮತ್ತೆ ಹುಟ್ಟಿಕೊಂಡಿದೆ.

ಏಕೆಂದರೆ, ಡಾ. ಲಿಂಗರಾಜು ವಿರುದ್ಧ ಹಲವಾರು ದೂರುಗಳಿವೆ. ಭ್ರಷ್ಟಾಚಾರ ಎಸಗಿರುವ ಹಲವಾರು ಆರೋಪಗಳಿವೆ. ಈ ಕುರಿತು ಸತತವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಸಿಇಒ ಹಾಗೂ ಆರೋಗ್ಯ ಇಲಾಖೆಗೆ ಸಾಕಷ್ಟು ದೂರುಗಳನ್ನೂ ಸಲ್ಲಿಸಲಾಗಿದೆ...ಮುಂದೆ ಓದಿ

DHOಗಷ್ಟೇ ಅಲ್ಲ, ಆರೋಗ್ಯ ವ್ಯವಸ್ಥೆಗೂ ಸೋಂಕು!

ವಿಜಯಪರ್ವ ಸುದ್ದಿ | ಕೊಪ್ಪಳ

ಕೊಪ್ಪಳದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಷ್ಟೇ ಅಲ್ಲ, ಜಿಲ್ಲೆಯ ಇಡೀ ಆರೋಗ್ಯ ವ್ಯವಸ್ಥೆಗೇ ಸೋಂಕು ತಗಲಿದಂತಾಗಿದೆ. ಹಿರಿಯ ಅಧಿಕಾರಿಗಳು ಸೇವೆಗೆ ಲಭ್ಯವಿಲ್ಲದ ಪರಿಸ್ಥಿತಿಯಿಂದ ಹಿಡಿದು, ಬೇಕಾಬಿಟ್ಟಿ ಟೆಂಡರ್‌ ಕರೆಯುವುದು ಹಾಗೂ ತಮಗೆ ಬೇಕಾದವರಿಗೆ ಮಹತ್ವದ ಜವಾಬ್ದಾರಿಗಳನ್ನು ನೀಡುವುದರ ಮೂಲಕ, ಹಾಲಿ ಡಿಎಚ್‌ಒ ಡಾ. ಲಿಂಗರಾಜು ಅವರು ಇಡೀ ವ್ಯವಸ್ಥೆಯನ್ನೇ ಹದಗೆಡಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ...ಮುಂದೆ ಓದಿ

ಜನ್ಮದಿನದ ಸಂಭ್ರಮದಲ್ಲಿ ಶಾಸಕನಾಗುವ ಕನಸು

ವಿಜಯಪರ್ವ ವಿಶೇಷ | ಕೊಪ್ಪಳ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆಲ್ಲುವ ಸಾಧ್ಯತೆಗಳನ್ನು ಹೊಂದಿದ್ದ ಸಿ.ವಿ. ಚಂದ್ರಶೇಖರ ಅವರ ಜನ್ಮದಿನ ಇಂದು.

ಒಂದು ವೇಳೆ ಅಂದು ಬಿಜೆಪಿ ತನ್ನ ಮೂಲ ಅಭ್ಯರ್ಥಿಗೆ ಅಂಟಿಕೊಂಡಿದ್ದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಇವತ್ತಿನ ಚಿತ್ರ ಬದಲಾಗಿರುವ ಸಾಧ್ಯತೆಗಳಿದ್ದವು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ಸಿ.ವಿ. ಚಂದ್ರಶೇಖರ ಅವರಿಗೇ ಬಿ-ಫಾರ್ಮ್‌ ಸಿಗಬೇಕಿತ್ತು...ಮುಂದೆ ಓದಿ

ಅಕ್ರಮಕ್ಕೆ ಬ್ರೇಕ್ ಹಾಕಿ, ಇಲ್ಲವೇ ಶಿಸ್ತು ಕ್ರಮ ಎದುರಿಸಿ; ಎಸ್ಪಿ ಜಿ.ಸಂಗೀತ ಖಡಕ್ ಎಚ್ಚರಿಕೆ!

ವಿಜಯಪರ್ವ ಸುದ್ದಿ, ಕೊಪ್ಪಳ
ನಿಮ್ಮ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ರಮ, ಅನೈತಿಕ ಚಟುವಟಿಕೆ ನಿಯಂತ್ರಿಸಬೇಕು. ಒಂದೊಮ್ಮೆ ಈ ಬಗ್ಗೆ ನನಗೆ ಸಾರ್ವಜನಿಕರಿಂದ ದೂರು ಬಂದರೆ, ನಾನೇ ದಾಳಿ ಮಾಡಿ, ಆಯಾ ಠಾಣಾಧಿಕಾರಿಗಳನ್ನೇ ಹೊಣೆಯಾಗಿಸಿ ಶಿಸ್ತು ಕ್ರಮ ಕೈಗೊಳ್ಳುತ್ತೇನೆ!

ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತ ಅವರು ಜಿಲ್ಲೆಯ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ನೀಡಿರುವ ಖಡಕ್ ಎಚ್ಚರಿಕೆ ಇದು.… ..ಮುಂದೆ ಓದಿ