ಶಾಸಕ ಬಸನಗೌಡ ಪಾಟೀಲ್ ಯತ್ನಾಳರದ್ದು ಅಶಿಸ್ತಿನ ಹೇಳಿಕೆ: ಸ್ವಪಕ್ಷೀಯ ಮಂತ್ರಿಯಿಂದ ಟಾಂಗ್!

ವಿಜಯಪರ್ವ ಸುದ್ದಿ, ಕೊಪ್ಪಳ

ರಾಜ್ಯದಲ್ಲಿ ಸದ್ಯ ಸಿಎಂ ಹುದ್ದೆ ಖಾಲಿ ಇಲ್ಲ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ನೀಡಿದ್ದು ಅಶಿಸ್ತಿನ ಹೇಳಿಕೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಹೇಳಿದರು.

ಕೊಪ್ಪಳದ ಕೋಳೂರಿನಲ್ಲಿ ಮಳೆಗೆ ಕೊಚ್ಚಿ ಹೋಗಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ಸ್ಥಳಕ್ಕೆ ಭೇಟಿ ನೀಡಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಷದಲ್ಲಿ ಇದ್ದುಕೊಂಡು ವರಿಷ್ಠರ ವಿರುದ್ಧ ಹೀಗೆ ಮಾತನಾಡುವುದು ಸರಿಯಲ್ಲ.… ..ಮುಂದೆ ಓದಿ

ಗಂಗಾವತಿಯಲ್ಲಿ ಕೃಷಿ ವಿವಿ ಸ್ಥಾಪಿಸಿ; ಜಿಲ್ಲಾ ಮಂತ್ರಿ ನೇತೃತ್ವದಲ್ಲಿ ಕೊಪ್ಪಳ ಶಾಸಕ, ಸಂಸದರಿಂದ ಸಿಎಂಗೆ ಪ್ರಸ್ತಾವನೆ

ವಿಜಯಪರ್ವ ಸುದ್ದಿ, ಬೆಂಗಳೂರು
ಕೊಪ್ಪಳ ಜಿಲ್ಲೆಯ ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಆವರಣದಲ್ಲಿ ನೂತನ ಕೃಷಿ ವಿಶ್ವ‌ವಿದ್ಯಾಲಯ ಸ್ಥಾಪಿಸಬೇಕು ಎಂದು ಕೊಪ್ಪಳ‌ ಜಿ‌ಲ್ಲಾ ಉಸ್ತುವಾರಿ ಹಾಗೂ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ನೇತೃತ್ವದಲ್ಲಿ ಶಾಸಕ, ಸಂಸದರು ಸಿಎಂ ಯಡಿಯೂರಪ್ಪ ಅವರಿಗೆ ಬುಧವಾರ ಪ್ರಸ್ತಾವನೆ ಸಲ್ಲಿಸಿದರು.

ಗಂಗಾವತಿ ತಾಲೂಕು ನೀರಾವರಿ ಮತ್ತು ಒಣಭೂಮಿ ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿನ ಮಣ್ಣು ಮತ್ತು ನೀರು ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಸೂಕ್ತವಾಗಿದೆ.… ..ಮುಂದೆ ಓದಿ

ಮಳೆ ಆರ್ಭಟ; ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಮಹಿಳೆಯರ ಶವ ಪತ್ತೆ

ವಿಜಯಪರ್ವ ಸುದ್ದಿ, ಯಲಬುರ್ಗಾ

ಜಿಲ್ಲಾದ್ಯಂತ ಕಳೆದ ನಾಲ್ಕು ದಿನದಿಂದ ಬಿಟ್ಟುಬಿಡದೆ ಸುರಿಯುತ್ತಿರೋ ಮಳೆಯಿಂದ ಸೆಪ್ಟೆಂಬರ್ 27ರ ಭಾನುವಾರ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ಇಬ್ಬರು ಮಹಿಳೆಯರು ಶವವಾಗಿ ಸೋಮವಾರ ಪತ್ತೆಯಾಗಿದ್ದಾರೆ.

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕು ಕರಮುಡಿ ಗ್ರಾಮದ ರತ್ನವ್ವ ಮಾನಶೆಟ್ಟಿ(48) ಹಾಗೂ ಶಾಂತವ್ವ ಮ್ಯಾಗೇರಿ(44) ಕೊಚ್ಚಿ ಹೋಗಿರುವ ಮಹಿಳೆಯರು ಶವವಾಗಿ ಪತ್ತೆಯಾಗಿದ್ದಾರೆ. ಹೊಲದ ಕೆಲಸ ಮುಗಿಸಿ ಸಂಜೆ ನಾಲ್ವರು ಮಹಿಳೆಯರು ಹಳ್ಳ ದಾಟಿ ಬರುವ ಅನಿವಾರ್ಯತೆ ಎದುರಾಗಿದೆ.… ..ಮುಂದೆ ಓದಿ

ಮಂಜುಳಾ ಪೂಜಾರಿ ಕೃಷಿ ಮಂತ್ರಿಗಳ ಕ್ಷಮೆ ಯಾಚಿಸಲಿ; ಬಸನಗೌಡ ಕಕ್ಕರಗೋಳ

ವಿಜಯಪರ್ವ‌ ಸುದ್ದಿ, ಕೊಪ್ಪಳ
ಬೆಂಗಳೂರಿನ‌ ವಿಧಾನಸೌಧದ ಮುಂದೆ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಕೃಷಿ ಮಂತ್ರಿಗಳ ಬಗ್ಗೆ ಹಗುರವಾಗಿ ಮಾತನಾಡಿರುವ ಮಂಜುಳಾ ಪೂಜಾರಿ ಅವರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಬಿ.ಸಿ.ಪಾಟೀಲ್ ಅಭಿಮಾನಿ ಬಳಗದ ಮುಖಂಡ ಬಸನಗೌಡ ಕಕ್ಕರಗೋಳ ಆಗ್ರಹಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, ರೈತ ಹೋರಾಟಗಾರ್ತಿ ಎಂದು ಹೇಳಿಕೊಂಡಿರುವ ಮಂಜುಳಾ ಅವರು ಕೃಷಿ ಮಂತ್ರಿ ಬಿ.ಸಿ.ಪಾಟೀಲ್‌… ..ಮುಂದೆ ಓದಿ

ಬಯಲಾಯ್ತು ಬಿಜೆಪಿ ಒಳಜಗಳ; ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಅಮರೇಶ ಕರಡಿ ಟಾಂಗ್!

ವಿಜಯಪರ್ವ ‌ಸುದ್ದಿ,‌ ಕೊಪ್ಪಳ
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಸಂಸದ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿ ಟಾಂಗ್ ಕೊಟ್ಟರಾ?

ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಪ್ರಧಾ‌ನಿ ನರೇಂದ್ರ ಮೋದಿ ಜನ್ಮ ದಿನದ ಹಿನ್ನೆಲೆ ಬಿಜೆಪಿ ಯುವ‌ ಮೋರ್ಚಾದ  ಕೊಪ್ಪಳ ಜಿಲ್ಲಾ ಘಟಕ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮ ಇಂಥಹದ್ದೊಂದು ಚರ್ಚೆ ಹುಟ್ಟುಹಾಕಿದೆ.… ..ಮುಂದೆ ಓದಿ

ಕಳಪೆ ಬೀಜ ಪತ್ತೆ ಪ್ರಕರಣದ ಕ್ರಮಕ್ಕೆ ಶಿಫಾರಸು; ಕೃಷಿ ಮಂತ್ರಿ ಬಿ.ಸಿ‌ ಪಾಟೀಲ್‌

ವಿಜಯಪರ್ವ ಸುದ್ದಿ, ಕೊಪ್ಪಳ
ರೈತರಿಗೆ ಕಳಪೆ ಬೀಜ, ಗೊಬ್ಬರ‌ ವಿತರಿಸಿದ ಪ್ರಕರಣ ಗಮನಕ್ಕೆ ಬಂದಿದ್ದು, ಪೂರೈಕೆಯಾದ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಪ್ರಯೋಗಾಲಯದ ವರದಿ ಬಂದಿದ್ದು, ಕಳಪೆ ಗೊಬ್ಬರ ರೈತರಿಗೆ ಮಾರಾಟ ಮಾಡಿರುವುದು ಸಾಬೀತಾಗಿದೆ. ಮಾರಾಟವಾದ ಗೊಬ್ಬರ ಕಂಪನಿ ಹಾಗೂ ಮಾರಾಟ ಮಾಡಿದ ಅಂಗಡಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್…
..ಮುಂದೆ ಓದಿ

ರಸಗೊಬ್ಬರಕ್ಕೆ ಕೃತಕ ಬೇಡಿಕೆ ಸೃಷ್ಟಿಸಿದರೆ ಕ್ರಮ: ಕೃಷಿ‌ ಮಂತ್ರಿ ಎಚ್ಚರಿಕೆ

ವಿಜಯಪರ್ವ ಸುದ್ದಿ,‌ ಬೆಂಗಳೂರು
ರಸಗೊಬ್ಬರಕ್ಕೆ ಕೃತಕ ಅಭಾವ ಸೃಷ್ಠಿ ಮಾಡಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಚಿಲ್ಲರೆ ಹಾಗೂ ಸಗಟು ವ್ಯಾಪಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಮಂತ್ರಿ ಬಿ.ಸಿ.ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ.

ಸ್ವತಃ ಕೃಷಿ ಮಂತ್ರಿಗಳ ಉಸ್ತುವಾರಿ ಜಿಲ್ಲೆ ಕೊಪ್ಪಳ ಸೇರಿ ವಿವಿಧ ಕಡೆ ರಸಗೊಬ್ಬರ ಸಿಗುತ್ತಿಲ್ಲ ಎಂಬ ರೈತರ ದೂರಿನ ಹಿನ್ನೆಲೆ ಪ್ರಕಟಣೆ ‌ನೀಡಿ, ರಾಜ್ಯದಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲ.… ..ಮುಂದೆ ಓದಿ

ಕೃಷಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಕೋವಿಡ್19 ದೃಢ

ವಿಜಯಪರ್ವ ಸುದ್ದಿ, ಕೊಪ್ಪಳ:
ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಕೋವಿಡ್‌19 ಸೋಂಕು ದೃಢಪಟ್ಟಿದ್ದು, ಈ ಬಗ್ಗೆ ಸ್ವತಃ ಸಚಿವರೇ ಟ್ವಿಟ್ ಮಾಡಿದ್ದಾರೆ. ಜುಲೈ 31ರ ರಾತ್ರಿ 10.13ಕ್ಕೆ ಟ್ವಿಟ್ ಮಾಡಿರುವ ಅವರು, ನನಗೆ ಕೋವಿಡ್19 ದೃಢಪಟ್ಟಿದೆ. ಬೆಂಗಳೂರಿನ ನನ್ನ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗುತ್ತಿದ್ದೇನೆ. ಇತ್ತೀಚೆಗೆ ಕೊಪ್ಪಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ನನ್ನ ಜೊತೆ ಆಗಮಿಸಿದ ಐದು ಜನ ಸಿಬ್ಬಂದಿಗಳಿಗೂ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿದೆ ಎಂದು ಟ್ವಿಟ್ ಮಾಡಿದ್ದಾರೆ.…
..ಮುಂದೆ ಓದಿ

error: Content is protected !!