VIDEO/ ಸಿದ್ದರಾಮಯ್ಯ ಮೊದಲು ತಮ್ಮದನ್ನು ತಾವು ತೊಳೆದುಕೊಳ್ಳಲಿ: ಬಿ.ಸಿ.ಪಾಟೀಲ್

ವಿಜಯಪರ್ವ ಸುದ್ದಿ,‌ ಕೊಪ್ಪಳ

ಮಾಜಿ ಸಿಎಂ ಸಿದ್ದರಾಮಯ್ಯ ಮೊದಲು ತಮ್ಮದನ್ನು ತಾವು ತೊಳೆದುಕೊಳ್ಳಲಿ. ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದೆ, ಮತ್ತೊಬ್ಬರ ತಾಟಿನ ನೊಣ ತೆಗೆಯೋದು ಬೇಡ ಎಂದು ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ತಿರುಗೇಟು ನೀಡಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ‌ ಭಾನುವಾರ ಮಾತನಾಡಿ, ಯಡಿಯೂರಪ್ಪ ‌ಸಿಎಂ ಸ್ಥಾನದಿಂದ ಕೆಳಗಿಳಿದರೆ ಕಾಂಗ್ರೆಸ್ ‌ತೊರೆದ 17 ಶಾಸಕರದ್ದು ನಾಯಿ ಪಾಡು ಆಗುತ್ತೆ ಎಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮಾತಿಗೆ ತಿರುಗೇಟು ನೀಡಿದರು.… ..ಮುಂದೆ ಓದಿ

ಕರೋನ‌ ಸಣ್ಣ ಕಾಯಿಲೆ, ಭಯ ಬೇಡ; ಮಾಜಿ ಸಿಎಂ‌ ಸಿದ್ದರಾಮಯ್ಯ

ವಿಜಯಪರ್ವ ಸುದ್ದಿ, ಬೆಂಗಳೂರು
ಕೋವಿಡ್19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ.‌ ಕರೋನ ದೊಡ್ಡ ಕಾಯಿಲೆ ಅಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯರನ್ನು ಅವರ ನಿವಾಸದಲ್ಲಿ ಭೇಟಿಯಾದ ಸುದ್ದಿಗಾರರೊಂದಿಗೆ‌ ಶನಿವಾರ ಮಾತನಾಡಿದರು.

ಕೋವಿಡ್19 ವಾಸಿಯಾಗದ ಕಾಯಿಲೆ ಏನಲ್ಲ. ಚಿಕಿತ್ಸೆ ನಂತರ ವೈದ್ಯರ ಸಲಹೆಯಂತೆ ನಾನು ಹೋಂ ಕ್ವಾರಂಟೈನ್‍ಗೆ ಒಳಗಾಗಿದ್ದೆ. ಇವತ್ತಿನಿಂದ ಎಂದಿನಂತೆ ಎಲ್ಲ ಚಟುವಟಿಕೆಯಲ್ಲಿ ಭಾಗಿಯಾಗುತ್ತೇನೆ.… ..ಮುಂದೆ ಓದಿ

ಸರ್ಕಾರ, ಸಚಿವರು ಅವ್ಯವಹಾರ ಮಾಡಿಲ್ಲವೆಂದರೆ ತನಿಖೆ ಏಕೆ ಬೇಡ?; ಸಿದ್ದರಾಮಯ್ಯ ಪ್ರಶ್ನೆ

ವಿಜಯಪರ್ವ ಸುದ್ದಿ ಬೆಂಗಳೂರು:
ವೈದ್ಯಕೀಯ ಉಪಕರಣಗಳ ಖರೀದಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸರ್ಕಾರ ಅಕ್ರಮ ಮಾಡಿಲ್ಲ, ಸಚಿವರು ಸತ್ಯವಂತರು ಎನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ ? ಇದು ಭಂಡತನದ ಪರಮಾವಧಿ ಎಂದು ಮಾಜಿ ಸಿಎಂ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ದ ಹರಿಹಾಯ್ದಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಖರೀದಿ ಅವ್ಯವಹಾರದ 14 ದಾಖಲೆಗಳನ್ನು ಕೊಟ್ಟಿದ್ದೇವೆ.…
..ಮುಂದೆ ಓದಿ