ಬಳ್ಳಾರಿ ವಲಯ ವ್ಯಾಪ್ತಿಯ ಪಿಎಸ್ಐಗಳ ವರ್ಗಾವಣೆ!

ವಿಜಯಪರ್ವ ಸುದ್ದಿ, ಕೊಪ್ಪಳ
ಬಳ್ಳಾರಿ ಪೊಲೀಸ್ ವಲಯ ವ್ಯಾಪ್ತಿಯ ಬಳ್ಳಾರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ 9 ಪಿಎಸ್ಐ‌ಗಳನ್ನ ವರ್ಗಾವಣೆ ಮಾಡಿ ಬಳ್ಳಾರಿ ಐಜಿಪಿ ಡಾ. ಎಂ.ನಂಜುಂಡಸ್ವಾಮಿ ಆದೇಶಿಸಿದ್ದಾರೆ.

ಬಳ್ಳಾರಿ ಸಿಇಎನ್ ಪೊಲೀಸ್ ಠಾಣೆ ಪಿಎಸ್ಐ ಸರಳ.ಪಿ- ಎಚ್.ಬಿ.ಹಳ್ಳಿ (ಅಪರಾಧ) ಪೊಲೀಸ್ ಠಾಣೆಗೆ, ಬಳ್ಳಾರಿ ಡಿಎಸ್ಎ ಘಟಕದ ಪಿಎಸ್ಐ ಶಿವಕುಮಾರ್ ನಾಯ್ಕ- ಕೊಪ್ಪಳ ಜಿಲ್ಲೆ ಅಳವಂಡಿ ಪೊಲೀಸ್ ಠಾಣೆಗೆ, ತೆಕ್ಕಲಕೋಟೆ ಪೊಲೀಸ್ ಠಾಣೆ ಪಿಎಸ್ಐ ತಿಮ್ಮಣ್ಣ- ಕುಷ್ಟಗಿ ಪೊಲೀಸ್ ಠಾಣೆಗೆ, ರಾಯಚೂರು ಜಿಲ್ಲೆ ನೇತಾಜಿ‌ನಗರ ಪೊಲೀಸ್ ಠಾಣೆ ಪಿಎಸ್ಐ ಶೀಲಾ ಮೂಗನಗೌಡ್ರ ಕೊಪ್ಪಳ ಜಿಲ್ಲೆ ಬೇವೂರು ಪೊಲೀಸ್ ಠಾಣೆಗೆ, ಬೇವೂರು ಪೊಲೀಸ್ ಠಾಣೆ ಪಿಎಸ್ಐ ಶಂಕ್ರಪ್ಪ ಎಲ್- ಕೊಪ್ಪಳ ಜಿಲ್ಲೆ ಸಿಇಎನ್ ಪೊಲೀಸ್ ಠಾಣೆಗೆ ವರ್ಗವಾಗಿದ್ದಾರೆ.… ..ಮುಂದೆ ಓದಿ

ಹಿರಿಯ ಪೊಲೀಸ್ ಅಧಿಕಾರಿಯಿಂದ ಅಕ್ರಮಕ್ಕೆ‌ ಒತ್ತು ಆರೋಪ; ಹಂಪಿ ‌ಡಿವೈಎಸ್ಪಿ ರಾಜೀನಾಮೆ

ವಿಜಯಪರ್ವ ಸುದ್ದಿ, ‌ಹೊಸಪೇಟೆ
ಬಳ್ಳಾರಿ ಜಿಲ್ಲೆ ವಿಶ್ವ‌‌ ವಿಖ್ಯಾತ ಹಂಪಿ ಡಿವೈಎಸ್ಪಿ ಎಸ್.ಎಸ್.ಕಾಶಿಗೌಡ ರಾಜೀನಾಮೆ ನೀಡಿದ್ದು, ವಲಯ ಮಟ್ಟದ‌ ಹಿರಿಯ ಅಧಿಕಾರಿಗಳ ಕಿರುಕುಳ ಕಾರಣ ಎಂಬ ಆರೋಪ ಕೇಳಿ ಬಂದಿದ್ದು,‌‌‌ ಚರ್ಚೆಗೆ‌ ಗ್ರಾಸವಾಗಿದೆ.

ಬೆನ್ನಲ್ಲೆ ರಾಜೀನಾಮೆ ನೀಡಿರುವ ಡಿವೈಎಸ್ಪಿ ಅವರು ಖಾಸಗಿ ಸುದ್ದಿ ವಾಹಿನಿಯ ವರದಿಗಾರರೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದೆ. ಆಡಿಯೋದಲ್ಲಿ ಡಿವೈಎಸ್ಪಿ ಅವರು ಬಾಯಿ ಬಿಟ್ಟಿರುವ ಕೆಲ ಅಂಶಗಳು ಇಡೀ ಪೊಲೀಸ್ ವ್ಯವಸ್ಥೆ ತಲೆ ತಗ್ಗಿಸುವಂತಿವೆ.… ..ಮುಂದೆ ಓದಿ

error: Content is protected !!