ಟಿಸಿ ಶಾರ್ಟ್ ಸರ್ಕಿಟ್; ಸುಟ್ಟು ಕರಕಲಾದ ಗೃಹ ಉಪಯೋಗಿ ವಿದ್ಯುತ್ ಉಪಕರಣ

ವಿಜಯಪರ್ವ ಸುದ್ದಿ‌ | ಕೊಪ್ಪಳ

ಟ್ರಾನ್ಸಫಾರ್ಮರ್ (ಟಿಸಿ)ಯಲ್ಲಿ ಉಂಟಾದ ಶಾರ್ಟ್ ಸರ್ಕಿಟ್ ನಿಂದ ಗೃಹ ಉಪಯೋಗಿ ವಿದ್ಯುತ್ ಉಪಕರಣ ಸುಟ್ಟು ಕರಕಲಾದ ಘಟನೆ ಇರಕಲ್ಲಗಡ ಗ್ರಾಮದಲ್ಲಿ ನಡೆದಿದೆ.‌

ಕೊಪ್ಪಳ ತಾಲೂಕು ಇರಕಲ್ಲಗಡ ಗ್ರಾಮದಲ್ಲಿನ ಸುಮಾರು ಐದಾರು ಮನೆಯಲ್ಲಿ ಟಿವಿ ಮತ್ತು ಸರ್ಕಾರಿ ಪದವಿ ಕಾಲೇಜಿನಲ್ಲಿನ ಝರಾಕ್ಸ್ ಯಂತ್ರ ಸೇರಿ ಲಕ್ಷಂತರ ‌ರೂಪಾಯಿ ಮೌಲ್ಯದ ಉದ್ಯುತ್ ಚಾಲಿತ ಉಪಕರಣ ಸುಟ್ಟು ಕರಕಲಾಗಿವೆ.… ..ಮುಂದೆ ಓದಿ

TB DAM ನೀರಿನ ಮಟ್ಟ‌ (ದಿನಾಂಕ:27-07-2021 @ 8.30Am)

ವಿಜಯಪರ್ವ ಮಾಹಿತಿ, ಹೊಸಪೇಟೆ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:27-07-2021 @ 8.30Am)

ಡ್ಯಾಂ ಸಾಮರ್ಥ್ಯ: 101.00  ಟಿಎಂಸಿ
ಇಂದಿನ ಸಂಗ್ರಹ: 95.531 ಟಿಎಂಸಿ
ಒಳ‌ ಹರಿವು: 148453 ಕ್ಯೂಸೆಕ್
ಹೊರ ಹರಿವು: 130913 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ:
ಡ್ಯಾಂ ಸಾಮರ್ಥ್ಯ: 101.00 ಟಿಎಂಸಿ
ಇಂದಿನ ಸಂಗ್ರಹ: 39.320 ಟಿಎಂಸಿ
ಒಳ‌ ಹರಿವು: 8810 ಕ್ಯೂಸಕ್
ಹೊರ ಹರಿವು: 1431 ಕ್ಯೂಸೆಕ್
+2
..ಮುಂದೆ ಓದಿ

TB DAM ನೀರಿನ ಮಟ್ಟ‌ (ದಿನಾಂಕ:25-07-2021 @ 8.30Am)

ವಿಜಯಪರ್ವ ಮಾಹಿತಿ, ಹೊಸಪೇಟೆ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:25-07-2021 @ 8.30Am)

ಡ್ಯಾಂ ಸಾಮರ್ಥ್ಯ:101.00  ಟಿಎಂಸಿ
ಇಂದಿನ ಸಂಗ್ರಹ: 83.277ಟಿಎಂಸಿ
ಒಳ‌ ಹರಿವು: 143477 ಕ್ಯೂಸೆಕ್
ಹೊರ ಹರಿವು: 9331 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ:
ಡ್ಯಾಂ ಸಾಮರ್ಥ್ಯ: 101.00 ಟಿಎಂಸಿ
ಇಂದಿನ ಸಂಗ್ರಹ: 37.978ಟಿಎಂಸಿ
ಒಳ‌ ಹರಿವು: 15512 ಕ್ಯೂಸಕ್
ಹೊರ ಹರಿವು: 201 ಕ್ಯೂಸೆಕ್

+4
..ಮುಂದೆ ಓದಿ

ಮದ್ಯ ಅಕ್ರಮ ಸಾಗಣೆ; ಅಳವಂಡಿ ಪೊಲೀಸರ ದಾಳಿ – ಮದ್ಯ, ನಗದು ವಶ

ವಿಜಯಪರ್ವ ಸುದ್ದಿ‌ | ಕೊಪ್ಪಳ

ತಾಲೂಕಿನ ಕವಲೂರು ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ರೂ. 22,666 ಮೌಲ್ಯದ ಮದ್ಯ ಹಾಗೂ ರೂ. 1,78,000 ನಗದು ಹಣವನ್ನು ಅಳವಂಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕವಲೂರು ಗ್ರಾಮದಲ್ಲಿ ಒಂದು ಟಾಟಾ ಇಂಡಿಕಾ ಕಾರಿನಲ್ಲಿ ಅಕ್ರಮವಾಗಿ ಮದ್ಯ ಹಾಗೂ ಹಣ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಪಿಎಸ್ಐ ಮಾರ್ತಂಡಪ್ಪ, ಎಚ್.ಸಿ.… ..ಮುಂದೆ ಓದಿ

ತಮ್ಮ ಹೊಲಸನ್ನು ನಮ್ಮ ಮೇಲೆ ಎರಚುವ ಕೆಲಸ ಮಾಡುತ್ತಿದೆ ಬಿಜೆಪಿ: ತಂಗಡಗಿ

ವಿಜಯಪರ್ವ ಸುದ್ದಿ | ಕೊಪ್ಪಳ

ಬಿಜೆಪಿ ತಮ್ಮಲ್ಲಿರುವ ಹೊಲಸನ್ನು ಕಾಂಗ್ರೆಸ್ ಮೇಲೆ ಎರಚುವ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಗುಡುಗಿದರು‌.

ಕೊಪ್ಪಳದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕೂಡ ಬಿಎಸ್ ವೈ ಎಂಜಲು ತಿನ್ನುತ್ತಿದೆ ಎಂಬ ಬಸನಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಸನಗೌಡ ತಮ್ಮ ಪಕ್ಷದ ಹೊಲಸನ್ನು ನಮ್ಮ ಮೇಲೆ ಎಸೆಯುತ್ತಿದ್ದಾರೆ.… ..ಮುಂದೆ ಓದಿ

ಕೃಷಿ ಹೊಂಡಕ್ಕೆ ಹಾರಿ, ನಾಲ್ವರು ಮಕ್ಕಳ ಸಮೇತ ದಂಪತಿ ಆತ್ಮಹತ್ಯೆ

ವಿಜಯಪರ್ವ ಸುದ್ದಿ | ಯಾದಗಿರಿ

ಒಂದೇ ಕುಟುಂಬದ ಆರು ಸದಸ್ಯರು, ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಭೀಮರಾಯ ಎಂಬಾತ ತನ್ನ ಪತ್ನಿ ಶಾಂತಮ್ಮ ಜೊತೆಗೆ ತನ್ನ ನಾಲ್ವರು ಮಕ್ಕಳಾದ ಸುಮಿತ್ರಾ, ಶ್ರೀದೇವಿ, ಲಕ್ಷ್ಮೀ, ಶಿವರಾಜ ಜೊತೆ ತನ್ನದೆ ಹೊಲದ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.… ..ಮುಂದೆ ಓದಿ

ರಾಜ್ಯದ 16 ಡಿವೈಎಸ್ಪಿ ವರ್ಗಾವಣೆ; ವೆಂಕಟಪ್ಪ ನಾಯಕ ಮೇಲುಗೈ

ವಿಜಯಪರ್ವ ಸುದ್ದಿ | ಕೊಪ್ಪಳ
ರಾಜ್ಯಾದ್ಯಂತ ಒಟ್ಟೂ 16 ಡಿವೈಎಸ್ಪಿಗಳನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

ಕರ್ನಾಟಕ ಲೋಕಾಯುಕ್ತದ ಕೆ.ವಿ.ಶ್ರೀನಿವಾಸ ಬೆಂಗಳೂರಿನ ಜಯನಗರ, ಅರುಣ್ ನಾಗೇಶಗೌಡ ಯಶವಂತಪೂರ, ವಿ.ಎಲ್.ರಮೇಶ ಕೆಹಿಎಫ್, ಕೆ.ಎಂ.ಸತೀಶ‌ ಬೀದರ್, ಬಸವೇಶ್ವರ ಚಿಂಚೊಳ್ಳಿ, ಮಲ್ಲೇಶ ದೊಡ್ಡಮನಿ ರಾಯಚೂರು ಉಪ‌ವಿಭಾಗ, ಈ.ಶಾಂತವೀರ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ, ಎಸ್.ವಿಜಯ ಪ್ರಸಾದ ಉಡುಪಿ‌ ಜಿಲ್ಲೆ ಕಾರ್ಕಳ, ಶಾಂತಮಲ್ಲಪ್ಪ ಸಿಐಡಿ, ಎಸ್.ಟಿ.ಶ್ರೀನಿವಾಸರೆಡ್ಡಿ… ..ಮುಂದೆ ಓದಿ

ಬಳ್ಳಾರಿ ವಲಯದ ಪಿಎಸ್ಐಗಳ ವರ್ಗಾವಣೆ

ವಿಜಯಪರ್ವ ಸುದ್ದಿ | ಕೊಪ್ಪಳ
ಬಳ್ಳಾರಿ ವಲಯ ವ್ಯಾಪ್ತಿಯ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ವಿವಿಧ ಠಾಣೆಗಳ 7 ಜನ ಪಿಎಸ್ಐ ಗಳನ್ನು ವರ್ಗಾವಣೆ ಮಾಡಿ ಬಳ್ಳಾರಿ ವಲಯದ ಪೊಲೀಸ್ ಮಹಾ ನಿರೀಕ್ಷಕ ನಂಜುಂಡಸ್ವಾಮಿ ಆದೇಶ ಹೊರಡಿಸಿದ್ದಾರೆ.

ನಿನ್ನೆಯಷ್ಟೇ ಐಜಿಪಿ ನಂಜುಂಡಸ್ವಾಮಿ ಅವರು ವರ್ಗಾವಣೆಯಾದ್ದು, ಅಧಿಕಾರ ಹಸ್ತಾಂತರಕ್ಕೂ ಮೊದಲು ವರ್ಗಾವಣೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.… ..ಮುಂದೆ ಓದಿ

ಭೈರಾಪುರದಲ್ಲಿ ಶ್ರೀರಾಮನ ಹೆಜ್ಜೆ ಗುರುತು!

ಕುಬೇರ ಮಜ್ಜಿಗಿ

ತಾಲೂಕಿನ ಅಳವಂಡಿ ಪಕ್ಕದ ಭೈರಾಪುರ ಒಂದು ಪುಟ್ಟ ಗ್ರಾಮ. ಈ ಗ್ರಾಮಕ್ಕೆ ರಾಮಾಯಣ ಕಾಲದ ನಂಟು ಇದೆ. ಇದು ಶ್ರೀರಾಮ ನಡೆದಾಡಿದ ಪುಣ್ಯಭೂಮಿಯೂ ಹೌದು. ಸ್ವತಃ ಶ್ರೀರಾಮನ ಪಾದದ ಗುರುತು ಇಲ್ಲಿ ಕಾಣಬಹುದು. ಈ ಪ್ರದೇಶದಲ್ಲಿ ಭೈರವ ಎಂಬ ಋಷಿಮುನಿ ವಾಸವಾಗಿದ್ದನಂತೆ. ಹಾಗಾಗಿ ಈ ಗ್ರಾಮಕ್ಕೆ ಮೊದಲು ಭೈರವಪುರ ಎಂದು ನಂತರ ಭೈರಾಪುರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.… ..ಮುಂದೆ ಓದಿ

ತಿರುಪತಿ ದೇವಸ್ಥಾನ ಟ್ರಸ್ಟ್‌ಗೆ ವಿದ್ಯಾದಾಸ್ ಬಾಬಾ, ಹನುಮ ಭಕ್ತರ ಪಂಥಾಹ್ವಾನ!

ತಿರುಪತಿ ದೇವಸ್ಥಾನ ಟ್ರಸ್ಟ್‌ಗೆ ವಿದ್ಯಾದಾಸ್ ಬಾಬಾ, ಹನುಮ ಭಕ್ತರ ಪಂಥಾಹ್ವಾನ!

ವಿಜಯಪರ್ವ ಸುದ್ದಿ, ಕೊಪ್ಪಳ
ಭಕ್ತ ಶ್ರೇಷ್ಠ ಹನುಮಂತ ಹುಟ್ಟಿದ್ದು ಆಂಧ್ರದಲ್ಲೋ? ಕರ್ನಾಟಕದಲ್ಲೋ ಟಿಟಿಡಿ ಹೊತ್ತಿಸಿದ ವಿವಾದದಿಂದ ಸದ್ಯ ಚರ್ಚೆಯಲ್ಲಿರೋ ವಿಷಯ ಇದು.

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನಲ್ಲಿನ ಅಂಜನಾದ್ರಿ ಬೆಟ್ಟವೇ ಹನುಮಂತ ಹುಟ್ಟಿದ ಸ್ಥಳ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಗಂಗಾವತಿ ಭಾಗವನ್ನು ಹನುಮ‌ ಹುಟ್ಟಿದ ನಾಡು ಎಂದೇ ಕರೆಯಲಾಗಿದೆ.‌… ..ಮುಂದೆ ಓದಿ