ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಪ್ರತಿಭಟನಾಕಾರರ ಬಂಧನ, ಬಿಡುಗಡೆ

ವಿಜಯಪರ್ವ ಸುದ್ದಿ, ಕೊಪ್ಪಳ
ಮರಾಟ ಪ್ರಾಧಿಕಾರ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಕೊಪ್ಪಳದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.
ಬೆಳಗ್ಗೆ 5 ಗಂಟೆಯಿಂದಲೇ ಕನ್ನಡ ಪರ ಸಂಘಟನೆ ಕಾರ್ಯಕರ್ತರು ಹೋರಾಟಕ್ಕೆ ಮುಂದಾಗಿದ್ದರು. ಟೈರ್ ಗೆ ಬೆಂಕಿ ಹಚ್ಚಿ‌, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕೃತಿ ಸಹಿಸಿ ಆಕ್ರೋಶ ವ್ಯಕ್ತಪಡಿಸಿದರು.‌‌ ಬೆಳಗಿನ ಜಾವ ಹೋರಾಟಗಾರರಿಗಿಂತ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದದ್ದು‌ ಕಂಡು ಬಂತು.…
..ಮುಂದೆ ಓದಿ

ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಹೆದ್ದಾರಿ ತಡೆ

ವಿಜಯಪರ್ವ ಸುದ್ದಿ, ಕೊಪ್ಪಳ
ಎಪಿಎಂಸಿ ತಿದ್ದುಪಡಿ ಕಾಯ್ದೆ ಸೇರಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ‌ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ಕೊಪ್ಪಳದಲ್ಲಿ ಹೆದ್ದಾರಿ ತಡೆ ನಡೆಸಲಾಯಿತು.

ಅಖಿಲ ಭಾರತ ರೈತ ಸಂಘರ್ಷ ಸಮಿತಿ ಕರೆ ಹಿನ್ನೆಲೆಯಲ್ಲಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ, ಕರ್ನಾಟಕ ರೈತ ಪ್ರಾಂತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಜಿಲ್ಲಾಡಳಿತ ಭವನದ ಮುಂದೆ ಎನ್ ಎಚ್63ರಲ್ಲಿ ರಸ್ತೆ ತಡೆ ನಡೆಸಲಾಯಿತು.… ..ಮುಂದೆ ಓದಿ

ಗೆಳೆಯನ ಲವ್‌ ಮಾಡು ಎಂದವನಿಗೆ ಮಹೂರ್ತ ಇಟ್ಟರು; 6 ತಿಂಗಳ ನಂತರ ಆರೋಪಿಗಳು ಅಂದರ್

ವಿಜಯಪರ್ವ ಸುದ್ದಿ, ಕೊಪ್ಪಳ
ಪ್ರೀತ್ಸೆ ಅಂತಾ ಪ್ರಾಣ ತಿನ್ನೋ‌ ಹುಡುಗರು ಆ ಹುಡುಗಿಯ ಅಣ್ಣ-ತಮ್ಮಂದಿರಿಂದ ಗೂಸ ತಿನ್ನೋದು ಸಾಮಾನ್ಯ. ಆದ್ರೆ,‌ ಇಲ್ಲಿ ತನ್ನ ಗೆಳೆಯನನ್ನು ಪ್ರೀತಿ ಮಾಡು ಅಂತಾ ಹಿಂದೆ ಬಿದ್ದವನಿಗೆ ಯುವತಿಯ ಸಹೋದರರು ಮೂಹರ್ತ ಇಟ್ಟು ಮುಗಿಸಿದ್ದಾರೆ. ಬರೋಬ್ಬರಿ 6 ತಿಂಗಳ ನಂತ್ರ ಪೊಲೀಸರು ಆರೋಪಿಗಳನ್ನು ಅಂದರ್ ಮಾಡಿದ್ದಾರೆ.

ಕಳೆದ ಏಪ್ರೀಲ್ 15 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಚಳ್ಳಾರಿ ಗ್ರಾಮದಲ್ಲಿ 18 ವರ್ಷದ ರಮೇಶ ಪೊಲೀಸ್ ಪಾಟೀಲ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.… ..ಮುಂದೆ ಓದಿ

ಕಾರಟಗಿ ದಂಪತಿ ಕೊಲೆ ಪ್ರಕರಣ; ಚಿಲ್ಲರೆ ಹಣಕ್ಕೆ‌ ಸುಪಾರಿ ಕೊಟ್ಟಿದ್ದ ಮೃತಳ ತಮ್ಮ; ಎಸ್ಪಿ ಟಿ.ಶ್ರೀಧರ ಸುದ್ದಿಗೋಷ್ಠಿ

ವಿಜಯಪರ್ವ ಸುದ್ದಿ, ಕೊಪ್ಪಳ
ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ದಂಪತಿ ಮೇಲೆ ಹಲ್ಲೆ‌, ಮಹಿಳೆ ಸ್ಥಳದಲ್ಲೇ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬುಧವಾರ ನ್ಯಾಯಾಂಗ ಬಂಧನಕ್ಕೆ ನೀಡಿದರು.

ಕೊಪ್ಪಳದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಎಸ್ಪಿ ಟಿ.ಶ್ರೀಧರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೃತ ಮಹಿಳೆ ತಮ್ಮ ಅವಿನಾಶ ಚಂದನಶಿವ, ಸಂಬಂಧಿ ಯುವರಾಜ ನಿಂಬಾಳ್ಳರ ಬಂಧಿತ ಆರೋಪಿಗಳು.… ..ಮುಂದೆ ಓದಿ

ನಗದು, ಚಿನ್ನಾಭರಣ ಕಳ್ಳತನ; 24 ಗಂಟೆ ಒಳಗೆ ಆರೋಪಿಗಳ ಬಂಧನ

ವಿಜಯಪರ್ವ ಸುದ್ದಿ, ಕುಕನೂರು
ಜಿಲ್ಲೆಯ ಕುಕನೂರು ತಾಲೂಕು ತಳಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು 24 ಗಂಟೆ ಒಳಗೆ ಪತ್ತೆ ಮಾಡಿದ್ದಾರೆ.

ಆರೋಪಿಗಳು ಮನೆಯೊಂದರಲ್ಲಿ ಸುಮಾರು 3,16,500 ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದರು.‌ ಕುಕನೂರು ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಶಿವಯೋಗೆಪ್ಪ ಅಲಿಯಾಸ್ ಶಿವು ತಂದೆ ಶೇಖಪ್ಪ ಸುರತಾನಿ (25) ಎಂದು ಗುರುತಿಸಲಾಗಿದೆ.… ..ಮುಂದೆ ಓದಿ

ಅಡ್ಡಪಲ್ಲಕ್ಕಿ ಉತ್ಸವ ಘರ್ಷಣೆ ಪ್ರಕರಣ; 50 ಭಕ್ತರು ನ್ಯಾಯಾಂಗ ಬಂಧನಕ್ಕೆ

ವಿಜಯಪರ್ವ ಸುದ್ದಿ, ಕೊಪ್ಪಳ
ಕೋವಿಡ್-19 ಮಾರ್ಗಸೂಚಿ ಲೆಕ್ಕಿಸದೇ ಪವಾಡ ಪುರುಷರ ಅಡ್ಡಪಲ್ಲಕ್ಕಿ ಉತ್ಸವ ನಡೆಸಿ, ಪೊಲೀಸ್ ಜೀಪ್ ಜಖಂ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 50 ಭಕ್ತರನ್ನು ಪೊಲೀಸರು ಬಂಧಿಸಿದ್ದಾರೆ.‌ ದೋಟಿಹಾಳ ಹಾಗೂ ಸುತ್ತಲಿನ ಗ್ರಾಮಗಳ 50 ಜನರ ವಿರುದ್ಧ ಕುಷ್ಟಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ದೋಟಿಹಾಳ ಗ್ರಾಮದ ಸುಕಮುನಿ ತಾತನವರ ಅಡ್ಡಪಲ್ಲಕ್ಕಿ ಉತ್ಸವ ಗುರುವಾರ ರಾತ್ರಿ ನಡೆಯಬೇಕಿತ್ತು.… ..ಮುಂದೆ ಓದಿ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:18-08-2020 @ 8.30Am)

ವಿಜಯಪರ್ವ ಮಾಹಿತಿ, ಹೊಸಪೇಟೆ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:18-08-2020 @ 8.30Am)

ಡ್ಯಾಂ ಸಾಮರ್ಥ್ಯ: 100.860 ಟಿಎಂಸಿ
ಇಂದಿನ ಸಂಗ್ರಹ: 97.970 ಟಿಎಂಸಿ
ಒಳ‌ ಹರಿವು: 39430 ಕ್ಯೂಸೆಕ್
ಹೊರ ಹರಿವು: 49439 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ
ಡ್ಯಾಂ ಸಾಮರ್ಥ್ಯ: 100.855 ಟಿಎಂಸಿ
ಇಂದಿನ ಸಂಗ್ರಹ: 100.855 ಟಿಎಂಸಿ
ಒಳ‌ ಹರಿವು: 78724 ಕ್ಯೂಸೆಕ್
ಹೊರ ಹರಿವು: 78436 ಕ್ಯೂಸೆಕ

+1
..ಮುಂದೆ ಓದಿ

ಎಸ್ಪಿ ಸ್ವಿಂಗ್ ಬಾಲ್; ಕೊಪ್ಪಳ ಡಿವೈಎಸ್ಪಿ, ಇಬ್ಬರು ಪಿಎಸ್ಐಗಳ ವಾಹನ ಚಾಲಕರ ವರ್ಗಾವಣೆ

ವಿಜಯಪರ್ವ ಸುದ್ದಿ, ಕೊಪ್ಪಳ:
ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ನಡುವಿನ ಶೀತಲ ಸಮರ ಮುಂದುವರೆದಿದೆ. ಸಮರದ ಭಾಗವಾಗಿ ಮೂವರು ಅಧಿಕಾರಿಗಳ ಜೀಪ್ ಡ್ರೈವರ್ ಗಳು ವರ್ಗಾವಣೆಗೊಂದಿದ್ದಾರೆ. ಕೊಪ್ಪಳ ಡಿವೈಎಸ್ಪಿ ವಾಹನ ಚಾಲಕ ಚಂದ್ರಶೇಖರ್ ದಂಡಿನ, ಮುನಿರಾಬಾದ್ ಪಿಎಸ್ಐ ವಾಹನ ಚಾಲಕ ಶಿವಕುಮಾರ ಹಾಗೂ ಕೊಪ್ಪಳ ಗ್ರಾಮೀಣ ಠಾಣೆ ಪಿಎಸ್ಐ ವಾಹನ ಚಾಲಕ ಮಹಾಂತೇಶ ಕಾಟಾಪೂರ ಅವರನ್ನು ಡಿಎಆರ್ ಘಟಕದ ವಾಹನ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ.…
..ಮುಂದೆ ಓದಿ

2 ವರ್ಷದಿಂದ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ ದಾಳಿ

ವಿಜಯಪರ್ವ ಸುದ್ದಿ, ಕೊಪ್ಪಳ:
ಜಿಲ್ಲೆಯ ಕನಕಗಿರಿ ತಾಲೂಕು ವ್ಯಾಪ್ತಿಯ ವಿಠಲಾಪೂರ ಗ್ರಾಮದ ಸೀಮಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಇಸ್ಪೀಡ್ ಅಡ್ಡ ಮೇಲೆ ದಾಳಿ ಮಾಡಿರುವ ಪೊಲೀಸರು ನಗದು ಮತ್ತು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ನಾಲ್ವರು ಜೂಜುಕೋರರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ದಾಳಿ ವೇಳೆ 4 ಲಕ್ಷ 65 ಸಾವಿರದ ಮೂರು ನೂರು‌ ರೂಪಾಯಿ ನಗದು ಮತ್ತು ಸುಮಾರು 38 ಲಕ್ಷ ರೂಪಾಯಿ ಮೌಲ್ಯದ 17 ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.…
..ಮುಂದೆ ಓದಿ

error: Content is protected !!