ಟ್ರ್ಯಾಕ್ಟರ್ ರ‌್ಯಾಲಿಗೆ ರೈತ, ಕಾರ್ಮಿಕರು ಸಂಘಟನೆ ಬೆಂಬಲ ಇಲ್ಲ; ಶರಣಪ್ಪ ಕೊತ್ವಾಲ್

ವಿಜಯಪರ್ವ ಸುದ್ದಿ, ಕಾರಟಗಿ
ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಫೆ.15ರಂದು ನಡೆಯಲಿರುವ ಟ್ರ್ಯಾಕ್ಟರ್ ರ‌್ಯಾಲಿಗೆ ಕಾರ್ಮಿಕ ಮತ್ತು ರೈತ ಪರ ಸಂಘಟನೆಗಳು ಬೆಂಬಲಿಸಬಾರದು ಎಂದು ಭಾರತೀಯ ಕೃಷಿ ಕಾರ್ಮಿಕ ಮತ್ತು ರೈತ ಸಂಘಟನೆ ಜಿಲ್ಲಾಧ್ಯಕ್ಷ ಶರಣಪ್ಪ ಕೊತ್ವಾಲ್ ಮನವಿ ಮಾಡಿದ್ದಾರೆ.

ಕೇಂದ್ರ ಸರ್ಕಾರಗಳ ಕೃಷಿ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಮತ್ತು ಕಾರ್ಮಿಕ ಸಂಘಟನೆಗಳು ಕಳೆದ 3 ತಿಂಗಳಿಂದ ಹೋರಾಟ ಮಾಡುತ್ತಿವೆ.… ..ಮುಂದೆ ಓದಿ

ವಯಸ್ಸಾದ ಆಕಳನ್ನು ಸಿ.ಟಿ.ರವಿ ‌ಮನೆ ಮುಂದೆ ಕಟ್ಟಬೇಕಾ? ಬಿಜೆಪಿ ಮುಖಂಡರ ಮನೆ ಮುಂದೆ ತರಬೇಕಾ? ನಾವು ಏನು ತಿನ್ನಬೇಕು ನಮಗೆ ಗೊತ್ತು; ತಂಗಡಗಿ

ವಿಜಯಪರ್ವ ಸುದ್ದಿ, ಕೊಪ್ಪಳ
ವಯಸ್ಸಾದ ಆಕಳನ್ನು ಸಿ.ಟಿ. ರವಿ ಮನೆ ಮುಂದೆ ಕಟ್ಟಬೇಕಾ? ಸ್ಥಳೀಯ ಬಿಜೆಪಿ ಮುಖಂಡರ ಮನೆ ಮುಂದೆ ಕಟ್ಟಬೇಕಾ? ಸಂವಿಧಾನ ಆಹಾರದ ಹಕ್ಕು ನೀಡಿದೆ ಏನು ತಿನ್ನಬೇಕು ಅನ್ನೋದು ನಮಗೆ ಬಿಟ್ಟಿದ್ದು ಎಂದು ಮಾಜಿ ಮಂತ್ರಿ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಕೇಂದ್ರ ಮತ್ತು ತಾಜ್ಯ ಸರ್ಕಾರಗಳು ಗೋ ಹತ್ಯೆ ನಿಷೇಧ ಮಾಡುವ ಮುನ್ನ ಅದರ ಸಾಧಕ ಬಾಧಕ ಚರ್ಚಿಸಬೇಕು.… ..ಮುಂದೆ ಓದಿ

ಕೃಷಿ ಮಂತ್ರಿ ಬಿ.ಸಿ.ಪಾಟೀಲ್ 10 ವರ್ಷದಿಂದ ಚುನಾವಣೆ ನೋಡ್ತಿದ್ದಾರೆ; ರಾಜಕೀಯ ಅನುಭವದ ಬಗ್ಗೆ ಮಾಜಿ ಮಂತ್ರಿ ವ್ಯಂಗ್ಯ

ವಿಜಯಪರ್ವ ಸುದ್ದಿ, ಕೊಪ್ಪಳ
ಕೃಷಿ ಮಂತ್ರಿ ಬಿ.ಸಿ. ಪಾಟೀಲ್ ಕೇವಲ ‌10 ವರ್ಷದಿಂದ ಚುನಾವಣೆ, ‌ರಾಜಕಾರಣ ನೋಡಿರಬಹುದು. ಆದರೆ, ನಾನು ನನ್ನ 19ನೇ ವಯಸ್ಸಿನ ಕಾಲೇಜು ಜೀವನದಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಾಜಿ ಮಂತ್ರಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳದಲ್ಲಿ ವಿದ್ಯುತ್‌ ‌ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಂತರ ಭಾನುವಾರ ಮಾತನಾಡಿ, ಇವಿಎಂ ನಿಂದ ಬಿಜೆಪಿ ಚುನಾವಣೆ ಗೆಲ್ಲುತ್ತಿದೆ ಎಂಬ ಶಿವರಾಜ ತಂಗಡಗಿ ಹೇಳಿಕೆಗೆ ಕೃಷಿ ಮಂತ್ರಿ ಬಿ.ಸಿ.ಪಾಟೀಲ್… ..ಮುಂದೆ ಓದಿ

ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

ವಿಜಯಪರ್ವ ಸುದ್ದಿ, ಕೊಪ್ಪಳ
ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ದುರ್ಬಳಕೆ ಮಾಡಿಕೊಂಡು ಭೂ ಸುಧಾರಣೆ ಕಾಯ್ದೆಗೆ ರೈತ ವಿರೋಧಿ ತಿದ್ದುಪಡಿ ಮಾಡಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಮಾಜಿ ಮಂತ್ರಿ ಶಿವರಾಜ ತಂಗಡಗಿ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಧರಣಿ ನಡೆಸಿದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಸಿಎಂ ದೇವರಾಜ ಅರಸು ಅವರ ಜನ್ಮ ದಿನದ ಹಿನ್ನೆಲೆ ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ… ..ಮುಂದೆ ಓದಿ

ಲೆಕ್ಕಕೊಡಿ, ಉತ್ತರಕೊಡಿ ಎಂದು ಕಾಂಗ್ರೆಸ್ ಪ್ರತಿಭಟನೆ; 3 ಮಾಜಿ ಮಂತ್ರಿಗಳು ಭಾಗಿ

ವಿಜಯಪರ್ವ ಸುದ್ದಿ,‌‌ ಕೊಪ್ಪಳ
ನಗರದ ಅಶೋಕ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು
ಉತ್ತರ ಕೊಡಿ, ಲೆಕ್ಕ ಕೊಡಿ ಘೀಷವಾಕ್ಯದಡಿ ರಾಜ್ಯ ಸರ್ಕಾರದ ವಿರುದ್ಧ ‌ಪ್ರತಿಭಟಿಸಿದರು.‌ ಮಾಜಿ ಮಂತ್ರಿಗಳಾದ ‌ಶಿವರಾಜ ತಂಗಡಗಿ, ಯು.ಟಿ.ಖಾದರ್ ಹಾಗೂ ಉಮಾಶ್ರೀ ‌ನೇತೃತ್ವದಲ್ಲಿ ಪ್ರತಿಭಟಿಸಿದ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.‌ ಕೊಪ್ಪಳದ ಪ್ರವಾಸಿ ಮಂದಿರದಿಂದ ಅಶೋಕ ವೃತ್ತದವರೆಗೆ ಪ್ರತಿಭಟನಾ ಮೆವಣಿಗೆ ನಡೆಸಿ, ಆಕ್ರೋಶ ವ್ಯಕ್ತಪಿಸಿದರು.…
..ಮುಂದೆ ಓದಿ

error: Content is protected !!