ಪಾಲು ಪಡೆಯಲು ಸಂಸದ ಸಂಗಣ್ಣ ಕರಡಿ ಪತ್ರ: ಶಿವರಾಜ ತಂಗಡಗಿ ವ್ಯಂಗ್ಯ

ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದಲ್ಲಿ ಅಮೃತ ಸಿಟಿ ಯೋಜನೆಯ ಕಾಮಗಾರಿ ಕಳಪೆಯಾಗಿದೆ ಎಂದು ತಮ್ಮ ಪಾಲು ಪಡೆಯುವುದಕ್ಕಾಗಿ  ಸಂಸದ ಸಂಗಣ್ಣ ಕರಡಿ ಪತ್ರ ಬರೆದಿರಬಹುದು ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದ ಡಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ವೀಕ್ಷಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ… ..ಮುಂದೆ ಓದಿ

ಕೋವಿಡ್-19ಗೆ ಕೊಪ್ಪಳದಲ್ಲಿ 2ನೇ ಸಾವು

ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್-19ಗೆ ಮತ್ತೊಂದು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕರೋನದಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಕೊಪ್ಪಳ ನಗರದ ದಿವಟರ್ ಸರ್ಕಲ್ ಪ್ರದೇಶದ ನಿವಾಸಿಯಾಗಿದ್ದ 49 ವರ್ಷದ ಸೋಂಕಿತ ಉಸಿರಾಟದ ತೊಂದರೆ (SARI) ಯಿಂದ ಬಳಲುತ್ತಿದ್ದ. ಜೂನ್ 28ರಂದು ಸ್ವ್ಯಾಬ್ ಟೆಸ್ಟ್ ಗೆ ಕಳುಹಿಸಲಾಗಿತ್ತು. ಜೂನ್ 30ರಂದು ಕೋವಿಡ್-19 ಸೋಂಕು ದೃಢಪಟ್ಟಿತ್ತು. ಸೋಂಕಿತ ಕಳೆದ ಎರಡು ದಿನದಿಂದ ಕೊಪ್ಪಳದ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.…
..ಮುಂದೆ ಓದಿ

ಅಧಿಕಾರ ವಹಿಸಿಕೊಂಡ ಡಿಸಿ ಎಸ್.ವಿಕಾಸ ಕಿಶೋರ

ಕೊಪ್ಪಳ: ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಎಸ್. ವಿಕಾಸ ಕಿಶೋರ ಬುಧವಾರ ಅಧಿಕಾರ ವಹಿಸಿಕೊಂಡರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬೆಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಎಸ್. ವಿಕಾಸ ಕಿಶೋರ್ ಅವರು ಇಂದು ಕೊಪ್ಪಳ ಜಿಲ್ಲೆಯ ಜಿಲ್ಲಾಧಿಕಾರಿ ಆಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಜಿಲ್ಲಾಧಿಕಾರಿ ಪಿ. ಸುನಿಲ್ ಕುಮಾರ್ ಅವರು ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸಿಬ್ಬಂದಿ ಇದ್ದರು.… ..ಮುಂದೆ ಓದಿ

ಅಪ್ ಡೇಟ್ ಆಗದಿದ್ದರೆ ಔಟ್ ಡೇಟ್ ಆಗ್ತಿವಿ: ಸವಡಿ

ಕೊಪ್ಪಳ: ಪತ್ರಕರ್ತರು ಆಧುನಿಕ ತಂತ್ರಜ್ಞಾನದ ಬಗ್ಗೆ ಮಾಹಿತಿ ಪಡೆದು, ಉತ್ಪಾದಕ ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಇಲ್ಲದಿದ್ದರೆ ಕೋವಿಡ್ ನಂತರ ಬದಲಾದ ಸನ್ನಿವೇಶದಲ್ಲಿ ಬದುಕು ದುಸ್ಥರವಾಗಲಿದೆ ಎಂದು ಹಿರಿಯ ಪತ್ರಕರ್ತ ಚಾಮರಾಜ ಸವಡಿ ಹೇಳಿದರು.

ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೊಪ್ಪಳ ಮೀಡಿಯಾ ಕ್ಲಬ್‌ನಿಂದ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೊರೊನಾ ಸಂದರ್ಭದಲ್ಲಿ ಪತ್ರಕರ್ತರ ಸವಾಲು ಮತ್ತು ಸಾಧನೆ ಕುರಿತು ಅವರು ಉಪನ್ಯಾಸ ನೀಡಿದರು.… ..ಮುಂದೆ ಓದಿ

ಬೆಂಗಳೂರಿನಲ್ಲಿ ಕೋವಿಡ್‌ ಅಟ್ಟಹಾಸ, ತಜ್ಞರ ತುರ್ತು ಸಭೆ ಕರೆದ ಬಿಎಸ್‌ವೈ

ಬೆಂಗಳೂರು: ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ ಮುಂದುವರಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತಾಗಿ ಚರ್ಚೆ ನಡೆಸಲು ತಜ್ಞರ ತುರ್ತು ಸಭೆಯನ್ನು ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಕರೆದಿದ್ದಾರೆ.

ಬುಧವಾರ ಮಧ್ಯಾಹ್ಮ 2 ಗಂಟೆಗೆ ವಿಧಾನಸೌಧದಲ್ಲಿ ಸಭೆ ನಡೆಯಲಿದ್ದು ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಯಲಿದೆ.… ..ಮುಂದೆ ಓದಿ

ದಾಖಲೆ ಮೊತ್ತಕ್ಕೆ ಮಾರಾಟವಾದ ‘ಲಕ್ಷಿ ಬಾಂಬ್‌’! ಹೊಸ ರೆಕಾರ್ಡ್‌ ಸೃಷ್ಟಿಸಿದ ಅಕ್ಷಯ್‌ ಕುಮಾರ್‌!

ಕೆಲ ದಿನಗಳ ಹಿಂದಷ್ಟೇ ಅಕ್ಷಯ್‌ ಕುಮಾರ್ ನಟನೆಯ ‘ಲಕ್ಷ್ಮಿ ಬಾಂಬ್‘ ಚಿತ್ರಮಂದಿರದ ಬದಲು, ನೇರ ಆನ್‌ಲೈನ್‌ನಲ್ಲೇ ತೆರೆಕಾಣಲಿದೆ ಎಂಬ ಅಧಿಕೃತ ಮಾಹಿತಿ ಹೊರಬಿದ್ದಿತ್ತು. ಆ ಮೂಲಕ ಅಕ್ಷಯ್‌ ನಟನೆಯ ಸಿನಿಮಾವೊಂದು ಮೊದಲ ಬಾರಿಗೆ ನೇರವಾಗಿ ಓಟಿಟಿಗೆ ಕಾಲಿಡಲು ಸಜ್ಜಾಗಿದೆ. ಸಾಮಾನ್ಯವಾಗಿ ಅಕ್ಕಿ ನಟನೆಯ ಸಿನಿಮಾಗಳು ಥಿಯೇಟರ್‌ನಲ್ಲಿ ಅನಾಯಾಸವಾಗಿ 200 ಕೋಟಿ ರೂ. ಗಳಿಸುತ್ತವೆ. ಹಾಗಾದರೆ, ಓಟಿಟಿಯಲ್ಲಿ ಪ್ರದರ್ಶನ ಮಾಡಲು ‘ಲಕ್ಷ್ಮಿ ಬಾಂಬ್‌’ಗೆ ಸಿಕ್ಕಿರುವ ಮೊತ್ತವೆಷ್ಟು?… ..ಮುಂದೆ ಓದಿ

ವೈದ್ಯರ ದಿನಾಚರಣೆ: ಕೋವಿಡ್-19 ಹೋರಾಟದಲ್ಲಿ ವೈದ್ಯರ ಕಾರ್ಯಕ್ಕೆ ಮೋದಿ ಶ್ಲಾಘನೆ

ದೇಶದಲ್ಲಿ ಕೊರೊನಾ ಅಟ್ಟಹಾಸದ ಸಂಧರ್ಭದಲ್ಲಿ ವೈದ್ಯರು ನಿಭಾಯಿಸಿದ ಪಾತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಟ್ವೀಟ್ ಮಾಡಿರುವ ಮೋದಿ, ವೈದ್ಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಿದ್ದಾರೆ. ಭಾರತ ದೇಶ ಇಂತಹ ವೈದ್ಯರಿಗೆ ನಮನ ಸೂಚಿಸುತ್ತದೆ ಎಂದಿದ್ದಾರೆ. ತಾಯಿ ಮಗುವಿಗೆ ಜನ್ಮ ನೀಡಿದರೆ ವೈದ್ಯರು ನಮಗೆ ಮರುಜನ್ಮ ನೀಡುತ್ತಾರೆ ಎಂದು ಅವರು ತಮ್ಮ ವಿಡಿಯೋದಲ್ಲಿ ಉಲ್ಲೇಖಿಸಿದ್ದಾರೆ.… ..ಮುಂದೆ ಓದಿ

ಕೊಪ್ಪಳ: ಕೊರೊನಾಗೆ ಹೆದರಿ ಮನೆ ಖಾಲಿ ಮಾಡಿದ ಮ್ಯಾದರ ಓಣಿ ಜನ!

ಕೊಪ್ಪಳ: ನಗರದ 16ನೇ ವಾರ್ಡ್‌ ಮ್ಯಾದರ ಓಣಿಯಲ್ಲಿ ವೃದ್ದರೊಬ್ಬರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಜನರು ಮನೆಗಳನ್ನೇ ಖಾಲಿ ಮಾಡಿರುವುದು ಬೆಳಕಿಗೆ ಬಂದಿದೆ. ಆಸ್ಪತ್ರೆ ದಾಖಲಾಗಿದ್ದ ವೃದ್ದರಿಗೆ ಶನಿವಾರ ರಾತ್ರಿ ಸೋಂಕು ಖಚಿತವಾಗಿದೆ. ಈ ಮಾಹಿತಿ ತಿಳಿದ ಓಣಿ ಜನರ ರಾತ್ರೋ ರಾತ್ರಿ ತಮ್ಮ ಮನೆಗಳನ್ನೇ ಖಾಲಿ ಮಾಡಿ ಬೇರೆಡೆ ಹೋಗಿದ್ದಾರೆ.

0
..ಮುಂದೆ ಓದಿ

ಗಣೇಶನ ಹಬ್ಬಕ್ಕೂ ವಿಘ್ನವಾದ ಕೊರೊನಾ, ಮುಂಬಯಿನ ಸುಪ್ರಸಿದ್ದ ಗಣೇಶೋತ್ಸವ ಕ್ಯಾನ್ಸಲ್‌!

ಮುಂಬಯಿ: ಗಣೇಶೋತ್ಸವ ಅಂದಾಗ ಥಟ್ಟಂತೆ ನೆನಪಾಗುವುದು ಮಹಾನಗರಿ ಮುಂಬಯಿ. ಜುಲೈ ಹಾಗೂ ಆಗಸ್ಟ್‌ನಲ್ಲಿ ಇಲ್ಲಿನ ಅನೇಕ ಕಡೆಗಳಲ್ಲಿ ಗಣೇಶನ ಉತ್ಸವ ಭರ್ಜರಿಯಾಗಿ ನಡೆಯತ್ತೆ. ಸಾವಿರಾರು ಸಂಖ್ಯೆಯಲ್ಲಿ ಸೇರುವ ಜನರು ಗಣೇಶನನ್ನ ಕೊಂಡಾಡುತ್ತಾರೆ. ಆದರೆ ಕೊರೊನಾ ಎಂಬ ಮಾರಿ ಇದೀಗ ವಿಘ್ನನಿವಾರಕ ಗಣೇಶನಿಗೂ ತಟ್ಟಿದೆ.

0
..ಮುಂದೆ ಓದಿ

ಮಿಲಿಟರಿ ಕ್ರಾಂತಿಯ ಭಯ: ಚೀನಾ ಗಲ್ವಾನ್ ಸಾವಿನ ಸಂಖ್ಯೆ ಹೇಳದಿರಲು ಕಾರಣ ಗೊತ್ತಾಯ್ತು!

ವಾಷಿಂಗ್ಟನ್: ಲಡಾಖ್ ಗಡಿಯಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಭೀಕರ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದಾರೆ ಎಂಬುದು ಇಡೀ ವಿಶ್ವಕ್ಕೆ ಗೊತ್ತಿದೆ.

ಆದರೆ ಈ ಘರ್ಷಣೆಯನ್ನು ಚೀನಾ ಸೇನೆಯ ಎಷ್ಟು ಸೈನಿಕರು ಮೃತಪಟ್ಟಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ, ಕಾರಣ ಚೀನಾ ತನ್ನ ಸೈನಿಕರ ಸಾವಿನ ಸಂಖ್ಯೆಯನ್ನು ಅಧಿಕೃತವಾಗಿ ಘೋಷಿಸಿಯೇ ಇಲ್ಲ.

0
..ಮುಂದೆ ಓದಿ