ದಲಿತ ಯುವಕನಿಗೆ ಬೆದರಿಕೆ ಒಡ್ಡಿದ ಪ್ರಕರಣ | ಸಿಪಿಐ ಉದಯರವಿ ತಪ್ಪಿತಸ್ಥ: ವರದಿ

ವಿಜಯ ಪರ್ವ | ಕೊಪ್ಪಳ

ಕೊನೆಗೂ ನಿಷ್ಪಕ್ಷಪಾತ ವರದಿಯೊಂದು ಕೊಪ್ಪಳ ಜಿಲ್ಲೆಯ ಪೊಲೀಸ್‌ ಇಲಾಖೆಯಿಂದ ಬಂದಿದೆ. ಕೊಪ್ಪಳದ ದಲಿತ ಸಂಘಟಕ ಮಲ್ಲಿಕಾರ್ಜುನ್‌ ಪೂಜಾರ್‌ ಅವರಿಗೆ ದೂರವಾಣಿಯಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಉದಯರವಿ ತಪ್ಪಿತಸ್ಥ ಎಂದು ಘೋಷಿಸಲಾಗಿದೆ. ಸದರಿ ಪ್ರಕರಣ ಕುರಿತು ವಿಜಯ ಪರ್ವ ವಿಸ್ತೃತವಾಗಿ ವರದಿ ಮಾಡಿತ್ತು. 

ಇದೇ ಜೂನ್‌ 1 ಮಧ್ಯಾಹ್ನ 1.03 ಕ್ಕೆ ಮಲ್ಲಿಕಾರ್ಜುನ ಪೂಜಾರ್‌ ಅವರಿಗೆ ಕರೆ ಮಾಡಿದ್ದ ಉದಯರವಿ ಅವರು ತಮ್ಮ ಪರಿಚಯ ಹೇಳಿಕೊಂಡು, ಗಂಗಾವತಿಯ ಗ್ರಾಮೀಣ ಸಿಪಿಐ ಠಾಣೆಗೆ ಬರುವಂತೆ ಸೂಚಿಸುತ್ತಾರೆ...ಮುಂದೆ ಓದಿ

ಪೊಲೀಸ್‌ ಠಾಣೆಯಲ್ಲೇ ನಡೀತು ಸೀಮಂತ ಕಾರ್ಯ

ವಿಜಯಪರ್ವ ಸುದ್ದಿ | ಕೊಪ್ಪಳ

ಪೊಲೀಸ್ ಠಾಣೆ ಅಂದ್ರೆ ಸಾಕು ಸದಾ ಕಳ್ಳರು ಖದೀಮರಿಂದ ತುಂಬಿರುವ ಕಚೇರಿ ಎಂಬುದು ಜನ ಸಾಮಾನ್ಯರ ಕಲ್ಪನೆ. ಆದ್ರೆ, ಇಂದು ಕೊಪ್ಪಳ ತಾಲೂಕು ಅಳವಂಡಿ ಪೊಲೀಸ್ ಠಾಣೆ ವಿಭಿನ್ನವಾಗಿ ಕಂಡು ಬಂತು. ಅಳವಂಡಿ ಪೊಲೀಸ್ ಠಾಣೆಯಲ್ಲಿ ಇಂದು ಹಬ್ಬದ ವಾತಾವರಣ ಕಂಡು ಬಂತು.

ಏನಿದು ಎಂದು ಪ್ರಶ್ನಿಸಿದ ಜನರಿಗೆ ಅಲ್ಲಿನ ಸಿಬ್ಬಂದಿ ಸೀಮಂತ ಕಾರಣ ನಡೆಯುತ್ತಿದೆ ಅಂತಾ ಹೇಳಿದ್ದು ಅಚ್ಚರಿ ಮೂಡಿಸಿತ್ತು.… ..ಮುಂದೆ ಓದಿ

ಎಸ್ಪಿ ಅವರನ್ನೇ ಆಟವಾಡಿಸುವ ಸಿಪಿಐ: ಮಾಜಿ ಸಚಿವ ತಂಗಡಗಿ ಆರೋಪ

ವಿಜಯ ಪರ್ವ ಸುದ್ದಿ | ಕೊಪ್ಪಳ

ಸಿಪಿಐ ದರ್ಜೆಯ ಒಬ್ಬ ಅಧಿಕಾರಿ ಕೊಪ್ಪಳ ಎಸ್ಪಿಯವರನ್ನೇ ಆಟವಾಡಿಸ್ತಾ ಇದ್ದಾನೆ ಅನಿಸುತ್ತಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.

ಕೊಪ್ಪಳದಲ್ಲಿ ಇಂದು (30-7-2021) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಸ್ಥಿತಿ ಹೀಗಿರುವಾಗ, ಎಸ್ಪಿಯವರಿಗೆ ಬೆದರಿಕೆ ಹಾಕಿ, ಭಯ ಹುಟ್ಟಿಸಿ, ಬ್ಲಾಕ್ ಮೇಲ್ ಮಾಡುತ್ತಿರುವ ಆ ಅಧಿಕಾರಿಯ ಮೇಲೆ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು...ಮುಂದೆ ಓದಿ

ಕೊಪ್ಪಳ ಪೊಲೀಸರಿಗೆ ಸಿಕ್ಕಿಬಿದ್ದ ಬೈಕ್ ಕಳ್ಳ

ವಿಜಯ ಪರ್ವ ಸುದ್ದಿ | ಕೊಪ್ಪಳ

ಬೈಕುಗಳನ್ನು ಕಳ್ಳತನ ಮಾಡಿಕೊಂಡು ಶೋಕಿ ಮಾಡುತ್ತಿದ್ದ ಖದೀಮನೊಬ್ಬ ಕೊಪ್ಪಳ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ನಗರದ ಜಿಲ್ಲಾ ಕ್ರೀಡಾಂಗಣದ ಬಳಿ ಗದಗ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಪಿಎಸ್ಐ ಮಹಾಂತಪ್ಪ ಮೇಟಿ ಅವರು ಗದಗ ಕಡೆಯಿಂದ ಬರುತ್ತಿದ್ದ ವಾಹನ ಸವಾರನೊಬ್ಬನಿಗೆ ಬೈಕ್ ನಿಲ್ಲಿಸುವಂತೆ ಕೈಸನ್ನೆ ಮಾಡುತ್ತಾರೆ. ಈ ಸಂದರ್ಭದಲ್ಲಿ ವಿಚಲಿತನಾದ ಬೈಕ್ ಸವಾರ ಬೈಕ್ ನಿಲ್ಲಿಸದೆ ವೇಗವಾಗಿ ಚಲಾಯಿಸಿಕೊಂಡು ಹೋಗುತ್ತಾನೆ...ಮುಂದೆ ಓದಿ