ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಪ್ರತಿಭಟನಾಕಾರರ ಬಂಧನ, ಬಿಡುಗಡೆ

ವಿಜಯಪರ್ವ ಸುದ್ದಿ, ಕೊಪ್ಪಳ
ಮರಾಟ ಪ್ರಾಧಿಕಾರ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಕೊಪ್ಪಳದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆ 5 ಗಂಟೆಯಿಂದಲೇ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಹೋರಾಟಕ್ಕೆ ಮುಂದಾಗಿದ್ದರು. ಟೈರ್ ಗೆ ಬೆಂಕಿ ಹಚ್ಚಿ‌, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕೃತಿ ಸಹಿಸಿ ಆಕ್ರೋಶ ವ್ಯಕ್ತಪಡಿಸಿದರು.‌‌ ಬೆಳಗಿನ ಜಾವ ಹೋರಾಟಗಾರರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು‌ ಕಂಡು ಬಂತು.…
..ಮುಂದೆ ಓದಿ

ಕರ್ನಾಟಕ ಬಂದ್ ಹಿನ್ನೆಲೆ 15 ಕಾರ್ಯಕರ್ತರ ಹೋರಾಟ; 50 ಪೊಲೀಸರಿಂದ ಬಂದೋಬಸ್ತ

ವಿಜಯಪರ್ವ ಸುದ್ದಿ, ಕೊಪ್ಪಳ
ಮರಾಟಾ ಅಭಿವೃದ್ಧಿ ನಿಗಮ‌ ಸ್ಥಾಪನೆ ವಿರೋದಿಸಿ ಕರೆ ನೀಡಿರೋ ಕರ್ನಾಟಕ ಬಂದ್ ಹಿನ್ನೆಲೆ ಕೊಪ್ಪಳದಲ್ಲಿ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಶನಿವಾರ ಬೆಳ್ಳಂಬೆಳಗ್ಗೆ ಪ್ರತಿಭಟನೆ ನಡೆಸಿದರು.

ಕನ್ನಡ ಪರ ಸಂಘಟನೆಗಳ ಸುಮಾರು 25ಕ್ಕೂ ಹೆಚ್ಚು ಕಾರ್ಯಕರ್ತರು ಬೆಳಗ್ಗೆ 5ಕ್ಕೆ ರಸ್ತೆಗಿಳಿದಿದ್ದರು. ಟೈರ್ ಗೆ ಬೆಂಕಿ ಹಚ್ಚಿ ರಾಜ್ಯ ಸರ್ಕಾರ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.… ..ಮುಂದೆ ಓದಿ

ಕೃಷಿ ಮಂತ್ರಿ ಬಿ.ಸಿ.ಪಾಟೀಲ್ 10 ವರ್ಷದಿಂದ ಚುನಾವಣೆ ನೋಡ್ತಿದ್ದಾರೆ; ರಾಜಕೀಯ ಅನುಭವದ ಬಗ್ಗೆ ಮಾಜಿ ಮಂತ್ರಿ ವ್ಯಂಗ್ಯ

ವಿಜಯಪರ್ವ ಸುದ್ದಿ, ಕೊಪ್ಪಳ
ಕೃಷಿ ಮಂತ್ರಿ ಬಿ.ಸಿ. ಪಾಟೀಲ್ ಕೇವಲ ‌10 ವರ್ಷದಿಂದ ಚುನಾವಣೆ, ‌ರಾಜಕಾರಣ ನೋಡಿರಬಹುದು. ಆದರೆ, ನಾನು ನನ್ನ 19ನೇ ವಯಸ್ಸಿನ ಕಾಲೇಜು ಜೀವನದಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಾಜಿ ಮಂತ್ರಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳದಲ್ಲಿ ವಿದ್ಯುತ್‌ ‌ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಂತರ ಭಾನುವಾರ ಮಾತನಾಡಿ, ಇವಿಎಂ ನಿಂದ ಬಿಜೆಪಿ ಚುನಾವಣೆ ಗೆಲ್ಲುತ್ತಿದೆ ಎಂಬ ಶಿವರಾಜ ತಂಗಡಗಿ ಹೇಳಿಕೆಗೆ ಕೃಷಿ ಮಂತ್ರಿ ಬಿ.ಸಿ.ಪಾಟೀಲ್… ..ಮುಂದೆ ಓದಿ

ಬಸವ ಕಲ್ಯಾಣದಲ್ಲಿ ಗೆಲ್ಲದಿದ್ದರೆ ಬಿಜೆಪಿ ಬಿದ್ದು ಹೋಗಲ್ಲ: ಬಿ.ಸಿ. ಪಾಟೀಲ್

ವಿಜಯಪರ್ವ ಸುದ್ದಿ, ಕೊಪ್ಪಳ

ಬಸವಕಲ್ಯಾಣದಲ್ಲಿ ಗೆಲ್ಲದಿದ್ರೆ ಬಿಜೆಪಿ ಬಿದ್ದು ಹೋಗಲ್ಲ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರು ಬಿಜೆಪಿ ಗೆಲ್ಲಿಸುತ್ತಾರೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಹೇಳಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಓಲೈಕೆಗಾಗಿ ವಿವಿಧ ಸಮುದಾಯಗಳ ಪ್ರಾಧಿಕಾರ ಘೋಷಣೆ ಮಾಡಿಲ್ಲ. ಆಯಾ ಸಮುದಾಯಗಳ ಬೇಡಿಕೆಗೆ ಅನುಗುಣವಾಗಿ ಪ್ರಾಧಿಕಾರ ರಚಿಸಲಾಗಿದೆ.… ..ಮುಂದೆ ಓದಿ

ಮದುವೆ ಆಗ್ತಿನಿ ಅಂತಾ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ 10 ವರ್ಷ‌ ಜೈಲು

ವಿಜಯಪರ್ವ ಸುದ್ದಿ, ಕೊಪ್ಪಳ
ಮದುವೆ ಆಗುವುದಾಗಿ ನಂಬಿಸಿ ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಆರೋಪಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಕೊಪ್ಪಳ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.

ಕೊಪ್ಪಳದ ಪೋಸ್ಕೋ ವಿಶೇಷ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶಂಕರ ಜಾಲವಾಡಿ ವಿಚಾರಣೆ ನಡೆಸಿ, ಆರೋಪಿಗೆ ದಂಡ‌ ವಿಧಿಸಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿಯ ಲಕ್ಷ್ಮೀಕ್ಯಾಂಪ್ ನಿವಾಸಿ ಹನುಮೇಶ ತಂ/ ಹನುಮಂತಪ್ಪ(26) ಶಿಕ್ಷೆಗೆ ಗುರಿಯಾದ ಆರೋಪಿ.…
..ಮುಂದೆ ಓದಿ

ಕಾಡಾ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ; 3 ಜಿಲ್ಲೆ ಬಿಜೆಪಿ ಮುಖಂಡರ ಜಾತಿ ಲೆಕ್ಕಾಚಾರ, ಲಾಭಿ!

ವಿಜಯಪರ್ವ ಸುದ್ದಿ, ಕೊಪ್ಪಳ
ಬಸನಗೌಡ ತುರವಿಹಾರ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ ಬೆನ್ನಲ್ಲೆ 3 ಜಿಲ್ಲೆಯ ಬಿಜೆಪಿ ಮುಖಂಡರು ತೆರವಾದ ಅಧಿಕಾರ ಹಿಡಿಯಲು ಪೈಪೋಟಿ ಆರಂಭಿಸಿದ್ದಾರೆ.

ಪ್ರತಾಪಗೌಡ ಪಾಟೀಲ್ ಗೆ ಬಿಜೆಪಿ ಟಿಕೇಟ್ ಪಕ್ಕಾ ಎಂಬುದನ್ನು ಅರಿತ ಮಸ್ಕಿ ವಿಧಾನಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಸನಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಆಗೋದು ಬಹುತೇಕ ಖಚಿತವಾಗಿದೆ.… ..ಮುಂದೆ ಓದಿ

ಸಹೋದರನ ಮನೆ ನಿವೇಶನ ವಿವಾದ ಪ್ರಕರಣ; ಮಾಜಿ ಮಂತ್ರಿ ಶಿವರಾಜ‌ ತಂಗಡಗಿಗೆ ಹಿನ್ನಡೆ?- ಹೈಕೋರ್ಟ್ ಹೇಳಿದ್ದೇನು?


ಸಹೋದರನ ಮನೆ ನಿವೇಶನ ವಿವಾದ ಪ್ರಕರಣ; ಮಾಜಿ ಮಂತ್ರಿ ಶಿವರಾಜ‌ ತಂಗಡಗಿಗೆ ಹಿನ್ನಡೆ?- ಹೈಕೋರ್ಟ್ ಹೇಳಿದ್ದೇನು?

| ಮಾಜಿ ಮಂತ್ರಿ ಶಿವರಾಜ ತಂಗಡಗಿ ಅವರ ಕಾರಟಗಿ ಮನೆ ನಿವೇಶನ ವಿವಾದ ಪ್ರಕರಣ
| ಕೊಪ್ಪಳ ಡಿಸಿ ಕೋರ್ಟ್ ನಲ್ಲೇ ಪ್ರಕರಣ ಇತ್ಯರ್ಥ ಮಾಡಿಕೊಳ್ಳಿ;ಹೈಕೋರ್ಟ್
| ಸಹೋದರನ ರಕ್ಷಣೆಗೆ ಆಗಿನ ಡಿಸಿ ತುಳಸಿ ಮದ್ದಿನೇನಿ ವರ್ಗಾವಣೆ ಮಾಡಿದ್ದ ಆರೋಪ

ವಿಜಯಪರ್ವ ವಿಶೇಷ, ಕೊಪ್ಪಳ

ಮಾಜಿ ಮಂತ್ರಿ ಶಿವರಾಜ ತಂಗಡಗಿ ಸಹೋದರ ನಾಗರಾಜ ಅವರ ಕಾರಟಗಿ ಮನೆ ಜಾಗದ ವಿವಾದ ಪ್ರಕರಣ ಮತ್ತೇ ಮುನ್ನೆಲೆಗೆ ಬಂದಿದೆ.‌… ..ಮುಂದೆ ಓದಿ

ಉಪ ಚುನಾವಣೆ ಫಲಿತಾಂಶ ನೋಡಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬದಲಿಸಬಹುದು; ಡಿಸಿಎಂ

ವಿಜಯಪರ್ವ ‌ಸುದ್ದಿ,‌ ಕುಕನೂರು
ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿರೋ‌ ಶಿರ ಮತ್ತು ಆರ್ ಆರ್ ನಗರ ಮತದಾರರಿಗೆ ಧನ್ಯವಾದ.‌ ಇನ್ಮುಂದೆ‌ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಎಂದೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ.‌ ಮುಂದಿನ 2023 ಮತ್ತು 2028ರ‌ ಸಾರ್ವತ್ರಿಕ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಡಿಸಿಎಂ, ಉನ್ನತ ಶಿಕ್ಷಣ‌ ಮಂತ್ರಿ‌ ಡಾ.ಸಿ.ಅಶ್ವಥನಾರಾಯಣ ಭರವಸೆ ವ್ಯಕ್ತಪಡಿಸಿದರು.…
..ಮುಂದೆ ಓದಿ

2 ವಿಧಾನಸಭೆ ಕ್ಷೇತ್ರ ಬಿಜೆಪಿ ತೆಕ್ಕೆಗೆ; ಈಗ ಟಗರು, ಬಂಡೆ ಎಲ್ಲಿವೆ?: ಕೃಷಿ ಮಂತ್ರಿ ಬಿ.ಸಿ.ಪಾಟೀಲ್

ವಿಜಯಪರ್ವ ಸುದ್ದಿ, ಕೊಪ್ಪಳ
ಶಿರಾ ಮತ್ತು ರಾಜರಾಜೇಶ್ವರಿ ನಗರದ ಫಲಿತಾಂಶ ಸರ್ಕಾರಕ್ಕೆ ಜನರು ನೀಡಿದ ಸರ್ಟಿಫಿಕೇಟ್. ಕೋವಿಡ್19, ನೆರೆಯಂತ ಸಂಧರ್ಬದಲ್ಲಿ ಸಿಎಂ ಯಡಿಯೂರಪ್ಪ ಅವರ ಕೆಲಸಕ್ಕೆ ಮತದಾರ ಈ ಫಲಿತಾಂಶ ನೀಡಿದ್ದಾರೆ ಎಂದು ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.‌

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಕನಿಷ್ಠ 50 ಸಾವಿರಕ್ಕೂ ಹೆಚ್ಚು ಮತದ ಅಂತರದಿಂದ ಆರ್ ಆರ್ ನಗರ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು.‌… ..ಮುಂದೆ ಓದಿ

ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೆದ್ದಾರಿ ತಡೆ

ವಿಜಯಪರ್ವ ಸುದ್ದಿ, ಕೊಪ್ಪಳ
ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ‌ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಕೊಪ್ಪಳದಲ್ಲಿ ಹೆದ್ದಾರಿ ತಡೆ ನಡೆಸಲಾಯಿತು.

ಅಖಿಲ ಭಾರತ ರೈತ ಸಂಘರ್ಷ ಸಮಿತಿ ಕರೆ ಹಿನ್ನೆಲೆಯಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ಕರ್ನಾಟಕ ರೈತ ಪ್ರಾಂತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಜಿಲ್ಲಾಡಳಿತ ಭವನದ ಮುಂದೆ ಎನ್ ಎಚ್63ರಲ್ಲಿ ರಸ್ತೆ ತಡೆ ನಡೆಸಲಾಯಿತು.… ..ಮುಂದೆ ಓದಿ

error: Content is protected !!