ಯಲಬುರ್ಗಾ ಸೀನಿಯರ್ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಲಂಚಾವತಾರ – ಭಾಗ 1

ವಿಜಯಪರ್ವ ವಿಶೇಷ

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಸೀನಿಯರ್‌ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಸೀನಿಯರ್‌ ಸಬ್‌ ರಿಜಿಸ್ಟ್ರಾರ್‌ ಆಗಿರುವ ರೆಹಮಾನ್‌ ಅವರನ್ನು ಡಿಟಿಪಿ ಆಪರೇಟರ್‌ ಬಸಣ್ಣ ಎಂಬಾತ ಕಚೇರಿಯಲ್ಲಿಯೇ ತರಾಟೆಗೆ ತೆಗೆದುಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

‌ಯಲಬುರ್ಗಾದ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ರೆಹಮಾನ್‌ ಹಾಗೂ ಡಿಟಿಪಿ ಆಪರೇಟರ್‌ ಬಸಣ್ಣ ನಡುವೆ ನಡೆದ ವಾಗ್ವಾದ ಹಾಗೂ ಆರೋಪ ಮತ್ತು ಪ್ರತ್ಯಾರೋಪಗಳು ವಿಡಿಯೊದಲ್ಲಿ ದಾಖಲಾಗಿವೆ...ಮುಂದೆ ಓದಿ

ಅಬಕಾರಿ ಆಡಿಯೋ ಸುತ್ತ ಪೋಸ್ಟ್‌, ಡಿಲೀಟ್‌ ಆಟ

ವಿಜಯ ಪರ್ವ ಸುದ್ದಿ | ಕೊಪ್ಪಳ

ಅಬಕಾರಿ ಇಲಾಖೆಯ ದಾಳಿ ಮತ್ತು ವಸೂಲಿಗೆ ಸಂಬಂಧಿಸಿದಂತೆ ಕೆಲವು ಆಡಿಯೊಗಳು ಭಾನುವಾರ (20-6-2021) ಸಂಜೆಯಿಂದ ಭಾರೀ ಸುದ್ದಿ ಮಾಡುತ್ತಿವೆ.

ಬಾರುಗಳಿಂದ ಅಕ್ರಮವಾಗಿ ಮಾಮೂಲು ವಸೂಲು ಮಾಡುವುದಕ್ಕೆ ಸಂಬಂಧಿಸಿದಂತೆ ಕಹಿಯಾದ ಬೆಳವಣಿಗೆಯೊಂದರ ಮೂಲ ಈ ಆಡಿಯೊಗಳಲ್ಲಿದೆ. ಅಬಕಾರಿ ಸಚಿವರು ಹಾಗೂ ಜಂಟಿ ಆಯುಕ್ತರ ಸೂಚನೆಯ ಮೇರೆಗೆ ಪ್ರತಿಯೊಂದು ಬಾರುಗಳು ನೀಡಬೇಕಾದ ಮಾಮೂಲು ಹೆಚ್ಚಬೇಕೆಂದು ಅಬಕಾರಿ ಡಿ.ಸಿ...ಮುಂದೆ ಓದಿ