ದಲಿತ ಯುವಕನಿಗೆ ಬೆದರಿಕೆ ಒಡ್ಡಿದ ಪ್ರಕರಣ | ಸಿಪಿಐ ಉದಯರವಿ ತಪ್ಪಿತಸ್ಥ: ವರದಿ

ವಿಜಯ ಪರ್ವ | ಕೊಪ್ಪಳ

ಕೊನೆಗೂ ನಿಷ್ಪಕ್ಷಪಾತ ವರದಿಯೊಂದು ಕೊಪ್ಪಳ ಜಿಲ್ಲೆಯ ಪೊಲೀಸ್‌ ಇಲಾಖೆಯಿಂದ ಬಂದಿದೆ. ಕೊಪ್ಪಳದ ದಲಿತ ಸಂಘಟಕ ಮಲ್ಲಿಕಾರ್ಜುನ್‌ ಪೂಜಾರ್‌ ಅವರಿಗೆ ದೂರವಾಣಿಯಲ್ಲಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಉದಯರವಿ ತಪ್ಪಿತಸ್ಥ ಎಂದು ಘೋಷಿಸಲಾಗಿದೆ. ಸದರಿ ಪ್ರಕರಣ ಕುರಿತು ವಿಜಯ ಪರ್ವ ವಿಸ್ತೃತವಾಗಿ ವರದಿ ಮಾಡಿತ್ತು. 

ಇದೇ ಜೂನ್‌ 1 ಮಧ್ಯಾಹ್ನ 1.03 ಕ್ಕೆ ಮಲ್ಲಿಕಾರ್ಜುನ ಪೂಜಾರ್‌ ಅವರಿಗೆ ಕರೆ ಮಾಡಿದ್ದ ಉದಯರವಿ ಅವರು ತಮ್ಮ ಪರಿಚಯ ಹೇಳಿಕೊಂಡು, ಗಂಗಾವತಿಯ ಗ್ರಾಮೀಣ ಸಿಪಿಐ ಠಾಣೆಗೆ ಬರುವಂತೆ ಸೂಚಿಸುತ್ತಾರೆ...ಮುಂದೆ ಓದಿ