ಕೃಷಿ ಮಂತ್ರಿ ಬಿ.ಸಿ.ಪಾಟೀಲ್ 10 ವರ್ಷದಿಂದ ಚುನಾವಣೆ ನೋಡ್ತಿದ್ದಾರೆ; ರಾಜಕೀಯ ಅನುಭವದ ಬಗ್ಗೆ ಮಾಜಿ ಮಂತ್ರಿ ವ್ಯಂಗ್ಯ

ವಿಜಯಪರ್ವ ಸುದ್ದಿ, ಕೊಪ್ಪಳ
ಕೃಷಿ ಮಂತ್ರಿ ಬಿ.ಸಿ. ಪಾಟೀಲ್ ಕೇವಲ ‌10 ವರ್ಷದಿಂದ ಚುನಾವಣೆ, ‌ರಾಜಕಾರಣ ನೋಡಿರಬಹುದು. ಆದರೆ, ನಾನು ನನ್ನ 19ನೇ ವಯಸ್ಸಿನ ಕಾಲೇಜು ಜೀವನದಿಂದ ರಾಜಕಾರಣ ಮಾಡುತ್ತಿದ್ದೇನೆ ಎಂದು ಮಾಜಿ ಮಂತ್ರಿ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

ಕೊಪ್ಪಳದಲ್ಲಿ ವಿದ್ಯುತ್‌ ‌ದರ ಏರಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಂತರ ಭಾನುವಾರ ಮಾತನಾಡಿ, ಇವಿಎಂ ನಿಂದ ಬಿಜೆಪಿ ಚುನಾವಣೆ ಗೆಲ್ಲುತ್ತಿದೆ ಎಂಬ ಶಿವರಾಜ ತಂಗಡಗಿ ಹೇಳಿಕೆಗೆ ಕೃಷಿ ಮಂತ್ರಿ ಬಿ.ಸಿ.ಪಾಟೀಲ್… ..ಮುಂದೆ ಓದಿ

ಸಹೋದರನ ಮನೆ ನಿವೇಶನ ವಿವಾದ ಪ್ರಕರಣ; ಮಾಜಿ ಮಂತ್ರಿ ಶಿವರಾಜ‌ ತಂಗಡಗಿಗೆ ಹಿನ್ನಡೆ?- ಹೈಕೋರ್ಟ್ ಹೇಳಿದ್ದೇನು?


ಸಹೋದರನ ಮನೆ ನಿವೇಶನ ವಿವಾದ ಪ್ರಕರಣ; ಮಾಜಿ ಮಂತ್ರಿ ಶಿವರಾಜ‌ ತಂಗಡಗಿಗೆ ಹಿನ್ನಡೆ?- ಹೈಕೋರ್ಟ್ ಹೇಳಿದ್ದೇನು?

| ಮಾಜಿ ಮಂತ್ರಿ ಶಿವರಾಜ ತಂಗಡಗಿ ಅವರ ಕಾರಟಗಿ ಮನೆ ನಿವೇಶನ ವಿವಾದ ಪ್ರಕರಣ
| ಕೊಪ್ಪಳ ಡಿಸಿ ಕೋರ್ಟ್ ನಲ್ಲೇ ಪ್ರಕರಣ ಇತ್ಯರ್ಥ ಮಾಡಿಕೊಳ್ಳಿ;ಹೈಕೋರ್ಟ್
| ಸಹೋದರನ ರಕ್ಷಣೆಗೆ ಆಗಿನ ಡಿಸಿ ತುಳಸಿ ಮದ್ದಿನೇನಿ ವರ್ಗಾವಣೆ ಮಾಡಿದ್ದ ಆರೋಪ

ವಿಜಯಪರ್ವ ವಿಶೇಷ, ಕೊಪ್ಪಳ

ಮಾಜಿ ಮಂತ್ರಿ ಶಿವರಾಜ ತಂಗಡಗಿ ಸಹೋದರ ನಾಗರಾಜ ಅವರ ಕಾರಟಗಿ ಮನೆ ಜಾಗದ ವಿವಾದ ಪ್ರಕರಣ ಮತ್ತೇ ಮುನ್ನೆಲೆಗೆ ಬಂದಿದೆ.‌… ..ಮುಂದೆ ಓದಿ

ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಗೆ ಬಿಜೆಪಿ ಕಾರ್ಯಕರ್ತರಿಂದಲೇ ಘೇರಾವ್!

ವಿಜಯಪರ್ವ ಸುದ್ದಿ, ಕೊಪ್ಪಳ

ಜಿಲ್ಲೆಯಲ್ಲಿ ಭತ್ತದ ಖರೀದಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಸ್ವಪಕ್ಷದ ಕಾರ್ಯಕರ್ತರೇ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಘೇರಾವ್ ಹಾಕಿ ಭಾನುವಾರ‌ ಮನವಿ ಸಲ್ಲಿಸಿದರು.

ಕೊಪ್ಪಳ ತಾಲೂಕು ಹಿಟ್ನಾಳ ಹೋಬಳಿಯ ಹತ್ತಾರು ರೈತರು ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಅವರಿಗೆ ಕೊಪ್ಪಳದ ಜಿಲ್ಲಾ‌ ಕ್ರೀಡಾಂಗಣದ ಮುಂದೆ ಘೇರಾವ್ ಹಾಕಿ ಕೂಡಲೇ ಕೊಪ್ಪಳ ಮತ್ತು ಹಿಟ್ನಾಳ ಹೋಬಳಿ ವ್ಯಾಪ್ತಿಯಲ್ಲಿ ಭತ್ತದ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.… ..ಮುಂದೆ ಓದಿ

ಹಾಲಿ-ಮಾಜಿ‌ ಶಾಸಕರ‌ ಪ್ರತಿಷ್ಠೆಗೆ ವೇದಿಕೆ ಆಯ್ತಾ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ?

ವಿಜಯಪರ್ವ ಸುದ್ದಿ, ಗಂಗಾವತಿ
ಗಂಗಾವತಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನವೆಂಬರ್ 2ಕ್ಕೆ ನಿಗದಿಯಾಗಿದೆ.‌ ಚುನಾವಣೆ ದಿನ ನಿಗದಿಯಾದ ದಿನದಿಂದ ‌ದಿನಕ್ಕೊಂದು ಹೈಡ್ರಾಮಾ ನಡೆಯುತ್ತಿದ್ದು, ಹಾಲಿ- ಮಾಜಿ ಶಾಸಕರ ಪ್ರತಿಷ್ಠೆಗೆ ಚುನಾವಣೆ ವೇದಿಕೆಯಾಗಿದೆ.

ಈಗಾಗಲೇ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ ಮಾಡಿಸಿರೋ ಶಾಸಕ ಪರಣ್ಣ ಮುನವಳ್ಳಿ ನಗರಸಭೆಯಲ್ಲಿ ಅಧಿಕಾರ ಹಿಡಿಯಲು‌ ಶತ‌ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಬಿಜೆಪಿಯಿಂದ ಹೊರ ಬಂದಿರೋ ಮುಖಂಡ ಸೈಯದ್ ಅಲಿ, ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮುಖಭಂಗ ಮಾಡುಲು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಪಾಳೆಯದಲ್ಲಿ‌ ನಿಂತು ಗೇಮ್ ಪ್ಲೇ ಮಾಡುತ್ತಿದ್ದಾರೆ.‌… ..ಮುಂದೆ ಓದಿ

ನಗದು, ಚಿನ್ನಾಭರಣ ಕಳ್ಳತನ; 24 ಗಂಟೆ ಒಳಗೆ ಆರೋಪಿಗಳ ಬಂಧನ

ವಿಜಯಪರ್ವ ಸುದ್ದಿ, ಕುಕನೂರು
ಜಿಲ್ಲೆಯ ಕುಕನೂರು ತಾಲೂಕು ತಳಕಲ್ ಗ್ರಾಮದಲ್ಲಿ ಗುರುವಾರ ರಾತ್ರಿ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು 24 ಗಂಟೆ ಒಳಗೆ ಪತ್ತೆ ಮಾಡಿದ್ದಾರೆ.

ಆರೋಪಿಗಳು ಮನೆಯೊಂದರಲ್ಲಿ ಸುಮಾರು 3,16,500 ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ದೋಚಿದ್ದರು.‌ ಕುಕನೂರು ಪೊಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಶಿವಯೋಗೆಪ್ಪ ಅಲಿಯಾಸ್ ಶಿವು ತಂದೆ ಶೇಖಪ್ಪ ಸುರತಾನಿ (25) ಎಂದು ಗುರುತಿಸಲಾಗಿದೆ.… ..ಮುಂದೆ ಓದಿ

ಎಸ್ಸೆಸ್ಸೆಲ್ಸಿ ಫಲಿತಾಂಶ; ಭಗತ್ ಶಿವಕುಮಾರ ಕಟ್ಟಿಮನಿ ಮೋದೇವ ಶಾಲೆಗೆ 2ನೇ ಸ್ಥಾನ

ವಿಜಯಪರ್ವ ಸುದ್ದಿ, ಕುಕನೂರು
ಪಟ್ಟಣದ ವಿದ್ಯಾರ್ಥಿ ಭಗತ್ ಶಿವಕುಮಾರ ಕಟ್ಟಿಮನಿ ಶೇ.93.76 ಅಂಕದೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ಕುಕನೂರು ತಾಲೂಕು ತಳಕಲ್ ಗ್ರಾಮದ ಅಲ್ಪಸಂಖ್ಯಾತರ(ಆಂಗ್ಲ ಮಾಧ್ಯಮ) ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 2ನೇ ಸ್ಥಾನ ಪಡೆದಿದ್ದಾನೆ. ಕೂಕನೂರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಿವಕುಮಾರ ಕಟ್ಟಿಮನಿ ಅವರ ಪುತ್ರ. ವಿದ್ಯಾರ್ಥಿಗೆ ಕೊಪ್ಪಳದ ಕಟ್ಟಿಮನಿ ಕುಟುಂಬ ಸದಸ್ಯರು ಅಭಿನಂದಿಸಿದ್ದಾರೆ.

ಶಾಲೆಯ ಪ್ರಾಚಾರ್ಯ ಡಾ.… ..ಮುಂದೆ ಓದಿ

ಹೊಲದಲ್ಲಿ ಹಾವು‌ ಕಚ್ಚಿ ಸಹೋದರರಿಬ್ಬರು ಸಾವು

ವಿಜಯಪರ್ವ ಸುದ್ದಿ, ಕೊಪ್ಪಳ
ಜಿಲ್ಲೆಯ ಕುಷ್ಟಗಿ ತಾಲೂಕು ರಂಗಾಪೂರ ಗ್ರಾಮದ ಜಮೀನಿನಲ್ಲಿ ಹಾವು ಕಡಿತದಿಂದ ಹೋದರರಿಬ್ಬರು ಮೃತಪಟ್ಟಿದ್ದಾರೆ.‌ ಪ್ರಶಾಂತ ಹನುಮಪ್ಪ ಜಗಳೂರು‌ (20), ಶಿವಕುಮಾರ ಹನುಮಪ್ಪ ಜಗಳೂರು(15) ಮೃತರು. ತೋಟದ ಮನೆಯಲ್ಲಿ ವಾಸವಾಗಿದ್ದ ಕುಟುಂಬದ‌ ಈ ಯುವಕರು ಜಾನುವಾರುಗಳಿಗೆ ಮೇವು ಹಾಕಲು ಬಣವೆಯಿಂದ ತೆಗೆಯುವಾಗ ಹಾವು ಕಚ್ಚಿದೆ.

ಹಾವು ಕಡಿತದ ಬಳಿಕ ಚಿಕಿತ್ಸೆಗಾಗಿ ಹನುಮನಾಳದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತರುವ ಮಾರ್ಗದಲ್ಲೇ‌ ಕೊನೆಯುಸಿರು ಎಳೆದಿದ್ದಾರೆ.… ..ಮುಂದೆ ಓದಿ

ಆಗಸ್ಟ್ 2ರಂದು ಲಾಕ್ ಡೌನ್ ಇರಲ್ಲ: ಜಿಲ್ಲಾಧಿಕಾರಿ

ವಿಜಯಪರ್ವ ಸುದ್ದಿ, ಕೊಪ್ಪಳ
ನಾಳೆ(ಆಗಸ್ಟ್.2) ಸಂಡೇ ಲಾಕ್ ಡೌನ್ ಇರುವುದಿಲ್ಲ. ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿವೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಎಸ್.ವಿಕಾಸ ಕಿಶೋರ ಹೇಳಿದ್ದಾರೆ.
ಇನ್ನು ಕೊಪ್ಪಳ ಸಾರ್ವಜನಿಕರಲ್ಲಿ ಮನವಿ ಮಾಡಿರುವ ಜಿಲ್ಲಾಧಿಕಾರಿ, ಲಾಕ್ ಡೌನ್ ಇಲ್ಲದಿದ್ದರೂ ಸಾರ್ವಜನಿಕರು ಅನಗತ್ಯವಾಗಿ ಓಡಾಡುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ಜೊತೆಗೆ ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಂಡು ಚಟುವಟಿಕೆ ನಡೆಸಬೇಕು.…
..ಮುಂದೆ ಓದಿ

ಕಾರ್ಮಿಕ ಮಂತ್ರಿ ಶಿವರಾಂ ಹೆಬ್ಬಾರಿಗೆ ವಿಪ್ರ ಸಮಾಜದ ಸನ್ಮಾನ

ವಿಜಯಪರ್ವ ಸುದ್ದಿ,‌ ಕೊಪ್ಪಳ:
ಜಿಲ್ಲಾ ಪ್ರವಾಸ ಕೈಗೊಂಡಿದ್ದ ಕಾರ್ಮಿಕ ಮಂತ್ರಿ ಶಿವರಾಂ ಹೆಬ್ಬಾರ ಅವರಿಗೆ ಬ್ರಾಹ್ಮಣ ಸಮಾಜದಿಂದ ಸನ್ಮಾನಿಸಲಾಯಿತು. ಕಾರ್ಮಿಕ ಇಲಾಖೆ ಪ್ರಗತಿ ಪ್ರರಿಶೀಲನೆಗೆ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ ಮಂತ್ರಿ, ರಾಘವೇಂದ್ರಮಠಕ್ಕೆ ಭೇಟಿ ನೀಡಿದ್ದರು. ಬಿಜೆಪಿ ಸರ್ಕಾರದಿಂದ ಸಮಾಜಕ್ಕೆ ಸಾಕಷ್ಟು ಅನುಕೂಲಗಳಾಗಿವೆ ಎಂದು ಸಮಾಜದ ಮುಖಂಡರು ಮಂತ್ರಿಗಳಿಗೆ ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಮಂತ್ರಿ ಶಿವರಾಂ ಹೆಬ್ಬಾರ, ಕೇಂದ್ರ ಸರ್ಕಾರ ಬ್ರಾಹ್ಮಣರಿಗೆ 10 ಕೋಟಿ ಅನುದಾನ ನೀಡಿದೆ.… ..ಮುಂದೆ ಓದಿ

ಇಸ್ಪೀಟ್ ಅಡ್ಡೆ ಮೇಲೆ ಪೊಲೀಸ್ ದಾಳಿ; ತಪ್ಪಿಸಿಕೊಂಡು ಓಡುವಾಗ ವ್ಯಕ್ತಿ ಸಾವು

ವಿಜಯಪರ್ವ ಸುದ್ದಿ, ಕೊಪ್ಪಳ:
ತಾಲೂಕಿನ ಸೂಳಿಕೇರಿ ಬಳಿ ನಡೆಯುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿದ್ದು, ತಪ್ಪಿಸಿಕೊಂಡು ಓಡಿ ಹೋಗುವಾಗ ವ್ಯಕ್ತಿಯೊಬ್ಬ ಮೃತಪಟ್ಟಿರೋ ಘಟನೆ ಕೊಪ್ಪಳದಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಕೊಪ್ಪಳ ಗ್ರಾಮೀಣ ಠಾಣೆ ಸಿಪಿಐ ರವಿ‌ ಉಕ್ಕುಂದ ಹಾಗೂ ಪಿಎಸ್ಐ ಸುರೇಶ ಅವರು ದಾಳಿ ಮಾಡಿದ್ದಾರೆ.
ಪೊಲೀಸರು ದಾಳಿ ಮಾಡುತ್ತಿದ್ದಂತೆಯೇ ಜೂಜುಕೋರರು ಸಹಜವಾಗಿಯೇ ಸ್ಥಳದಿಂದ ಚದುರಿ ಓಡಿ ಹೋಗಿದ್ದಾರೆ.…
..ಮುಂದೆ ಓದಿ

error: Content is protected !!