TB DAM ನೀರಿನ ಮಟ್ಟ‌ (ದಿನಾಂಕ:27-07-2021 @ 8.30Am)

ವಿಜಯಪರ್ವ ಮಾಹಿತಿ, ಹೊಸಪೇಟೆ

ತುಂಗಭದ್ರಾ ಜಲಾಶಯದ ನೀರಿನ ಮಟ್ಟ‌ (ದಿನಾಂಕ:27-07-2021 @ 8.30Am)

ಡ್ಯಾಂ ಸಾಮರ್ಥ್ಯ: 101.00  ಟಿಎಂಸಿ
ಇಂದಿನ ಸಂಗ್ರಹ: 95.531 ಟಿಎಂಸಿ
ಒಳ‌ ಹರಿವು: 148453 ಕ್ಯೂಸೆಕ್
ಹೊರ ಹರಿವು: 130913 ಕ್ಯೂಸೆಕ್
———————-
ಹಿಂದಿನ ವರ್ಷದ ಈ ದಿನ:
ಡ್ಯಾಂ ಸಾಮರ್ಥ್ಯ: 101.00 ಟಿಎಂಸಿ
ಇಂದಿನ ಸಂಗ್ರಹ: 39.320 ಟಿಎಂಸಿ
ಒಳ‌ ಹರಿವು: 8810 ಕ್ಯೂಸಕ್
ಹೊರ ಹರಿವು: 1431 ಕ್ಯೂಸೆಕ್
+2
..ಮುಂದೆ ಓದಿ

10ನೇ‌ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!

ವಿಜಯಪರ್ವ ಸುದ್ದಿ | ಕೊಪ್ಪಳ

ತಾಲೂಕಿನ ಗಿಣಿಗೇರ ರೈಲ್ವೇ ನಿಲ್ದಾಣದ ಸಮೀಪ ಹಳಿಗೆ ಬಿದ್ದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೊಪ್ಪಳ ತಾಲೂಕು ಕಲ್ಲತಾವರಗೇರ ಗ್ರಾಮದ ಕಾವೇರಿ ಸಣ್ಣಗುಂಡಪ್ಪ ಬಡಿಗೇರ (16) ಮೃತ ವಿದ್ಯಾರ್ಥಿನಿ. ಶುಕ್ರವಾರ ರಾತ್ರಿ ಗಿಣಿಗೇರ ರೈಲ್ವೇ ನಿಲ್ದಾಣದ  ಸಮೀಪದ ರೈಲು ಹಳಿಯ ಮೇಲೆ ಶವ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಳು.‌
..ಮುಂದೆ ಓದಿ

ಚಿನ್ನಾಭರಣ ಕಳ್ಳತನವಾಗಿದೆ ಎಂದು ಮಹಿಳೆ ದೂರು; ಆಕೆಯ ಪತಿಯನ್ನೇ ಜೈಲಿಗೆ ಕಳುಹಿಸಿರೊ ಪೊಲೀಸರು!

ವಿಜಯಪರ್ವ ಸುದ್ದಿ | ಕೊಪ್ಪಳ

ಬೇಲಿಯೇ ಎದ್ದು ಹೊಲ ಮೇಯ್ದಂತೆ ತನ್ನ ಸ್ವಂತ ಮನೆಯನ್ನೇ ದರೋಡೆ ಮಾಡಿದ ಚಾಲಾಕಿ ಕಳ್ಳ  ಪೊಲೀಸರ ತನಿಖೆ  ವೇಳೆ ತಪ್ಪೊಪ್ಪಿಕೊಂಡಿದ್ದಾನೆ.

ಕೊಪ್ಪಳದ ಕಿನ್ನಾಳ ರಸ್ತೆಯ ಕಲ್ಯಾಣ ನಗರದಲ್ಲಿ ವಾಸವಾಗಿದ್ದ ಜ್ಯೋತಿ ಎಂಬ ಮಹಿಳೆ ಜುಲೈ 8 ರಿಂದ ಜುಲೈ 17ರವರೆಗೆ ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋಗಿದ್ದಾರೆ. ವಾಪಸ್ ಬಂದು ನೋಡಿದಾಗ ತಮ್ಮ ಮನೆಯಲ್ಲಿದ್ದ 3,30,000 ನಗದು ಹಣ ಹಾಗೂ 6,60,000 ಬೆಲೆ ಬಾಳುವ 127 ಗ್ರಾಂ ತೂಕದ ನಾಪತ್ತೆಯಾಗಿರುತ್ತದೆ.… ..ಮುಂದೆ ಓದಿ

ಡಿವೈಎಸ್ಪಿ ನೇತೃತ್ವದಲ್ಲಿ ದಾಳಿ; 12 ಟನ್ ನಿಷೇಧಿತ ಆಫ್ರಿಕನ್ ಕ್ಯಾಟ್ ಫೀಶ್ ವಶ

ವಿಜಯಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಡಿವೈಎಸ್ಪಿ ಗೀತಾ ಬೇನಹಾಳ ನೇತೃತ್ವದಲ್ಲಿ ದಾಳಿ ಮಾಡಿರುವ ಪೊಲೀಸರು 12 ಟನ್ ನಿಷೇಧಿತ ಆಫ್ರಿಕನ್ ಕ್ಯಾಟ್ ಫೀಶ್ ಸಾಗಿಸುತ್ತಿದ್ದ ಲಾರಿ ಶನಿವಾರ ವಶಪಡಿಸಿಕೊಂಡಿದ್ದಾರೆ.

ಕೊಪ್ಪಳ ತಾಲೂಕು ಬೂದಗುಂಪಾ ಸಮೀಪ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಡಿವೈಎಸ್ಪಿ ಗೀತಾ ಅವರ ನೇತೃತ್ವದಲ್ಲಿ ಪೋಲೀಸ್ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಆಂಧ್ರ ಪ್ರದೇಶದ ನೆಲ್ಲೂರುನಿಂದ ಮಹಾರಾಷ್ಟ್ರದ ಚಿಂತಾಮಣಿಗೆ ಮೀನುಗಳನ್ನು ಸಾಗಿಸಲಾಗುತ್ತಿತ್ತು.… ..ಮುಂದೆ ಓದಿ

ಮದ್ಯ ಅಕ್ರಮ ಸಾಗಣೆ; ಅಳವಂಡಿ ಪೊಲೀಸರ ದಾಳಿ – ಮದ್ಯ, ನಗದು ವಶ

ವಿಜಯಪರ್ವ ಸುದ್ದಿ‌ | ಕೊಪ್ಪಳ

ತಾಲೂಕಿನ ಕವಲೂರು ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ರೂ. 22,666 ಮೌಲ್ಯದ ಮದ್ಯ ಹಾಗೂ ರೂ. 1,78,000 ನಗದು ಹಣವನ್ನು ಅಳವಂಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕವಲೂರು ಗ್ರಾಮದಲ್ಲಿ ಒಂದು ಟಾಟಾ ಇಂಡಿಕಾ ಕಾರಿನಲ್ಲಿ ಅಕ್ರಮವಾಗಿ ಮದ್ಯ ಹಾಗೂ ಹಣ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಪಿಎಸ್ಐ ಮಾರ್ತಂಡಪ್ಪ, ಎಚ್.ಸಿ.… ..ಮುಂದೆ ಓದಿ

ಮಾಜಿ ಸಿಎಂ ಎಚ್‌ಡಿಕೆ ಬಕೆಟ್ ಹಿಡಿವವರ ಮಾತು ಕೇಳ್ತಾರೆ; ಜೆಡಿಎಸ್ ಉಪಾಧ್ಯಕ್ಷ

ವಿಜಯಪರ್ವ ಸುದ್ದಿ ‌| ಕೊಪ್ಪಳ
ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಕೆಟ್ ಹಿಡಿಯುವವರು, ಕಿವಿ ಕಡಿವವರ ಮಾತು ಕೇಳುತ್ತಾರೆ. ಪಕ್ಷದ‌ ನಿಜವಾದ ಕಾರ್ಯಕರ್ತರಿಗೆ ಜೆಡಿಎಸ್ ನಲ್ಲಿ ಬೆಲೆ ಇಲ್ಲ. ಶೀಘ್ರದಲ್ಲೇ ಕೊಪ್ಪಳ ಜಿಲ್ಲೆಯ ಬಹುತೇಕ ಪದಾಧಿಕಾರಿಗಳು ರಾಜೀನಾಮೆ ನೀಡಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಪ್ರದೀಪಗೌಡ ಮಾಲಿಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಜೆಡಿ ಎಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪತ್ರ ಪ್ರದರ್ಶಿಸಿ ಕೊಪ್ಪಳದಲ್ಲಿ ಇಂದು ಮಾತನಾಡಿದರು.… ..ಮುಂದೆ ಓದಿ

ಟಿಕ್ ಟಾಕ್ ನಲ್ಲಿ ಪರಿಚಯ; ಶಾಸಕನ ಪುತ್ರ ಎಂದವನಿಗೆ ಮೈ, ಮನಸ್ಸು ಕೊಟ್ಟು ಯಾಮಾರಿದ ಯುವತಿ

ವಿಜಯಪರ್ವ ಸುದ್ದಿ, ಕೊಪ್ಪಳ
ತಾನು ಶಾಸಕನ ಪುತ್ರ ಎಂದು ಹೇಳಿಕೊಂಡು ಟಿಕ್ ಟಾಕ್ ನಲ್ಲಿ ಪರಿಚಯವಾದ ಯುವಕನೊಬ್ಬ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಆಕೆಯೊಂದಿಗೆ ಕಳೆದ ಖಾಸಗಿ ಕ್ಷಣಗಳ ಫೋಟೊ ಮತ್ತು ವಿಡಿಯೋ ತೋರಿಸಿ ಬ್ಲಾಕ್ ಮೇಲ್ ಮಾಡಿರುವ ಆರೋಪಿ ಜೈಲು ಪಾಲಾಗಿದ್ದಾನೆ.

ಕಲಬುರಗಿ ಜಿಲ್ಲೆ ಚಿತ್ತಾಪೂರ ತಾಲೂಕಿನ ಬಾಗೋಡಿಯ ಮಹ್ಮದ್ ಚಾಂದ್ ಪಾಷಾ ಅಲಿಯಾಸ್ ಚಂದು ಪಾಟೀಲ್ ಬಂಧಿತ ಯುವಕ.… ..ಮುಂದೆ ಓದಿ

ಅಂಜನಾದ್ರಿಗೊಂದು ಪೊಲೀಸ್ ಠಾಣೆ!

ವಿಜಯಪರ್ವ ಸುದ್ದಿ,‌ ಕೊಪ್ಪಳ

ಹನುಮ ಜನ್ಮ ಸ್ಥಳ ಎಂಬ ಪೌರಾಣಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಅಂಜನಾದ್ರಿ ಪರ್ವತ‌ ಒಳಗೊಂಡಂತೆ ಹೊಸ ‌ಪೊಲೀಸ್ ಠಾಣೆ ಸ್ಥಾಪನೆಗೆ ಭರದ ಸಿದ್ದತೆ ನಡೆದಿದೆ. ಈ ಬಗ್ಗೆ ಇಂದು ಕೊಪ್ಪಳ ಸಿಪಿಐ ಉದಯ‌ರವಿ ಮತ್ತು ಪಿಎಸ್ಐ ದೊಡ್ಡಪ್ಪ ಅವರಿಂದ ಸಮಗ್ರ ಮಾಹಿತಿ ಪಡೆದಿರುವ‌‌ ಕೊಪ್ಪಳ ಎಸ್ಪಿ ಟಿ.ಶ್ರೀಧರ‌… ..ಮುಂದೆ ಓದಿ

ಕೊಳೆತ ಸ್ಥಿತಿಯಲ್ಲಿ ಮಹಿಳೆ ಶವ ಕುರುಚಲು ಕಾಡಿನಲ್ಲಿ ಪತ್ತೆ; ಹೆಣದ ಪಕ್ಕದಲ್ಲಿ ಕಂಡಿದ್ದೇನೆ?

ವಿಜಯಪರ್ವ ಸುದ್ದಿ, ಕುಷ್ಟಗಿ

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕು ನಿಲೋಗಲ್ ಗ್ರಾಮದ ಹೊರವಲಯದ ಕುರುಚಲು ಕಾಡು ಪ್ರದೇಶದಲ್ಲಿ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಶನಿವಾರ ರಾತ್ರಿ ಪತ್ತೆಯಾಗಿದೆ.

ಕಾಡಿನಲ್ಲಿ ದನ ಕಾಯುವ ಹುಡಿಗರಿಗೆ ದುರ್ವಾಸನೆ ಬಂದಿದೆ. ಈ ಬಗ್ಗೆ ಶನಿವಾರ ಸಂಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಹನುಮಸಾಗರ ಪೊಲೀಸರು ಕಾರ್ಯಾಚರಣೆ ಮಾಡಿದ್ದು, ಕೆಲ ಹೊತ್ತಿನ ನಂತರ ಕೊಳೆತ ಸ್ಥಿತಿಯಲ್ಲಿ ಮಧ್ಯ ವಯಸ್ಕ ಮಹಿಳೆಯ ಶವ ಪತ್ತೆಯಾಗಿದೆ.… ..ಮುಂದೆ ಓದಿ

ನಗರಸಭೆ ಸದಸ್ಯನ ವ್ಯಪಹರಣ ಪ್ರಕರಣ; ಆರೋಪಿಗಳ‌ ಬಂಧನಕ್ಕೆ ಕುಟುಂಬಸ್ಥರ ಒತ್ತಾಯ

ವಿಜಯಪರ್ವ ಸುದ್ದಿ, ಗಂಗಾವತಿ
ಇಲ್ಲಿನ ನಗರಸಭೆ ಸದಸ್ಯ ಮನೋಹರ ಸ್ವಾಮಿ ವ್ಯಪಹರಣ ಮಾಡಿರುವ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕುಟುಂಬಸ್ಥರು ಬುಧವಾರ ಮನವಿ ಸಲ್ಲಿಸಿದರು.

ಉದ್ಯಮಿ ಶಶಿಧರ ಸ್ವಾಮಿ ನೇತೃತ್ವದಲ್ಲಿ ನಗರ ಠಾಣೆಗೆ ಆಗಮಿಸಿದ ಸುಮಾರು 50ಕ್ಕೂ ಹೆಚ್ಚು ಕುಟುಂಬ ಸದಸ್ಯರು, ಗಂಗಾವತಿ ನಗರ ಠಾಣೆ ಪಿಐ ವೆಂಕಟಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಮನೋಹರ ಸ್ವಾಮಿ ವ್ಯಪಹರಣ ಮಾಡಿರುವ ಕೇವಲ 3 ಆರೋಪಿಗಳನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ.… ..ಮುಂದೆ ಓದಿ