ಗವಿಮಠ‌ ಕೋವಿಡ್ ಆಸ್ಪತ್ರೆಗೆ ಎನ್ಆರ್ ಐ ನೆರವು

ವಿಜಯಪರ್ವ ಸುದ್ದಿ |ಕೊಪ್ಪಳ

ಇಲ್ಲಿನ ಗವಿಮಠ ಕೋವಿಡ್ ಆಸ್ಪತ್ರೆಗೆ ಬ್ರೀತ್ ಇಂಡಿಯಾ ಅಭಿಯಾನದಡಿ ಆಕ್ಸಿಜನ್ ಕಾನ್ಸಂಟ್ರೇಟರ್ಸ್ ಸೇರಿ ಮೆಡಿಕಲ್ ಉಪಕರಣಗಳು ದೇಣಿಗೆ ನೀಡಲಾಯಿತು. ಅಭಿಯಾನದ ಸ್ವಯಂ ಸೇವಕರು ಮೆಡಿಕಲ್ ಉಪಕರಣಗಳನ್ನು ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ಹಸ್ತಾತರಿಸಿದರು.

ಈ ವೇಳೆ ಮಾತನಾಡಿದ ಅಭಿಯಾನದ ಕಾರ್ಯಕರ್ತ ಹರ್ಷ ಮಾತನಾಡಿ, ಅನಿವಾಸಿ ಭಾರತೀಯರೇ ಹೆಚ್ಚಿರುವ ಐ ಕ್ಯಾಟ್ ಪೌಂಡೇಷನ್, ಸೊಸೈಟಿ ಆಫ್ ಎಮರ್ಜನ್ಸಿ ಮೆಡಿಸಿನ್ ಇಂಡಿಯಾ ಹಾಗೂ ಅವಿರತ ಭಾರತ ಸಂಸ್ಥೆಗಳ ಸಹಯೋಗದಲ್ಲಿ ಬ್ರೀತ್ ಇಂಡಿಯಾ ಎಂಬ ಘೋಷವಾಕ್ಯದಡಿ ಕೋವಿಡ್ ಸಾಂಕ್ರಾಮಿಕದ ವಿರುದ್ಧ ಹೋರಾಟ ಮಾಡಲಾಗುತ್ತಿದೆ.… ..ಮುಂದೆ ಓದಿ

ಸಿಎಂ ಬದಲಾವಣೆ ಪ್ರಶ್ನೆಯೇ ಇಲ್ಲ; ಕೃಷಿ ಮಂತ್ರಿ ಬಿ.ಸಿ.ಪಾಟೀಲ್

ವಿಜಯಪರ್ವ ಸುದ್ದಿ | ಕೊಪ್ಪಳ
ಯಡಿಯೂರಪ್ಪ ಮುಖ್ಯಮಂತ್ರಿ ಆದಾಗಿನಿಂದಲೂ ಸಿಎಂ ಬದಲಾವಣೆ ಚರ್ಚೆ ನಡೆಯುತ್ತಿದೆ. ಆದರೆ ಅದು ಯಾವತ್ತೂ ಸಫಲವಾಗದು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಕೊಪ್ಪಳದ ಜಿಲ್ಲಾಡಳಿತ ಭವನದ ಮುಂದೆ ಬುಧವಾರ ಮಾಧ್ಯಮಗಳಿಗೆ ಮಾತನಾಡಿದರು.

ಶಾಸಕಾಂಗ ಪಕ್ಷದ ಸಭೆ ಕರೆದ ಕೂಡಲೇ ಸಿಎಂ ಬದಲಾವಣೆ ಮಾಡ್ತಾರೆ ಎಂಬ ಕಲ್ಪನೆ ತಪ್ಪು.… ..ಮುಂದೆ ಓದಿ

ಕೊಪ್ಪಳದಲ್ಲೂ ಕರೋನ ಅಟ್ಟಹಾಸ ಶುರುವಾಗಿದೆ; ಮಂತ್ರಿ ಬಿ.ಸಿ.ಪಾಟೀಲ್

ವಿಜಯಪರ್ವ ಸುದ್ದಿ, ಕೊಪ್ಪಳ
ಕೊಪ್ಪಳ ಜಿಲ್ಲೆಯಲ್ಲಿಯೂ ಕಳೆದ ಒಂದು ವಾರದಿಂದ ಪ್ರತಿ ದಿನ 300 ರಿಂದ 400 ಕೋವಿಡ್ 19 ಕೇಸ್ ಪತ್ತೆ ಆಗ್ತಿವೆ.‌ ನಿನ್ನೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತ 4 ರೋಗಿಗಳು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ‌ ಮಂತ್ರಿ ಬಿ.ಸಿ.ಪಾಟೀಲ್ ತಿಳಿಸಿದರು.

ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್‌19 ಸೋಂಕು ಹರಡುವುದನ್ನು ತಡೆಯುವ ಉದ್ದೇಶಕ್ಕೆ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ.… ..ಮುಂದೆ ಓದಿ

ಕರೋನ ಬೆನ್ನಲ್ಲೇ ಕೊಪ್ಪಳ ಜಿಲ್ಲೆಯಲ್ಲಿ ಇಲಿಜ್ವರ; 6 ಪ್ರಕರಣ ಪತ್ತೆ

ವಿಜಯಪರ್ವ ಸುದ್ದಿ, ಕೊಪ್ಪಳ
ಕರೋನ ಮಹಾಮಾರಿಯ 2ನೇ ಹಂತದ‌ ಎಫೆಕ್ಟ್ ಆರಂಭದ ಆತಂಕದಲ್ಲೇ ಜಿಲ್ಲೆಗೆ ಇಲಿಜ್ವರ ಕಾಲಿಟ್ಟಿದೆ. ಕೊಪ್ಪಳ ಜಿಲ್ಲೆಯಲ್ಲಿ  ಒಟ್ಟು 6 ಜನರಲ್ಲಿ ಇಲಿಜ್ವರದ ವೈರಸ್ ದೃಢಪಟ್ಟಿವೆ.

ಕೊಪ್ಪಳ ತಾಲೂಕಿನಲ್ಲಿ ಐದು ಹಾಗೂ ಕುಷ್ಟಗಿ ತಾಲೂಕಿನಲ್ಲಿ ಒಂದು ಪ್ರಕರಣ ದೃಢಪಟ್ಟಿವೆ. ಕೊಪ್ಪಳ ತಾಲೂಕಿನ ಹೊಸಳ್ಳಿಯಲ್ಲಿ ಎರಡು, ಹೊಸಲಿಂಗಾಪುರ, ಕೆರೆಹಳ್ಳಿ ಹಾಗೂ ನರೇಗಲ್ ಗ್ರಾಮಗಳಲ್ಲಿ ತಲಾ ಒಂದು ಹಾಗೂ ಕುಷ್ಟಗಿ ತಾಲೂಕಿನ ಶಾಖಾಪುರ ಗ್ರಾಮದಲ್ಲಿ ಒಬ್ಬರಿಗೆ ಇಲಿಜ್ವರ ಪ್ರಕರಣ ಪತ್ತೆಯಾಗಿವೆ.… ..ಮುಂದೆ ಓದಿ

ಕೋವಿಡ್19 ಸೋಂಕಿತ ಸಾವು; ಗ್ರಾಮಸ್ಥರು, ಆರೋಗ್ಯ ಸಿಬ್ಬಂದಿ ಅಮಾನವೀಯತೆ

ವಿಜಯಪರ್ವ ಸುದ್ದಿ, ಕನಕಗಿರಿ
ಈವರೆಗೂ ಕೋವಿಡ್19 ಸೋಂಕಿನ ಪ್ರಮಾಣ ಹೆಚ್ಚುತ್ತಿರುವುದನ್ನ ಗಮನಿಸಿದ್ದೇವೆ. ಈಗ ಸೋಂಕಿನ ಜೊತೆಗೆ ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಹಾಗೆಯೇ ಸೋಂಕಿತರ ಶವಗಳ ಅಮಾನವೀಯ ಸಂಸ್ಕಾರ ಪ್ರಕರಣಗಳು ಕಂಡು ಬರುತ್ತಿವೆ.

ಇಂಥದೊಂದು ಪ್ರಕರಣ ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಳ್ಳಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ 55 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟು ಕಳೆದ ಮೂರ್ನಾಲ್ಕು ದಿನಗಳಿಂದ ಹೋಮ್ ಐಸೋಲೇಷನ್‌ನಲ್ಲಿ ಇದ್ದರು.… ..ಮುಂದೆ ಓದಿ

ಕೊಪ್ಪಳದಲ್ಲಿ ಜಿಟಿಜಿಟಿ‌ ಮಳೆ; ಶವ ಸಂಸ್ಕಾರಕ್ಕೂ ಪರದಾಟ!

ವಿಜಯಪರ್ವ ಸುದ್ದಿ, ಕೊಪ್ಪಳ

ಕಳೆದೆರಡು ದಿನದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಕೊಪ್ಪಳ ಗವಿಮಠ ಹಿಂಭಾಗದ ರುದ್ರ ಭೂಮಿಯಲ್ಲಿ‌ ಶವ ಸಂಸ್ಕಾರಕ್ಕೆ ಪರದಾಡುವಂತಾಗಿದೆ.

ಕೊಪ್ಪಳದ ಗೌರಿಅಂಗಳ ಪ್ರದೇಶದ ನಿವಾಸಿಯೊಬ್ಬರು ಕೋವಿಡ್-19‌ನಿಂದ ಮೃತಪಟ್ಟಿದ್ದು, ಕುಟುಂಬಸ್ಥರು ಶವಸಂಸ್ಕಾರಕ್ಕೆ ಶುಕ್ರವಾರ ಪರದಾಡಿದ್ದಾರೆ. ಆರೋಗ್ಯ‌ ಇಲಾಖೆ ಸಿಬ್ಬಂದಿ ಸರ್ಕಾರದ ನಿಯಮ, ಮಾರ್ಗಸೂಚಿ ಅಂತೆ ಶವ ರುದ್ರಭೂಮಿಗೆ ತಂದಿದ್ದಾರೆ. ಮಳೆ ನೀರಿನ ಹರಿವಿಗೆ ಸಮರ್ಪಕ ಮಾರ್ಗವಿದ್ದರೆ ಶವಸಂಸ್ಕಾರಕ್ಕೆ ತೊಂದರೆ ಆಗುತ್ತಿರಲಿಲ್ಲವೇನೋ?… ..ಮುಂದೆ ಓದಿ

ಕೋವಿಡ್19 ಆಸ್ಪತ್ರೆಯಲ್ಲಿ ಕರೋನ ಸೋಂಕಿತ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ

ವಿಜಯಪರ್ವ ಸುದ್ದಿ, ಕೊಪ್ಪಳ
ನಗರದ ಕೋವಿಡ್19 ಆಸ್ಪತ್ರೆಯಲ್ಲಿ ಕರೋನ ಸೋಂಕಿತ ಯುವಕ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಪ್ಪಳ ಜಿಲ್ಲೆ ಕುಕನೂರು ತಾಲೂಕು ಚಿಕ್ಕಬೀಡನಾಳ ಗ್ರಾಮದ ಮಾರುತಿ ಕರಿಗೌಡರ್(26) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ.

ಕಳೆದ ಸೆಪ್ಟೆಂಬರ್ 14 ರಂದು ಕೋವಿಡ್19 ಆಸ್ಪತ್ರೆಗೆ ದಾಖಲಾಗಿದ್ದ ಯುವಕ, ಆಸ್ಪತ್ರೆಯ ಶೌಚಾಲಯದಲ್ಲಿ ನೇಣು ಹಾಕಿಕೊಂಡಿದ್ದಾನೆ. ಈ ಮೊದಲು ಕೊಪ್ಪಳದ ಪುಷ್ಕರ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.… ..ಮುಂದೆ ಓದಿ

ಮನೆಯಲ್ಲೇ ಚಿಕಿತ್ಸೆ ಪಡೆದು, ಕೊಲ್ಲುತ್ತದೆ ಎಂಬ ‌ಕರೋನ ಗೆದ್ದು ಬಂದ ಕಮಲಮ್ಮ!‌

ವಿಜಯಪರ್ವ ‌ಸುದ್ದಿ, ಕೊಪ್ಪಳ
ಹದಿಯರೆಯದ ಅದೆಷ್ಟೋ ‌ಜನರನ್ನ ಹಿಂಡಿ ಹಿಪ್ಪೆ ಮಾಡಿರುವ ಕೋವಿಡ್19(ಕರೋನ), ಕೆಲವರನ್ನು ಬದುಕನ್ನೂ ಕೊನೆ ಮಾಡಿದೆ. ಆದರೆ, ಸದ್ಯಕ್ಕೆ ರಾಜ್ಯದಲ್ಲೇ ಕರೋನ ಹಾಟ್‌ ಸ್ಪಾಟ್ ಎಂಬ ಹಣೆಪಟ್ಟಿ ಹೊತ್ತಿರೋ ಕೊಪ್ಪಳ ಜಿಲ್ಲೆಯಲ್ಲಿ ಬರೋಬ್ಬರಿ 105 ವರ್ಷದ ಅಜ್ಜಿ ಕೋವಿಡ್19ಗೆ ಸೆಡ್ಡು ಹೊಡೆದು ಗೆದ್ದು ಬಂದಿದ್ದಾರೆ. ಇನ್ನು ಈ ಅಜ್ಜಿ ಚಿಕಿತ್ಸೆ ಪಡೆದಿದ್ದು ಮನೆಯಲ್ಲೇ ಎಂಬುದು ಮತ್ತೊಂದು ಆಶಾದಾಯಕ ಬೆಳವಣಿಗೆ.…
..ಮುಂದೆ ಓದಿ

ಕೊರೋನಾ ಮುಕ್ತ ಕೊಪ್ಪಳ ಅಭಿಯಾನಕ್ಕೆ ಗವಿಶ್ರೀಗಳಿಂದ ಚಾಲನೆ

ವಿಜಯಪರ್ವ ಸುದ್ದಿ, ಕೊಪ್ಪಳ

ಕೊಪ್ಪಳ‌ ಜಿಲ್ಲೆಯಲ್ಲಿ‌ ದಿನದಿಂದ ದಿನಕ್ಕೆ ಕೋವಿಡ್-19 ಪ್ರಕರಣ ದೃಢಪಡಯವ ಸಂಖ್ಯೆ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕೊರೋನಾ ಮುಕ್ತ ಕೊಪ್ಪಳ ಅಭಿಯಾನಕ್ಕೆ ಶನಿವಾರ ಕೊಪ್ಪಳದಲ್ಲಿ ಚಾಲನೆ ನೀಡಲಾಯಿತು.

ಕೊಪ್ಪಳ ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯಿತಿ 16ನೇ ವಾರ್ಡ್‌ನಲ್ಲಿ ಅಭಿಯಾನಕ್ಕೆ ಜಿಲ್ಲಾಧಿಕಾರಿ ಎಸ್.ವಿಕಾಸ್ ಕಿಶೋರ್ ಹಾಗೂ ಕೊಪ್ಪಳದ ಶ್ರೀಸಂಸ್ಥಾನ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿಗಳು ಚಾಲನೆ‌ ನೀಡಿದರು.… ..ಮುಂದೆ ಓದಿ

ಕೋವಿಡ್19 ದೃಢಪಟ್ಟಿದ್ದ ಬಿಜೆಪಿ ಯುವ ಮುಖಂಡ ಹಾಲೇಶ ಕಂದಾರಿ ಸಾವು

ವಿಜಯಪರ್ವ ಸುದ್ದಿ, ಕೊಪ್ಪಳ
ನಗರದ ಬಿಜೆಪಿ ಯುವ ಮುಖಂಡ ಹಾಗೂ ಕೊಪ್ಪಳ ನಗರಸಭೆ ಸದಸ್ಯೆ ದೇವಕ್ಕ ಕಂದಾರಿ ಪುತ್ರ ಹಾಲೇಶ ಕಂದಾರಿ(35) ಗುರುವಾರ ಮೃತಪಟ್ಟಿದ್ದಾರೆ.

ಕಳೆದ 3 ದಿನದಿಂದ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಾಲೇಶರಿಗೆ ಕೋವಿಡ್19 ದೃಢಪಟ್ಟಿತ್ತು. ನಂತರ ಮೃತ ಹಾಲೇಶರನ್ನು ಕೆ.ಎಸ್.ಆಸ್ಪತ್ರೆಯ ಕೋವಿಡ್19 ವಿಶೇಷ ವಾರ್ಡ್ ನಲ್ಲಿ‌ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಹಾಲೇಶ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರ ಗರಡಿಯಲ್ಲಿ ಪಳಗಿದ ಯುವ ನಾಯಕ.… ..ಮುಂದೆ ಓದಿ