ಶಿಕ್ಷಕರ ನೇರ ನೇಮಕಾತಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ವಿರೋಧ

ವಿಜಯ ಪರ್ವ ವಿಶೇಷ

ರಾಜ್ಯ ಸರಕಾರ ಘೋಷಿಸಿರುವ 15,000 ಶಿಕ್ಷಕರ ನೇಮಕದ ಕೆಲವು ನಿಯಮಗಳಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ವಿರೋಧ ವ್ಯಕ್ತಪಡಿಸಿದೆ.

ಈ ಕುರಿತು ಸಂಘ ಇಂದು (14-12-2021) ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ, ತನ್ನ ವಿರೋಧವನ್ನು ಈ ರೀತಿ ಹೇಳಿದೆ:

ದಿನಾಂಕ: 10-12-2021 ರಂದು ರಾಜ್ಯ ಸರ್ಕಾರ ಪ್ರಕಟಿಸಿರುವ ಶಿಕ್ಷಕರ ನೇಮಕಾತಿ ಅಂತಿಮ ನಿಯಮಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದು, ತಕ್ಷಣ ಸೂಕ್ತ ಬದಲಾವಣೆಗಾಗಿ ಆಗ್ರಹಿಸುತ್ತಾ ಕೆಳಗಿನ ಬದಲಾವಣೆಗಾಗಿ ತೀವ್ರ ಒತ್ತಾಯಿಸುತ್ತಾ ಸರ್ಕಾರ ಸ್ಪಂದಿಸದಿದ್ದರೆ ಅನಿವಾರ್ಯವಾಗಿ ಶಿಕ್ಷಕರ ಸಂಘಟನೆ ಹೋರಾಟದ ದಾರಿಯನ್ನು ಹಿಡಿಯಬೇಕಾಗುತ್ತದೆ

ಶಿಕ್ಷಕರ ಸಂಘದ ಸ್ಪಷ್ಟ ಎಚ್ಚರಿಕೆ

ನಿಯಮ ಕ್ರಮಾಂಕ: 66 ಎ  

ಅಂತಿಮ ಕರಡು ನಿಯಮ: 1...ಮುಂದೆ ಓದಿ

ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಚುನಾವಣೆಯೇ ಅಸಿಂಧು: ದೂರು ಸಲ್ಲಿಕೆ

ಸಂಘದ ಚುನಾವಣೆಯೇ ಅಸಿಂಧು: ದೂರು ಸಲ್ಲಿಕೆ

ವಿಜಯ ಪರ್ವ ವಿಶೇಷ | ಕೊಪ್ಪಳ

2019-2024ನೇ ಸಾಲಿಗೆಂದು ಕರ್ನಾಟಕ ರಾಜ್ಯ ಸರಕಾರಿ ಗ್ರೇಡ್-‌1 ದೈಹಿಕ ಶಿಕ್ಷಣ ಶಿಕ್ಷಕರ ಸಂಘ (ರಿ) ತನ್ನ ಜಿಲ್ಲೆ ಮತ್ತು ತಾಲೂಕು ಘಟಕಗಳಿಗೆ ನಡೆದಿರುವ ಚುನಾವಣೆ ಅಸಿಂಧು ಎಂದು ಘೋಷಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ದೂರು ಸಲ್ಲಿಕೆಯಾಗಿದೆ. ಇದರಿಂದಾಗಿ, ಈಗ ನೇಮಕವಾಗಿರುವ ರಾಜ್ಯ, ಜಿಲ್ಲೆ ಮತ್ತು ತಾಲೂಕು ಪದಾಧಿಕಾರಿಗಳು ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿ ಎದುರಾಗಿದೆ...ಮುಂದೆ ಓದಿ

ನೊಂದ ಶಿಕ್ಷಕರಿಂದ ಹೀಗೊಂದು ಪತ್ರ

ಸರಕಾರದ ವರ್ಗಾವಣೆ ನೀತಿಯಿಂದ ನೊಂದ ಶಿಕ್ಷಕರು ಸಾಮಾಜಿಕ ತಾಣದಲ್ಲಿ ಬರೆದಿರುವ ಪತ್ರವಿದು. ಇದನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ. ಶಿಕ್ಷಕರ ಸಂಘದ ವಿರುದ್ಧ ತೀವ್ರ ಅಸಮಾಧಾನ ಇಲ್ಲಿ ವ್ಯಕ್ತವಾಗಿದ್ದು, ಒಂದು ಆರೋಗ್ಯಕರ ಚರ್ಚೆಗೆ ಇದು ನಾಂದಿಯಾಗಲಿ ಎಂಬ ಕಾಳಜಿ ನಮ್ಮದು. ಶಿಕ್ಷಕರ ಸಮಸ್ಯೆ ಬಿಂಬಿಸುವ ನಿಟ್ಟಿನಲ್ಲಿ ಮೂಡಿಬರಲಿರುವ ಸರಣಿಯ ಮೊದಲ ಭಾಗ ಇದು.

ಪ್ರಜ್ಞಾವಂತ ಸ್ವಾಭಿಮಾನಿ ಶಿಕ್ಷಕರಲ್ಲಿ ವಿನಂತಿ

ಸದಾ ಸಮಸ್ಯೆಗಳನ್ನು ಜೀವಂತವಾಗಿಡುತ್ತಿರುವ ಸಂಘದ ನಡೆ ಖಂಡಿಸಿ 2021ನೇ ಸಾಲಿನ ಸದಸ್ಯತ್ವ ಶುಲ್ಕ ಕಡಿತಗೊಳಿಸದಿರಲು ಶಿಕ್ಷಕರ ದಿಟ್ಟ ನಿರ್ಧಾರ

ಸಮಸ್ಯೆಗಳು

  1. ಕಳೆದ 10-15 ವರ್ಷಗಳಿಂದ ಪಾರದರ್ಶಕ ಮತ್ತು ಪ್ರಾಮಾಣಿಕ ಲೆಕ್ಕಾಚಾರಗಳಿಲ್ಲ
  2. ಪ್ರಾಮಾಣಿಕವಾಗಿ ಇವರಿಗೆ ಸದಸ್ಯತ್ವ ಶುಲ್ಕ ಕಡಿತಗೊಳಿಸಿದರೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕ್ತಾರೆ
  3. 1-8 ಗೆ ಹೋಗಿ 1-5 ಗೆ ಹಿಂಬಡ್ತಿ:ಆದರೆ ಇವರು ಮಾತ್ರ ನಿವೃತ್ತಿಯಾದರೂ ರಾಷ್ಟ್ರಮಟ್ಟದ ಹುದ್ದೆಗಳು& ನಿವೃತ್ತ ನೌಕರರ ಸಂಘದಲ್ಲೂ ಮೆರೆತಾರೆ
  4. ವರ್ಷಕ್ಕೊಮ್ಮೆ ವರ್ಗಾವಣೆ ಪ್ರಕ್ರಿಯೆ ಇಲ್ಲ:ಆದರೆ ಇವರು ತಮಗೆ ಬೇಕಾದ ಜಿಲ್ಲೆಗೆ ನಿಯೋಜನೆ ಹೋಗ್ತಾರೆ
  5. ಹೋರಾಟ ಇಲ್ಲ ಮತ್ತು ಅನೇಕ ಸಂಘಟನೆಗಳ ಹುಟ್ಟಿಗೆ ಕಾರಣ:ಆದರೆ ವಿರೋದಿಸ್ತಾರೆ ಅವರಿಗೆ ಸಂಘ ಬಿಟ್ಟು ಹೋಗಲು ಪ್ರೇರೇಪಿಸ್ತಾರೆ:ಹಿಂಬಾಲಕರಿಗೆ ಹುದ್ದೆ,ಪ್ರಶಸ್ತಿ ಕೊಡಿಸ್ತಾರೆ
  6. ಕೆಲವರಂತೂ ಶಿಕ್ಷಕರ ಸಮಸ್ಯೆಗಳಿಗಿಂತ ಬೇನಾಮಿ ಬಡ್ಡಿ ದಂಧೆ, ಬೇನಾಮಿ ಬ್ಯುಸಿನೆಸ್, ಬೇನಾಮಿ ಶಾಲೆ, ಬೇನಾಮಿ ರಿಯಲ್ ಎಸ್ಟೇಟ್ ಮಾಡ್ತಿರೋದನ್ನು ಕಣ್ಣಾರೆ ಕಂಡಿದ್ದೇವೆ
  7. ಎನ್ ಪಿ ಎಸ್ ವಿರುದ್ಧ ಹೋರಾಟ ಮಾಡಿದರೆ ಶಿಕ್ಷಕರನ್ನು ಎತ್ತಿಕಟ್ಟಿ ಅಲ್ಲಿಯೂ ಒಂದು ಸಂಘ ಮಾಡಿಸ್ತಾರೆ
  8. ಎಲ್ಲ ನೌಕರರಿಗೂ ವೇತನ ಏರಿದರೂ ಅದು ನಮ್ಮದೇ ಸಾಧನೆ ಅಂತಾರೆ ಆದರೆ SSA ದವರಿಗೆ ವೇತನ ಮಾತ್ರ ಸರಿಯಾಗಿ ದೊರೆಯುತಿಲ್ಲ
  9. ಸಂಘಕ್ಕೊಂದು ಸ್ವಂತ ಕಟ್ಟಡ, ಸ್ವಂತ ವಿದ್ಯಾಭವನ , ಸ್ವಂತ ಕಚೇರಿಗಳಿಲ್ಲ.
..ಮುಂದೆ ಓದಿ