10ನೇ‌ ತರಗತಿ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!

ವಿಜಯಪರ್ವ ಸುದ್ದಿ | ಕೊಪ್ಪಳ

ತಾಲೂಕಿನ ಗಿಣಿಗೇರ ರೈಲ್ವೇ ನಿಲ್ದಾಣದ ಸಮೀಪ ಹಳಿಗೆ ಬಿದ್ದು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೊಪ್ಪಳ ತಾಲೂಕು ಕಲ್ಲತಾವರಗೇರ ಗ್ರಾಮದ ಕಾವೇರಿ ಸಣ್ಣಗುಂಡಪ್ಪ ಬಡಿಗೇರ (16) ಮೃತ ವಿದ್ಯಾರ್ಥಿನಿ. ಶುಕ್ರವಾರ ರಾತ್ರಿ ಗಿಣಿಗೇರ ರೈಲ್ವೇ ನಿಲ್ದಾಣದ  ಸಮೀಪದ ರೈಲು ಹಳಿಯ ಮೇಲೆ ಶವ ಪತ್ತೆಯಾಗಿದೆ.
ಮೃತ ವಿದ್ಯಾರ್ಥಿನಿ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆದಿದ್ದಳು.‌
..ಮುಂದೆ ಓದಿ

ಅರ್ಥಪೂರ್ಣವಾಗಿ ಸಿ.ವಿ.ಚಂದ್ರಶೇಖರ‌ ಹುಟ್ಟುಹಬ್ಬ ಆಚರಣೆ

ವಿಜಯಪರ್ವ ಸುದ್ದಿ,‌ ಕೊಪ್ಪಳ

ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಹಾಗೂ ಹಿರಿಯ ಮುಖಂಡ ಸಿ.ವಿ ಚಂದ್ರಶೇಖರ ತಮ್ಮ 53ನೇ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಸ್ವತಃ ತಾವೇ ಜನರಿಗೆ ಮಾಸ್ಕ್ ವಿತರಿಸಿ ಕರೋನಾದ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು, ಎಚ್ಚರಿಕೆ ವಹಿಸಬೇಕು ಎಂದು ಜಾಗೃತಿ ಮೂಡಿಸುವ ಮೂಲಕ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿದರು. ಕರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಜನ್ಮದಿನವನ್ನು  ಸರಳವಾಗಿ ಆಚರಿಸಲು ಕಾರ್ಯಕರ್ತರು, ಅಭಿಮಾನಿಗಳಿಗೆ ಕರೆ ನೀಡಿದ್ದೇನೆ ಎಂದು ಹೇಳಿದರು.… ..ಮುಂದೆ ಓದಿ

ಕೊಪ್ಪಳದಲ್ಲೂ ಕರೋನ ಅಟ್ಟಹಾಸ ಶುರುವಾಗಿದೆ; ಮಂತ್ರಿ ಬಿ.ಸಿ.ಪಾಟೀಲ್

ವಿಜಯಪರ್ವ ಸುದ್ದಿ, ಕೊಪ್ಪಳ
ಕೊಪ್ಪಳ ಜಿಲ್ಲೆಯಲ್ಲಿಯೂ ಕಳೆದ ಒಂದು ವಾರದಿಂದ ಪ್ರತಿ ದಿನ 300 ರಿಂದ 400 ಕೋವಿಡ್ 19 ಕೇಸ್ ಪತ್ತೆ ಆಗ್ತಿವೆ.‌ ನಿನ್ನೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತ 4 ರೋಗಿಗಳು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ‌ ಮಂತ್ರಿ ಬಿ.ಸಿ.ಪಾಟೀಲ್ ತಿಳಿಸಿದರು.

ಕೊಪ್ಪಳದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೋವಿಡ್‌19 ಸೋಂಕು ಹರಡುವುದನ್ನು ತಡೆಯುವ ಉದ್ದೇಶಕ್ಕೆ ಜನತಾ ಕರ್ಫ್ಯೂ ಜಾರಿಗೊಳಿಸಲಾಗಿದೆ.… ..ಮುಂದೆ ಓದಿ

2 ವಿಧಾನಸಭೆ ಕ್ಷೇತ್ರ ಬಿಜೆಪಿ ತೆಕ್ಕೆಗೆ; ಈಗ ಟಗರು, ಬಂಡೆ ಎಲ್ಲಿವೆ?: ಕೃಷಿ ಮಂತ್ರಿ ಬಿ.ಸಿ.ಪಾಟೀಲ್

ವಿಜಯಪರ್ವ ಸುದ್ದಿ, ಕೊಪ್ಪಳ
ಶಿರಾ ಮತ್ತು ರಾಜರಾಜೇಶ್ವರಿ ನಗರದ ಫಲಿತಾಂಶ ಸರ್ಕಾರಕ್ಕೆ ಜನರು ನೀಡಿದ ಸರ್ಟಿಫಿಕೇಟ್. ಕೋವಿಡ್19, ನೆರೆಯಂತ ಸಂಧರ್ಬದಲ್ಲಿ ಸಿಎಂ ಯಡಿಯೂರಪ್ಪ ಅವರ ಕೆಲಸಕ್ಕೆ ಮತದಾರ ಈ ಫಲಿತಾಂಶ ನೀಡಿದ್ದಾರೆ ಎಂದು ಕೃಷಿ ಮಂತ್ರಿ ಬಿ.ಸಿ.ಪಾಟೀಲ್ ಹೇಳಿದ್ದಾರೆ.‌

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿ, ಕನಿಷ್ಠ 50 ಸಾವಿರಕ್ಕೂ ಹೆಚ್ಚು ಮತದ ಅಂತರದಿಂದ ಆರ್ ಆರ್ ನಗರ ಗೆಲ್ಲಬಹುದು ಎಂಬ ನಿರೀಕ್ಷೆ ಇತ್ತು.‌… ..ಮುಂದೆ ಓದಿ

ಗೆಳೆಯನ ಲವ್‌ ಮಾಡು ಎಂದವನಿಗೆ ಮಹೂರ್ತ ಇಟ್ಟರು; 6 ತಿಂಗಳ ನಂತರ ಆರೋಪಿಗಳು ಅಂದರ್

ವಿಜಯಪರ್ವ ಸುದ್ದಿ, ಕೊಪ್ಪಳ
ಪ್ರೀತ್ಸೆ ಅಂತಾ ಪ್ರಾಣ ತಿನ್ನೋ‌ ಹುಡುಗರು ಆ ಹುಡುಗಿಯ ಅಣ್ಣ-ತಮ್ಮಂದಿರಿಂದ ಗೂಸ ತಿನ್ನೋದು ಸಾಮಾನ್ಯ. ಆದ್ರೆ,‌ ಇಲ್ಲಿ ತನ್ನ ಗೆಳೆಯನನ್ನು ಪ್ರೀತಿ ಮಾಡು ಅಂತಾ ಹಿಂದೆ ಬಿದ್ದವನಿಗೆ ಯುವತಿಯ ಸಹೋದರರು ಮೂಹರ್ತ ಇಟ್ಟು ಮುಗಿಸಿದ್ದಾರೆ. ಬರೋಬ್ಬರಿ 6 ತಿಂಗಳ ನಂತ್ರ ಪೊಲೀಸರು ಆರೋಪಿಗಳನ್ನು ಅಂದರ್ ಮಾಡಿದ್ದಾರೆ.

ಕಳೆದ ಏಪ್ರೀಲ್ 15 ರಂದು ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಚಳ್ಳಾರಿ ಗ್ರಾಮದಲ್ಲಿ 18 ವರ್ಷದ ರಮೇಶ ಪೊಲೀಸ್ ಪಾಟೀಲ್ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ.… ..ಮುಂದೆ ಓದಿ

ಕಾಂಗ್ರೆಸ್‌ ಯೋಗ್ಯತೆ ಬಗ್ಗೆ ಮಾತನಾಡುವಷ್ಟು ಮಾಜಿ ಸಿಎಂ ಕುಮಾರಸ್ವಾಮಿ ಯೋಗ್ಯರಲ್ಲ: ತಂಗಡಗಿ

ವಿಜಯಪರ್ವ ಸುದ್ದಿ, ಕೊಪ್ಪಳ
ಕಾಂಗ್ರೆಸ್ ರಾಷ್ಟ್ರೀಯ ಪಕ್ಷ. ಕಾಂಗ್ರೆಸ್ ಪಕ್ಷದ ಜನಪರ‌ ಕಾಳಜಿ ಏನೆಂಬುದು ದೇಶದ ಜನತೆಗೆ ಗೊತ್ತಿದೆ. ಕಾಂಗ್ರೆಸ್‌ ಯೋಗ್ಯತೆ ಬಗ್ಗೆ ಮಾತನಾಡುವಷ್ಟು ಮಾಜಿ ಸಿಎಂ ಕುಮಾರಸ್ವಾಮಿ ಯೋಗ್ಯರಲ್ಲ ಎಂದು ಮಾಜಿ ಮಂತ್ರಿ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಜೆಡಿಎಸ್ ಪಕ್ಷ ಮತ್ತೊಬ್ಬರತ್ತ ಬೆರಳು ತೋರಿಸುವಾಗ ಇನ್ನುಳಿದ ಬೆರಳುಗಳು ತಮ್ಮ ಕಡೆಗೇ‌ ಇರುತ್ತವೆ‌ ಎಂಬುದನ್ನು ಮರೆಯಬಾರದು ಎಂದು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.… ..ಮುಂದೆ ಓದಿ

ಬಯಲಾಯ್ತು ಬಿಜೆಪಿ ಒಳಜಗಳ; ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಅಮರೇಶ ಕರಡಿ ಟಾಂಗ್!

ವಿಜಯಪರ್ವ ‌ಸುದ್ದಿ,‌ ಕೊಪ್ಪಳ
ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ರಿಗೆ ಸಂಸದ ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿ ಟಾಂಗ್ ಕೊಟ್ಟರಾ?

ಕೊಪ್ಪಳದ ಸಾರ್ವಜನಿಕ ಮೈದಾನದಲ್ಲಿ ಪ್ರಧಾ‌ನಿ ನರೇಂದ್ರ ಮೋದಿ ಜನ್ಮ ದಿನದ ಹಿನ್ನೆಲೆ ಬಿಜೆಪಿ ಯುವ‌ ಮೋರ್ಚಾದ  ಕೊಪ್ಪಳ ಜಿಲ್ಲಾ ಘಟಕ ಗುರುವಾರ ಆಯೋಜಿಸಿದ್ದ ರಕ್ತದಾನ ಶಿಬಿರ ಕಾರ್ಯಕ್ರಮ ಇಂಥಹದ್ದೊಂದು ಚರ್ಚೆ ಹುಟ್ಟುಹಾಕಿದೆ.… ..ಮುಂದೆ ಓದಿ

ಬಿಜೆಪಿ ಎಸ್ಟಿ ಮೋರ್ಚಾ ಜಿಲ್ಲಾ ಕೋಶಾಧ್ಯಕ್ಷನ ಮೇಲೆ ಸ್ವಪಕ್ಷೀಯರಿಂದ ಹಲ್ಲೆ; ಮಾಡಿದ್ಯಾರು?

ವಿಜಯಪರ್ವ ಸುದ್ದಿ, ಕನಕಗಿರಿ
ಜಿಲ್ಲೆಯ ಕನಕಗಿರಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ‌ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಬಿಜೆಪಿ ಎಸ್ಟಿ ಮೋರ್ಚಾದ ಜಿಲ್ಲಾ ಕೋಶಾಧ್ಯಕ್ಷರೂ ಆಗಿರುವ ಕನಕಗಿರಿ ತಾಲೂಕು ನವಲಿ ಗ್ರಾಮದ ನಾಗರಾಜ ತಳವಾರ ನನ್ನ ಮೇಲೆ ಹಲ್ಲೆಯಾಗಿದೆ. ಇದಕ್ಕೆ ಶಾಸಕ ಬಸವರಾಜ ದಡೆಸುಗೂರ ಅವರ ಬೆಂಬಲಿಗರೇ ಹಲ್ಲೆ ಮಾಡಿದ್ದು, ಇದಕ್ಕೆ ಶಾಸಕರೂ ಬೆಂಬಲ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.…
..ಮುಂದೆ ಓದಿ