ಯಲಬುರ್ಗಾ ಸೀನಿಯರ್ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಲಂಚಾವತಾರ – ಭಾಗ 1

ವಿಜಯಪರ್ವ ವಿಶೇಷ

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಸೀನಿಯರ್‌ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಸೀನಿಯರ್‌ ಸಬ್‌ ರಿಜಿಸ್ಟ್ರಾರ್‌ ಆಗಿರುವ ರೆಹಮಾನ್‌ ಅವರನ್ನು ಡಿಟಿಪಿ ಆಪರೇಟರ್‌ ಬಸಣ್ಣ ಎಂಬಾತ ಕಚೇರಿಯಲ್ಲಿಯೇ ತರಾಟೆಗೆ ತೆಗೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

‌ಯಲಬುರ್ಗಾದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ರೆಹಮಾನ್‌ ಹಾಗೂ ಡಿಟಿಪಿ ಆಪರೇಟರ್‌ ಬಸಣ್ಣ ನಡುವೆ ನಡೆದ ವಾಗ್ವಾದ ಹಾಗೂ ಆರೋಪ ಮತ್ತು ಪ್ರತ್ಯಾರೋಪಗಳು ವಿಡಿಯೊದಲ್ಲಿ ದಾಖಲಾಗಿವೆ...ಮುಂದೆ ಓದಿ

ಅಬಕಾರಿ ಆಡಿಯೋ ಸುತ್ತ ಪೋಸ್ಟ್‌, ಡಿಲೀಟ್‌ ಆಟ

ವಿಜಯ ಪರ್ವ ಸುದ್ದಿ | ಕೊಪ್ಪಳ

ಅಬಕಾರಿ ಇಲಾಖೆಯ ದಾಳಿ ಮತ್ತು ವಸೂಲಿಗೆ ಸಂಬಂಧಿಸಿದಂತೆ ಕೆಲವು ಆಡಿಯೊಗಳು ಭಾನುವಾರ (20-6-2021) ಸಂಜೆಯಿಂದ ಭಾರೀ ಸುದ್ದಿ ಮಾಡುತ್ತಿವೆ.

ಬಾರುಗಳಿಂದ ಅಕ್ರಮವಾಗಿ ಮಾಮೂಲು ವಸೂಲು ಮಾಡುವುದಕ್ಕೆ ಸಂಬಂಧಿಸಿದಂತೆ ಕಹಿಯಾದ ಬೆಳವಣಿಗೆಯೊಂದರ ಮೂಲ ಈ ಆಡಿಯೊಗಳಲ್ಲಿದೆ. ಅಬಕಾರಿ ಸಚಿವರು ಹಾಗೂ ಜಂಟಿ ಆಯುಕ್ತರ ಸೂಚನೆಯ ಮೇರೆಗೆ ಪ್ರತಿಯೊಂದು ಬಾರುಗಳು ನೀಡಬೇಕಾದ ಮಾಮೂಲು ಹೆಚ್ಚಬೇಕೆಂದು ಅಬಕಾರಿ ಡಿ.ಸಿ...ಮುಂದೆ ಓದಿ

ರೆಮ್ಡಿಸಿವಿರ್‌ ದಂಧೆ: ಚಿಕ್ಕ ಮೀನುಗಳು ಗಾಳಕ್ಕೆ, ದೊಡ್ಡವು ಹೊರಕ್ಕೆ

ವಿಜಯಪರ್ವ ಸುದ್ದಿ | ಕೊಪ್ಪಳ

ಪ್ರತಿಯೊಂದು ಸಂಕಷ್ಟಕರ ಪರಿಸ್ಥಿತಿಯೂ ಭ್ರಷ್ಟರಿಗೆ ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂಬ ಮಾತಿದೆ. ಕೊರೊನಾ ಸಂಕಷ್ಟದ ಈ ಕಾಲದಲ್ಲಿ ನಡೆಯುತ್ತಿರುವ ತರಹೇವಾರಿ ಹಗರಣಗಳು ಆ ಮಾತನ್ನು ಮತ್ತೆ ಸಾಬೀತುಪಡಿಸುತ್ತಿವೆ.

ರೆಮ್ಡಿಸಿವಿರ್‌ ದಂಧೆ

ಜನ ಮರುಳೋ ಜಾತ್ರೆ ಮರುಳೋ ಎಂಬ ಗಾದೆ ಮಾತಿಗೆ ನಿದರ್ಶನ ಅಂದರೆ ರೆಮ್ಡಿಸಿವಿರ್‌ ಎಂಬ ಚುಚ್ಚುಮದ್ದು ಔಷಧ. ಕೊರೊನಾ ಮೊದಲ ಅಲೆಯಲ್ಲಿ ಇದರ ಹೆಸರು ಚಾಲ್ತಿಯಲ್ಲಿರಲಿಲ್ಲ...ಮುಂದೆ ಓದಿ

ತುಡುಗು ಬುದ್ಧಿಯ ದನಕ್ಕೆ ಹುಡುಕಿ ಹುಲ್ಲು ಹಾಕಿದಂತೆ… ನೇಮಕಾತಿ ಅಕ್ರಮದಲ್ಲಿ DHO ಡಾ. ಲಿಂಗರಾಜು ವಿಕ್ರಮ

ವಿಜಯಪರ್ವ ಸುದ್ದಿ | ಕೊಪ್ಪಳ

DHO ಡಾ. ಲಿಂಗರಾಜು ಟಿ. ಅವರ ವಿರುದ್ಧ ಇರುವ ಭ್ರಷ್ಟಾಚಾರದ ಆರೋಪಗಳನ್ನು ನೋಡುತ್ತಿದ್ದರೆ ಸಾಮಾನ್ಯ ಜನ ಗಾಬರಿಗೊಳ್ಳುತ್ತಾರೆ.

ಎಲ್ಲೆಲ್ಲಿಂದ ದುಡ್ಡು ಹಿರಿಯಬಹುದು ಎಂಬುದನ್ನು ಚೆನ್ನಾಗಿ ಅರಿತಿರುವ ಡಾ. ಲಿಂಗರಾಜು, ಸರಕಾರದ ನಿಯಮಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ ನೇಮಕಾತಿಗಳಲ್ಲಿ ಅಕ್ರಮ ಎಸಗುತ್ತಾ ಬಂದಿದ್ದಾರೆ. ಅದರಲ್ಲಿಯೂ ಎನ್‌ಎಚ್‌ಎಂ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸಾಲುಸಾಲು ಆಕ್ಷೇಪಗಳು ಸಲ್ಲಿಕೆಯಾಗಿವೆ...ಮುಂದೆ ಓದಿ