ಬಸವ ಕಲ್ಯಾಣದಲ್ಲಿ ಗೆಲ್ಲದಿದ್ದರೆ ಬಿಜೆಪಿ ಬಿದ್ದು ಹೋಗಲ್ಲ: ಬಿ.ಸಿ. ಪಾಟೀಲ್

ವಿಜಯಪರ್ವ ಸುದ್ದಿ, ಕೊಪ್ಪಳ

ಬಸವಕಲ್ಯಾಣದಲ್ಲಿ ಗೆಲ್ಲದಿದ್ರೆ ಬಿಜೆಪಿ ಬಿದ್ದು ಹೋಗಲ್ಲ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜನರು ಬಿಜೆಪಿ ಗೆಲ್ಲಿಸುತ್ತಾರೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಹೇಳಿದರು.

ಕೊಪ್ಪಳದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಓಲೈಕೆಗಾಗಿ ವಿವಿಧ ಸಮುದಾಯಗಳ ಪ್ರಾಧಿಕಾರ ಘೋಷಣೆ ಮಾಡಿಲ್ಲ. ಆಯಾ ಸಮುದಾಯಗಳ ಬೇಡಿಕೆಗೆ ಅನುಗುಣವಾಗಿ ಪ್ರಾಧಿಕಾರ ರಚಿಸಲಾಗಿದೆ.… ..ಮುಂದೆ ಓದಿ

ಕೊಪ್ಪಳ; ಆ.2 ರಂದು‌ 215 ಕರೋನ ಸೋಂಕಿತರು ಪತ್ತೆ

ವಿಜಯಪರ್ವ ಸುದ್ದಿ, ಕೊಪ್ಪಳ
ಜಿಲ್ಲೆಯ ಇತಿಹಾಸದಲ್ಲೇ ಮೊದಲಬಾರಿಗೆ ಇಂದು 215 ಕೋವಿಡ್19 ಸೋಂಕಿತರು ಪತ್ತೆಯಾಗಿದ್ದಾರೆ.‌ ಜಿಲ್ಲೆಯ ಒಟ್ಟೂ ಪ್ರಕರಣಗಳ ಸಂಖ್ಯೆ 1493 ಏರಿಕೆಯಾಗಿದೆ.‌ ಆಗಸ್ಟ್ 2 ರಂದು ಒಂದೇ ದಿನ ಪತ್ತೆಯಾಗಿರುವ ಸಂಖ್ಯೆ ಅತ್ಯಧಿಕ ಸಂಖ್ಯೆಯ ಪ್ರಕರಣವಾಗಿವೆ. ಗಂಗಾವತಿ ತಾಲೂಕಿನಲ್ಲಿ 110, ಕೊಪ್ಪಳ ತಾಲೂಕಿನಲ್ಲಿ 53, ಕುಷ್ಟಗಿ ತಾಲೂಕಿನಲ್ಲಿ 24, ಹಾಗೂ ಯಲಬುರ್ಗಾ ತಾಲೂಕಿನಲ್ಲಿ 28 ಸೋಂಕಿತರು ಪತ್ತೆಯಾಗಿದ್ವೆದಾರೆ.…
..ಮುಂದೆ ಓದಿ

ಆಗಸ್ಟ್ 2ರಂದು ಲಾಕ್ ಡೌನ್ ಇರಲ್ಲ: ಜಿಲ್ಲಾಧಿಕಾರಿ

ವಿಜಯಪರ್ವ ಸುದ್ದಿ, ಕೊಪ್ಪಳ
ನಾಳೆ(ಆಗಸ್ಟ್.2) ಸಂಡೇ ಲಾಕ್ ಡೌನ್ ಇರುವುದಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಸ್.ವಿಕಾಸ ಕಿಶೋರ ಹೇಳಿದ್ದಾರೆ.
ಇನ್ನು ಕೊಪ್ಪಳ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಜಿಲ್ಲಾಧಿಕಾರಿ, ಲಾಕ್ ಡೌನ್ ಇಲ್ಲದಿದ್ದರೂ ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಜೊತೆಗೆ ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಚಟುವಟಿಕೆ ನಡೆಸಬೇಕು.…
..ಮುಂದೆ ಓದಿ

ಕೋವಿಡ್19 ಸೋಂಕಿತರ ಸಂಖ್ಯೆ ಹೆಚ್ಚಿದ್ದರಿಂದ ಆತಂಕ ಬೇಡ: ಜಿಲ್ಲಾಧಿಕಾರಿ

ವಿಜಯಪರ್ವ ಸುದ್ದಿ,‌ ಕೊಪ್ಪಳ:
ಜಿಲ್ಲೆಯಲ್ಲಿ ಇಂದು 141 ಕೋವಿಡ್19 ಸೋಂಕಿತರು ಪತ್ತೆಯಾಗಿದ್ದು,‌ ಗಂಗಾವತಿ ತಾಲೂಕಿನಲ್ಲೇ 121 ಜನರಲ್ಲಿ ಕೋವಿಡ್19 ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಎಸ್.ವಿಕಾಸ‌‌ ಕಿಶೋರ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೆ ವಿಶೇಷವಾಗಿ ಸಂದೇಶ ಕಳುಹಿಸಿ, ಕೊಪ್ಪಳ ಮೆಡಿಕಲ್ ಕಾಲೇಜಿನಲ್ಲಿ ಹಾಗೂ ವಾಹನಗಳ ಮೂಲಕ ಆ್ಯಾಂಟಿ ಜೆನ್ ಕಿಟ್ ನಿಂದ ನಡೆಯುತ್ತಿರುವ ವ್ಯವಸ್ಥಿತ ಪರೀಕ್ಷಾ ವಿಧಾನದಿಂದ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.…
..ಮುಂದೆ ಓದಿ

ಕೊಪ್ಪಳದಲ್ಲಿ ಕೋವಿಡ್19ಗೆ ಇಂದು 2 ಬಲಿ;ಸಾವಿನ ಸಂಖ್ಯೆ 16ಕ್ಕೆ ಏರಿಕೆ

ವಿಜಯಪರ್ವ ಸುದ್ದಿ, ಕೊಪ್ಪಳ:

ಜುಲೈ 24ರಂದು ಕೊಪ್ಪಳ ಜಿಲ್ಲೆಯಲ್ಲಿ ಕೋವಿಡ್19 ಸೋಂಕಿತ ಇಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ,16ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ ಮತ್ತೇ ಏರುಗತಿಯಲ್ಲಿ ಸಾಗಿದೆ.
ಜುಲೈ 23ರಂದು ರಾತ್ರಿ 10-30ರ ಸುಮಾರಿಗೆ ಕೋವಿಡ್19 ಆಸ್ಪತ್ರೆಗೆ ದಾಖಲಾಗಿದ್ದ ಕೊಪ್ಪಳ ನಗರದ 49 ವರ್ಷದ ವ್ಯಕ್ತಿ ಶುಕ್ರವಾರ ರಾತ್ರಿ 12.50ರ ಸುಮಾರಿಗೆ ಅಂದರೆ ಆಸ್ಪತ್ರೆಗೆ ದಾಖಲಾದ ಎರಡು ಗಂಟೆಯಲ್ಲಿ ಮೃತಪಟ್ಟಿದ್ದಾನೆ.…
..ಮುಂದೆ ಓದಿ

ಕೊಪ್ಪಳದಲ್ಲಿ ಕೋವಿಡ್19ಗೆ 14ನೇ ಬಲಿ; ಒಂದೇ ದಿನ ಎರಡು ಸಾವು

ವಿಜಯಪರ್ವ ಸುದ್ದಿ,‌ ಕೊಪ್ಪಳ:
ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದ್ದ 14ನೇ ವ್ಯಕ್ತಿ ‌ಮೃತಪಟ್ಟಿದ್ದು, ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಕೊಪ್ಪಳ ನಗರದ 32 ವರ್ಷದ ವ್ಯಕ್ತಿ ಮೃತಪಟ್ಟಿದ್ದಾರೆ. ಒಂದೇ ದಿನ ಇಬ್ಬರು ಮೃತಪಟ್ಟಿದ್ದು, ಸಹಜವಾಗಿಯೇ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. ಸಾವಿಗೆ ಕೇವಲ ಕೋವಿಡ್19 ವೈರಸ್ ಕಾರಣವಲ್ಲ ಬದಲಾಗಿ ಮೃತ ವ್ಯಕ್ತಿ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ‌ ಡಾ.ದಾನರೆಡ್ಡಿ…
..ಮುಂದೆ ಓದಿ

ಭಾಗ್ಯನಗರ, ಗಂಗಾವತಿ ಸೇರಿ 10 ಕಡೆ ಲಾಕ್ ಡೌನ; ಅನಗತ್ಯ ಓಡಾಡಿದ್ರೆ ಕ್ವಾರೆಂಟೆನ್!

ವಿಜಯಪರ್ವ ಸುದ್ದಿ, ಕೊಪ್ಪಳ:
ಜಿಲ್ಲೆಯ ಗಂಗಾವತಿ ನಗರ ಸೇರಿ ಒಟ್ಟು 10 ಪ್ರದೇಶಗಳು ನಾಳೆ ರಾತ್ರಿ 8 ಗಂಟೆಯಿಂದ ಲಾಕ್ ಡೌನ್ ಆಗಲಿವೆ ಎಂದು ಜಿಲ್ಲಾಧಿಕಾರಿ ಎಸ್. ವಿಕಾಸ ಕಿಶೋರ ಹೇಳಿದರು.
ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಗಂಗಾವತಿ ತಾಲೂಕಿನ ಗಂಗಾವತಿ ನಗರ, ಮರ್ಲಾನಹಳ್ಳಿ, ಹೇರೂರು, ಹಣವಾಳ, ಕೊಪ್ಪಳ ತಾಲೂಕಿನ ಭಾಗ್ಯನಗರ, ಮುನಿರಾಬಾದ್, ಹುಲಗಿ, ಹಿರೇಸಿಂಧೋಗಿ, ಯಲಬುರ್ಗಾ ತಾಲೂಕಿನ ಮಂಗಳೂರು ಹಾಗೂ ಕುಷ್ಟಗಿ ತಾಲೂಕಿನ ನವಲಳ್ಳಿ ಗ್ರಾಮಗಳು ಲಾಕ್ ಡೌನ್ ಆಗಲಿವೆ ಎಂದು ತಿಳಿಸಿದರು.…
..ಮುಂದೆ ಓದಿ

error: Content is protected !!