ಶಿಕ್ಷಕ ಕಾಸಿಂ ಅಕ್ರಮ ನಿಯೋಜನೆ ರದ್ದು: ʼವಿಜಯ ಪರ್ವʼ ವರದಿಗಳ ಫಲಶೃತಿ

ವಿಜಯ ಪರ್ವ ಸುದ್ದಿ | ಕೊಪ್ಪಳ

ಶಿಕ್ಷಕರನ್ನು ಬೋಧಕೇತರ ಹುದ್ದೆಗಳಿಗೆ ನಿಯೋಜನೆ ಮಾಡುವ ದಂಧೆಗೆ ಕಡಿವಾಣ ಹಾಕಿದೆ ಸರಕಾರ.

ಇದರ ಅಂಗವಾಗಿ ಕೊಪ್ಪಳ ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರ ಹುದ್ದೆಗೆ ಅಕ್ರಮವಾಗಿ ನಿಯೋಜನೆಗೊಂಡಿದ್ದ ಕೊಪ್ಪಳ ನಗರದ ಹೈಸ್ಕೂಲ್‌ ಶಿಕ್ಷಕ ಕಾಸಿಂ ಸಂಕನೂರ ಅವರ ನಿಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಕುರಿತು ಶಿಕ್ಷಣ ಇಲಾಖೆಯ (ಪ್ರೌಢಶಿಕ್ಷಣ) ಸರಕಾರದ ಆಧೀನ ಕಾರ್ಯದರ್ಶಿಗಳು ಆಗಸ್ಟ್‌ 6 ರಂದು ಹೊರಡಿಸಿರುವ ಆದೇಶದ ಪ್ರತಿ ʼವಿಜಯ ಪರ್ವʼಕ್ಕೆ ಲಭ್ಯವಾಗಿದೆ...ಮುಂದೆ ಓದಿ

ಶಿಕ್ಷಕರ ನಿಯೋಜನೆ ಎಂಬ ಕಾನೂನುಬಾಹಿರ ದಂಧೆ

ದಿನಾಂಕ 8-11-2011 ರಂದು ರಾಜ್ಯ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಜಿ. ಕುಮಾರ ನಾಯಕ್ ಅವರು ರಾಜ್ಯದ ಶಿಕ್ಷಣ ಇಲಾಖೆಯ ಎಲ್ಲಾ ಉಪನಿರ್ದೇಶಕರಿಗೆ ಒಂದು ಸುತ್ತೋಲೆ ಕಳಿಸುತ್ತಾರೆ (ಸಂಖ್ಯೆ: ಇಡಿ  300 ಡಿಜಿಡಿ 2011).

ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಸಹ ಶಿಕ್ಷಕರುಗಳನ್ನು ಬೋಧಕೇತರ ಕಾರ್ಯಗಳಿಗಾಗಿ ಬೇರೆ ಬೇರೆ ಕಚೇರಿಗಳಿಗೆ ನಿಯೋಜಿಸುವುದರಿಂದ ಶಾಲಾ ಕಾಲೇಜುಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಲಾರದ ನಷ್ಟವಾಗುತ್ತದೆ...ಮುಂದೆ ಓದಿ

ಶಾಲೆ- ಕಾಲೇಜಿಗೆ ಮಳೆಗಾಲದ ರಜೆ ಪದ್ದತಿ ಜಾರಿ ಮಾಡಿ; ಕೇಂದ್ರಕ್ಕೆ ಅಶೋಕ ಸ್ವಾಮಿ ಪತ್ರ

ವಿಜಯಪರ್ವ ಸುದ್ದಿ, ಗಂಗಾವತಿ

ಕೋವಿಡ್19 ವೈರಸ್ ಹರಡುವ ಭೀತಿಯಿಂದ ಶಾಲೆ- ಕಾಲೇಜು ಪ್ರವೇಶ ತಡವಾಗಿದೆ. ಅದಕ್ಕಾಗಿ ಇನ್ನು ಮುಂದೆ ಶೈಕ್ಷಣಿಕ ರಜೆಯನ್ನು ಎಪ್ರೀಲ್, ಮೇ, ಅಕ್ಟೋಬರ್ ಬದಲಿಗೆ ಮಳೆಗಾಲದಲ್ಲಿ ರಜೆ ನೀಡಿದರೆ ಒಳ್ಳೆಯದು ಎಂದು ಕೊಪ್ಪಳ ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ.

ಮಳೆಗಾಲದಲ್ಲಿ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜಿಗೆ ಹೋಗಿ ಬರಲು ತೊಂದರೆ ಆಗುತ್ತೆ.… ..ಮುಂದೆ ಓದಿ

ಎಸ್ಸೆಸ್ಸೆಲ್ಸಿ ಫಲಿತಾಂಶ; ಭಗತ್ ಶಿವಕುಮಾರ ಕಟ್ಟಿಮನಿ ಮೋದೇವ ಶಾಲೆಗೆ 2ನೇ ಸ್ಥಾನ

ವಿಜಯಪರ್ವ ಸುದ್ದಿ, ಕುಕನೂರು
ಪಟ್ಟಣದ ವಿದ್ಯಾರ್ಥಿ ಭಗತ್ ಶಿವಕುಮಾರ ಕಟ್ಟಿಮನಿ ಶೇ.93.76 ಅಂಕದೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ಕುಕನೂರು ತಾಲೂಕು ತಳಕಲ್ ಗ್ರಾಮದ ಅಲ್ಪಸಂಖ್ಯಾತರ(ಆಂಗ್ಲ ಮಾಧ್ಯಮ) ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 2ನೇ ಸ್ಥಾನ ಪಡೆದಿದ್ದಾನೆ. ಕೂಕನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಅವರ ಪುತ್ರ. ವಿದ್ಯಾರ್ಥಿಗೆ ಕೊಪ್ಪಳದ ಕಟ್ಟಿಮನಿ ಕುಟುಂಬ ಸದಸ್ಯರು ಅಭಿನಂದಿಸಿದ್ದಾರೆ.

ಶಾಲೆಯ ಪ್ರಾಚಾರ್ಯ ಡಾ.… ..ಮುಂದೆ ಓದಿ