ರಾಯರೆಡ್ಡಿ Vs ಹಾಲಪ್ಪ ಆಚಾರ್: ರಾಜಕೀಯ ಪ್ರಬುದ್ಧತೆ ತೋರಲು ಇದು ಸಕಾಲ

ಇತ್ತೀಚೆಗೆ ಕೊಪ್ಪಳ ಜಿಲ್ಲೆ ಯಲಬುರ್ಗಾದ ಚಿಕ್ಕಮ್ಯಾಗೇರಿ ಗ್ರಾಮ ಹಾಗೂ ಯಲಬುರ್ಗಾ ಪಟ್ಟಣದಲ್ಲಿ ನಡೆದ ರಾಜ್ಯ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ನೀಡಿದ ಹೇಳಿಕೆಗಳು ಅನಗತ್ಯವಾಗಿ ವಿವಾದಕ್ಕೆ ಕಾರಣವಾಗಿವೆ.

ಬಣಜಿಗರ ಸಮಾವೇಶದಲ್ಲಿ ಮಾತನಾಡಿದ್ದ ಬಸವರಾಜ ರಾಯರಡ್ಡಿ ಅವರು, ʼದನ ಕಾಯೋರೆಲ್ಲ ಎಂಎಲ್‌ಎ, ಎಂಪಿ ಆಗಿದ್ದಾರೆʼ ಅಂದಿದ್ದರು. ಚಿಕ್ಕಮ್ಯಾಗೇರಿ ಕಾರ್ಯಕ್ರಮದಲ್ಲಿ ʼಆರು ಹಡೆದಾಕೆಯ ಮುಂದೆ…ʼ ಎಂದು ರೂಢಿಗತ ಗಾದೆ ಮಾತೊಂದನ್ನು ಉಲ್ಲೇಖಿಸಿದ್ದರು...ಮುಂದೆ ಓದಿ

ಶಿಕ್ಷಕ ಕಾಸಿಂ ಅಕ್ರಮ ನಿಯೋಜನೆ ರದ್ದು: ʼವಿಜಯ ಪರ್ವʼ ವರದಿಗಳ ಫಲಶೃತಿ

ವಿಜಯ ಪರ್ವ ಸುದ್ದಿ | ಕೊಪ್ಪಳ

ಶಿಕ್ಷಕರನ್ನು ಬೋಧಕೇತರ ಹುದ್ದೆಗಳಿಗೆ ನಿಯೋಜನೆ ಮಾಡುವ ದಂಧೆಗೆ ಕಡಿವಾಣ ಹಾಕಿದೆ ಸರಕಾರ.

ಇದರ ಅಂಗವಾಗಿ ಕೊಪ್ಪಳ ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ಕೊಪ್ಪಳ ನಗರದ ಹೈಸ್ಕೂಲ್‌ ಶಿಕ್ಷಕ ಕಾಸಿಂ ಸಂಕನೂರ ಅವರ ನಿಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಕುರಿತು ಶಿಕ್ಷಣ ಇಲಾಖೆಯ (ಪ್ರೌಢಶಿಕ್ಷಣ) ಸರಕಾರದ ಆಧೀನ ಕಾರ್ಯದರ್ಶಿಗಳು ಆಗಸ್ಟ್‌ 6 ರಂದು ಹೊರಡಿಸಿರುವ ಆದೇಶದ ಪ್ರತಿ ʼವಿಜಯ ಪರ್ವʼಕ್ಕೆ ಲಭ್ಯವಾಗಿದೆ...ಮುಂದೆ ಓದಿ

ಲಕ್ಷ ರೂಪಾಯಿ ಎಗರಿಸಿದ ಚಾಲಾಕಿ ಕಳ್ಳ: ಸಿಸಿಟಿವಿಯಲ್ಲಿ ದಾಖಲು

ವಿಜಯ ಪರ್ವ ಸುದ್ದಿ | ಕೊಪ್ಪಳ

ಚಾಲಾಕಿ ಕಳ್ಳನೊಬ್ಬ ಕ್ಷಣಾರ್ಧದಲ್ಲಿ ರೂ.1.05 ಲಕ್ಷ ನಗದನ್ನು ಬೈಕ್‌ ಡಿಕ್ಕಿಯಿಂದ ಎಗರಿಸಿದ ಘಟನೆ ನಗರದ ಕಾವೇರಿ ಪೆಟ್ರೋಲ್‌ ಬಂಕ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಇಡೀ ಘಟನೆ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುದ್ದು, ಪೊಲೀಸರು ಚಾಲಾಕಿ ಕಳ್ಳನ ಪತ್ತೆಗೆ ಶ್ರಮಿಸುತ್ತಿದ್ದಾರೆ.

ಲಾಚನಕೇರಿಯ ಚನ್ನಪ್ಪಗೌಡ ತಂದಿ ಹನುಮನಗೌಡ ಪಾಟೀಲ್‌ ಎಂಬ ರೈತ, ತಮ್ಮ ಬೆಳೆಯನ್ನು ಎಪಿಎಂಸಿಯಲ್ಲಿ ಮಾರಿ, ಅಲ್ಲಿ ನೀಡಿದ್ದ ಚೆಕ್‌ ಅನ್ನು ಕೆನರಾ ಬ್ಯಾಂಕ್‌ನಲ್ಲಿ ನಗದೀಕರಿಸಿದ್ದರು...ಮುಂದೆ ಓದಿ

ಹಾಲಪ್ಪ ಆಚಾರ್‌ ಈಗ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ

ವಿಜಯ ಪರ್ವ ಸುದ್ದಿ | ಕೊಪ್ಪಳ

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದೆ. 

ಕೊಪ್ಪಳ ಜಿಲ್ಲೆ ಯಲಬುರ್ಗಾ ಕ್ಷೇತ್ರದಿಂದ ಸಚಿವರಾಗಿರುವ ಹಾಲಪ್ಪ ಆಚಾರ್‌ ಅವರಿಗೆ ಮಹತ್ವದ ಗಣಿ ಮತ್ತು ಭೂವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳನ್ನು ನೀಡಲಾಗಿದೆ.

ಹಣಕಾಸು ಇಲಾಖೆಯನ್ನು ಸಿಎಂ ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಆರಗ ಜ್ಞಾನೇಂದ್ರ ಅವರಿಗೆ ಮಹತ್ವದ ಗೃಹ ಖಾತೆ ನೀಡಲಾಗಿದೆ. ..ಮುಂದೆ ಓದಿ

ಓಡಿಹೋದ ಅನುಮಾನಾಸ್ಪದ ವ್ಯಕ್ತಿ; ಪಿಸ್ತೂಲ್‌ ಹಿಡಿದು ಬೆನ್ನತ್ತಿದ ಎಸ್‌ಪಿ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ, ಇಂದು ವಾಹನಗಳ ದಾಖಲಾತಿ ಪರಿಶೀಲನೆ ಕಸರತ್ತು ಪೊಲೀಸರ ದೊಡ್ಡ ಕಾರ್ಯಾಚರಣೆಗೆ ಕಾರಣವಾಗಿದೆ.

ಮಾಮೂಲು ದಾಖಲಾತಿ ಪರಿಶೀಲನೆ ವೇಳೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಬೈಕ್ ಬಿಟ್ಟು ಓಡಿ ಹೋಗಿದ್ದಾನೆ. ಹೀಗಾಗಿ ಕಳೆದ ನಾಲ್ಕೈದು ಗಂಟೆಗಳಿಂದ ಪೊಲೀಸರು ಸುತ್ತಮುತ್ತಲಿನ ಹೊಲಗಳಲ್ಲಿ  ತೀವ್ರ ಶೋಧ ನಡೆಸಿದ್ದಾರೆ.

ಖುದ್ದು ಎಸ್‌ಪಿ ಟಿ...ಮುಂದೆ ಓದಿ

ಲಂಚ ಆರೋಪಿ ಲಕ್ಷ್ಮೀ ತುಳಸಿ ಕೊಪ್ಪಳದ ನೋಂದಣಾಧಿಕಾರಿ ಕಚೇರಿಗೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆ ಸಿಂಧನೂರು ಉಪನೋಂದಣಾಧಿಕಾರಿ ಲಕ್ಷ್ಮೀ ತುಳಸಿ ಅವರನ್ನು ಕೊಪ್ಪಳಕ್ಕೆ ವರ್ಗಾಯಿಸಲಾಗಿದೆ.

ಸದರಿ ಲಕ್ಷ್ಮೀ ತುಳಸಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪದ ತನಿಖೆ ಬಾಕಿ ಇರುವುದರಿಂದ, ಅವರನ್ನು ನಾನ್-ಎಕ್ಸಿಕ್ಯೂಟಿವ್‌ ಹುದ್ದೆಯಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ.

ಆರೋಪದ ಹಿನ್ನೆಲೆ
ವಕೀಲ ಸಂತೋಷ್​ ಪಾಟೀಲ್‌‌ ಎಂಬುವರು ಮನೆ ಕಟ್ಟುವುದಕ್ಕಾಗಿ ಸಾಲ ಪಡೆಯಲು ಬ್ಯಾಂಕ್​ಗೆ ಹೋಗಿದ್ದರು.
..ಮುಂದೆ ಓದಿ

ದಾಖಲೆ ಸೃಷ್ಟಿಸಿದ್ದ ಬಿ. ಫೌಝಿಯಾ ತರನಮ್ ಈಗ ಕೊಪ್ಪಳ ಜಿ.ಪಂ. ಸಿಇಒ

ವಿಜಯ ಪರ್ವ ಸುದ್ದಿ | ಕೊಪ್ಪಳ

ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ (ಸಿಇಒ) ಹಾಗೂ ತೋಟಗಾರಿಕಾ ಇಲಾಖೆಯ ನಿರ್ದೇಶಕಿಯಾಗಿದ್ದ ಬಿ. ಫೌಝಿಯಾ ತರನಮ್‌ ಈಗ ಕೊಪ್ಪಳ ಜಿ.ಪಂ. ಸಿಇಒ ಆಗಿ ಬಂದಿದ್ದಾರೆ. ಚಿಕ್ಕಬಳ್ಳಾಪುರ ಜಿ.ಪಂ. ಸಿಇಒ ಆಗುವುದಕ್ಕೂ ಮುನ್ನ ಫೌಝಿಯಾ ಅವರು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತೆಯಾಗಿದ್ದರು.

2015 ನೇ ಬ್ಯಾಚಿನ ಈ ಐಎಎಸ್ ಅಧಿಕಾರಿ 31ನೇ ರ‍್ಯಾಂಕ್‌ ಪಡೆದ ಪ್ರತಿಭಾವಂತೆ...ಮುಂದೆ ಓದಿ

ಸುಮ್ಮನಿರದೇ ಇರುವೆ ಬಿಟ್ಟುಕೊಂಡಂತಾಯ್ತು ಸಂಸದ ಸಂಗಣ್ಣ ಕರಡಿ ತಕರಾರು

ವಿಜಯ ಪರ್ವ | ಕೊಪ್ಪಳ

ಒಂದೆಡೆ ನಿರಂತರವಾಗಿ ಏರುತ್ತಿರುವ ತೈಲ ಹಾಗೂ ಅಡುಗೆ ಅನಿಲದ ಬೆಲೆಗಳು; ಇನ್ನೊಂದೆಡೆ ಜನರನ್ನು ಹಿಂಡಿ ಹೈರಾಣಾಗಿಸಿರುವ ಕೊರೊನಾ ಸೋಂಕು- ಇಂತಹ ಜ್ವಲಂತ ಸಮಸ್ಯೆಗಳಿಗೆ ನೈಜ ಸ್ಪಂದನೆ ತೋರದ ಜನಪ್ರತಿನಿಧಿಯೊಬ್ಬರು, ದಾಸಶ್ರೇಷ್ಠರ ಮೂರ್ತಿ ಸ್ಥಾಪನೆಗೆ ಸಂಬಂಧಿಸಿದಂತೆ ಅನಗತ್ಯ ತಕರಾರು ತೆಗೆಯುವ ಮೂಲಕ ತೀವ್ರ ಖಂಡನೆಗೆ ಗುರಿಯಾಗಿದ್ದಾರೆ.

ಕೊಪ್ಪಳದ ಬಿಜೆಪಿ ಸಂಸದ ಸಂಗಣ್ಣ ಕರಡಿಯವರೇ ಆ ಜನಪ್ರತಿನಿಧಿ...ಮುಂದೆ ಓದಿ

ಕೊಪ್ಪಳದ ಪಿಎಸ್‌ಐ ಹುದ್ದೆಯ ಅಧಿಕಾರಿಗಳಿಗೆ ಕರ್ತವ್ಯ ಮರುಹಂಚಿಕೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಪಿಎಸ್‌ಐ ಹುದ್ದೆಗಳನ್ನು ಮರುಗೊತ್ತುಪಡಿಸಿ, ಸದರಿ ಹುದ್ದೆಗಳ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಮರುನಿಗದಿಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ಆದೇಶ ಹೊರಡಿಸಿದ್ದಾರೆ.

ಆ ಪ್ರಕಾರ:

  1. ಈ ಮುಂಚೆ ಇದ್ದ ಪಿಎಸ್‌ಐ (ಕ್ರೈಮ್)‌ ಹುದ್ದೆ ರದ್ದಾಗಿದೆ. ಅದರ ಬದಲು, ಆ ಹುದ್ದೆಯನ್ನು ಪಿಎಸ್‌ಐ (ಇನ್ವೆಸ್ಟಿಗೇಶನ್)‌‌ ಅಂದರೆ, ಪಿಎಸ್ಐ (ವಿಚಾರಣೆ) ಎಂದು ಮರುನಾಮಕರಣ ಮಾಡಲಾಗಿದ್ದು, ಅದಕ್ಕೆ ತಕ್ಕಂತೆ ಕರ್ತವ್ಯಗಳನ್ನು ವಿಧಿಸಲಾಗಿದೆ. 
..ಮುಂದೆ ಓದಿ

ಗುನ್ನಳ್ಳಿಯ ಗವಿಯಲ್ಲಿ ಶಿಲಾಯುಗದ ಚಿತ್ರಗಳು ಪತ್ತೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ತಾಲೂಕಿನ ಗುನ್ನಳ್ಳಿ ಗ್ರಾಮದ ಚಿಲಕನಮಟ್ಟಿ ಬೆಟ್ಟದಲ್ಲಿ ಶಿಲಾಯುಗ ಕಾಲದ ಗವಿಚಿತ್ರಗಳು ಮತ್ತು ಚಾರಿತ್ರಿಕ ಕಾಲದ ಬಣ್ಣದಲ್ಲಿ ಬರೆದ ಶಾಸನಗಳು ಪತ್ತೆಯಾಗಿವೆ. ಜಿಲ್ಲೆಯ ಇತಿಹಾಸ  ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ ಈ ಈ ಚಿತ್ರಿತ ನೆಲೆಯನ್ನು ಪರಿಶೋಧಿಸಿದ್ದಾರೆ.   

ಕೊಪ್ಪಳ ನಗರದಿಂದ ನೈರುತ್ಯಕ್ಕೆ ಸುಮಾರು 10 ಕಿ.ಮೀ. ‌ದೂರದಲ್ಲಿ ಗುನ್ನಳ್ಳಿ ಗ್ರಾಮವಿದೆ...ಮುಂದೆ ಓದಿ