ರಾಯರೆಡ್ಡಿ Vs ಹಾಲಪ್ಪ ಆಚಾರ್: ರಾಜಕೀಯ ಪ್ರಬುದ್ಧತೆ ತೋರಲು ಇದು ಸಕಾಲ

ಇತ್ತೀಚೆಗೆ ಕೊಪ್ಪಳ ಜಿಲ್ಲೆ ಯಲಬುರ್ಗಾದ ಚಿಕ್ಕಮ್ಯಾಗೇರಿ ಗ್ರಾಮ ಹಾಗೂ ಯಲಬುರ್ಗಾ ಪಟ್ಟಣದಲ್ಲಿ ನಡೆದ ರಾಜ್ಯ ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ಬಸವರಾಜ ರಾಯರಡ್ಡಿ ಅವರು ನೀಡಿದ ಹೇಳಿಕೆಗಳು ಅನಗತ್ಯವಾಗಿ ವಿವಾದಕ್ಕೆ ಕಾರಣವಾಗಿವೆ.

ಬಣಜಿಗರ ಸಮಾವೇಶದಲ್ಲಿ ಮಾತನಾಡಿದ್ದ ಬಸವರಾಜ ರಾಯರಡ್ಡಿ ಅವರು, ʼದನ ಕಾಯೋರೆಲ್ಲ ಎಂಎಲ್‌ಎ, ಎಂಪಿ ಆಗಿದ್ದಾರೆʼ ಅಂದಿದ್ದರು. ಚಿಕ್ಕಮ್ಯಾಗೇರಿ ಕಾರ್ಯಕ್ರಮದಲ್ಲಿ ʼಆರು ಹಡೆದಾಕೆಯ ಮುಂದೆ…ʼ ಎಂದು ರೂಢಿಗತ ಗಾದೆ ಮಾತೊಂದನ್ನು ಉಲ್ಲೇಖಿಸಿದ್ದರು...ಮುಂದೆ ಓದಿ

ಇದು ಬೊಮ್ಮಾಯಿಯದಲ್ಲ, ಬಿಜೆಪಿ ಹೈಕಮಾಂಡ್‌ ಸಂಪುಟ

ವಿಜಯ ಪರ್ವ ಸುದ್ದಿ | ಕೊಪ್ಪಳ

ಅಚ್ಚರಿಯ ತೀರ್ಮಾನಗಳ ಮೂಲಕವೇ ಸದಾ ಗಮನ ಸೆಳೆಯುವ ಬಿಜೆಪಿ ಹೈಕಮಾಂಡ್, ಈ ಬಾರಿಯೂ ತನ್ನ ಆಟ ಮುಂದುವರೆಸಿದೆ. ರಾಜ್ಯ ಸರ್ಕಾರದ ನೂತನ ಸಂಪುಟವು ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟ ಅಲ್ಲ, ಅದು ಬಿಜೆಪಿ ಹೈಕಮಾಂಡ್‌ನ ಸಂಪುಟ ಅನ್ನೋದು ಮೇಲ್ನೋಟಕ್ಕೇ ಸಾಬೀತಾಗುವಂತಿದೆ.

ಪಕ್ಷ ಇಲ್ಲಿ ಯಾರ ಓಲೈಕೆಯನ್ನೂ ಮಾಡಿಲ್ಲ. ಭಿನ್ನಮತೀಯರಿಗೆ ಸೊಪ್ಪನ್ನೂ ಹಾಕಿಲ್ಲ, ಜೊತೆಗೆ ಪಕ್ಷಕ್ಕೆ ದುಡಿದವರನ್ನೂ ಮರೆತಿಲ್ಲ...ಮುಂದೆ ಓದಿ

ಐಪಿಎಸ್ ‌ಅಧಿಕಾರಿ ರವಿ ಡಿ. ಚನ್ನಣ್ಣವರ ಸ್ನೇಹಿತ ಜಿಪಂ ಕಣಕ್ಕೆ!

ವಿಜಯಪರ್ವ ವಿಶೇಷ ‌| ಕೊಪ್ಪಳ

“ನಾನು ಕೋಚ್ಚಿಂಗ್ ಗಾಗಿ ಹೈದ್ರಾಬಾದ್ ಗೆ ಹೋಗಿದ್ದಾಗ ನನ್ನ ಹತ್ತಿರ ಪುಡಿಗಾಸೂ ಇರಲಿಲ್ಲ. ಹಾಕಿದ್ದ ಪ್ಯಾಂಟ್‌ ಮಲ್ಲಪ್ಪಂದು, ಟೀ‌ ಶರ್ಟ್ ಮಂಜಪ್ಪದು. ಇನ್ನೊಂದು ಹನುಮೇಶ ಕಳುಹಿಸುತ್ತಿದ್ದ 150 ರೂ.ಮನಿ ಆರ್ಡರ್. ನಿಮ್ಮ ಹನುಮೇಶ, ಇಲ್ಲೇ ಝಡ್ಪಿ ಸಿಇಒ ಆಫೀಸ್ನಾಗ್ ಇದಾನ್ ನಮ್ಮ ಹುಡುಗ. 150 ರೂಪಾಯಿ ಕಳಸಾವ್, ಹನುಮೇಶ. ಗಂಗಾವತಿ… ಹುಲಿ… ಹುಳ್ಕಿಹಾಳ್ ದಾವ್ , ಇಲ್ಲೇ ಕನಕಗಿರಿ ಪಕ್ಕ...ಮುಂದೆ ಓದಿ

ಮಹಿಳಾ ಬಿಜೆಪಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೇಲೆ ಹಲ್ಲೆ: ವಿಡಿಯೊ ಬಹಿರಂಗ

ವಿಜಯಪರ್ವ ಸುದ್ದಿ | ಕೊಪ್ಪಳ

ಜಿಲ್ಲೆಯ ಗಂಗಾವತಿ ನಗರದಲ್ಲಿ ಇಬ್ಬರು ಯುವಕರು ಮಹಿಳೆಯೊಬ್ಬಳನ್ನು ನೆಲಕ್ಕೆ ಕೆಡವಿ ಥಳಿಸಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಷ್ಪಾಂಜಲಿ ಗುನ್ನಾಳ ಥಳಿಸಿಕೊಂಡಿರೋ ಮಹಿಳೆ. ನಿವೇಶನ ವಿವಾದದ ಹಿನ್ನೆಲೆಯಲ್ಲಿ ಗಂಗಾವತಿಯ ಸರೋಜಾ ನಗರದ ಸಂಜಯ್ ಮತ್ತು ಸೋಮಶೇಖರ್ ಎಂಬುವವರು ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ.… ..ಮುಂದೆ ಓದಿ

ಜನ್ಮದಿನದ ಸಂಭ್ರಮದಲ್ಲಿ ಶಾಸಕನಾಗುವ ಕನಸು

ವಿಜಯಪರ್ವ ವಿಶೇಷ | ಕೊಪ್ಪಳ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದಲ್ಲಿ ಬಿಜೆಪಿಯಿಂದ ಗೆಲ್ಲುವ ಸಾಧ್ಯತೆಗಳನ್ನು ಹೊಂದಿದ್ದ ಸಿ.ವಿ. ಚಂದ್ರಶೇಖರ ಅವರ ಜನ್ಮದಿನ ಇಂದು.

ಒಂದು ವೇಳೆ ಅಂದು ಬಿಜೆಪಿ ತನ್ನ ಮೂಲ ಅಭ್ಯರ್ಥಿಗೆ ಅಂಟಿಕೊಂಡಿದ್ದರೆ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಇವತ್ತಿನ ಚಿತ್ರ ಬದಲಾಗಿರುವ ಸಾಧ್ಯತೆಗಳಿದ್ದವು. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆಯಾಗಿದ್ದ ಸಿ.ವಿ. ಚಂದ್ರಶೇಖರ ಅವರಿಗೇ ಬಿ-ಫಾರ್ಮ್‌ ಸಿಗಬೇಕಿತ್ತು...ಮುಂದೆ ಓದಿ

ಕೋವಿಡ್19 ದೃಢಪಟ್ಟಿದ್ದ ಬಿಜೆಪಿ ಯುವ ಮುಖಂಡ ಹಾಲೇಶ ಕಂದಾರಿ ಸಾವು

ವಿಜಯಪರ್ವ ಸುದ್ದಿ, ಕೊಪ್ಪಳ
ನಗರದ ಬಿಜೆಪಿ ಯುವ ಮುಖಂಡ ಹಾಗೂ ಕೊಪ್ಪಳ ನಗರಸಭೆ ಸದಸ್ಯೆ ದೇವಕ್ಕ ಕಂದಾರಿ ಪುತ್ರ ಹಾಲೇಶ ಕಂದಾರಿ(35) ಗುರುವಾರ ಮೃತಪಟ್ಟಿದ್ದಾರೆ.

ಕಳೆದ 3 ದಿನದಿಂದ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಾಲೇಶರಿಗೆ ಕೋವಿಡ್19 ದೃಢಪಟ್ಟಿತ್ತು. ನಂತರ ಮೃತ ಹಾಲೇಶರನ್ನು ಕೆ.ಎಸ್.ಆಸ್ಪತ್ರೆಯ ಕೋವಿಡ್19 ವಿಶೇಷ ವಾರ್ಡ್ ನಲ್ಲಿ‌ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಹಾಲೇಶ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರ ಗರಡಿಯಲ್ಲಿ ಪಳಗಿದ ಯುವ ನಾಯಕ.… ..ಮುಂದೆ ಓದಿ

ಮಾಜಿ ಸಿಎಂ ಸಿದ್ದರಾಮಯ್ಯ ಭಯೋತ್ಪಾದಕರ‌ ಪರವೋ? ದಲಿತರ ಪರವೋ?; ನಳೀನ ಕುಮಾರ ಕಟೀಲ್

ವಿಜಯಪರ್ವ ಸುದ್ದಿ, ಕೊಪ್ಪಳ
ತಾವು ದಲಿತ ನಾಯಕ ಎಂದು ಘೋಷಿಸಿಕೊಂಡಿರೋ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಮಾಜದಲ್ಲಿ ಭಯ ಸೃಷ್ಠಿಸುವ ಭಯೋತ್ಪಾದಕರ ಪರವೋ? ದಲಿತರ ಪರವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸವಾಲು ಹಾಕಿದ್ದಾರೆ.

ಕೊಪ್ಪಳದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ತಾವು ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಎನ್ನುವಂತೆ ವರ್ತಿಸಲಿಲ್ಲ.… ..ಮುಂದೆ ಓದಿ

ಕಾಂಗ್ರೆಸ್ ಕಾರ್ಯಕರ್ತೆ ಮೇಲೆ ಅಶ್ಲೀಲ ಕಮೆಂಟ್ ದಾಳಿ; 7 ಜನರ ವಿರುದ್ಧ‌ ಎಫ್ಐಆರ್

ವಿಜಯಪರ್ವ ಸುದ್ದಿ, ಕೊಪ್ಪಳ

‘ಈ ಸರ್ಕಾರದ ಸಾಧನೆಗಳೇನು?’ ಎಂಬ ನನ್ನ ಒಂದೇ ಒಂದು ಪೇಸ್ ಬುಕ್ ಪೋಸ್ಟ್ ಗೆ ನನ್ನ ಮೇಲೆ ಅಶ್ಲೀಲ ಕಮೆಂಟ್‌ಗಳ ದಾಳಿ ಆರಂಭಿಸಿದ್ದಾರೆ. ಇದರ ಹಿಂದೆ ಬಿಜೆಪಿ ಮತ್ತು ಆರ್ ಎಸ್ಎಸ್ ಕೈವಾಡವಿದೆ ಎಂದು ಗಂಗಾವತಿಯ ಕಾಂಗ್ರೆಸ್ ಕಾರ್ಯಕರ್ತೆ ಶೈಲಜಾ ಹಿರೇಮಠ ಆರೋಪಿಸಿದರು.
ಕೊಪ್ಪಳದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಮತ್ತು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಮಾಲತಿ ನಾಯಕ ಜೊತೆ ಸುದ್ದಿಗೋಷ್ಠಿ ನಡೆಸಿ ಭಾನುವಾರ ಮಾತನಾಡಿದರು.…
..ಮುಂದೆ ಓದಿ