ಬಿಜೆಪಿಯಲ್ಲಿ ಬೀಜದ ಹೋರಿಗಳಿಲ್ಲ; ಮಾಜಿ ಮಂತ್ರಿ ಶಿವರಾಜ ತಂಗಡಗಿ

ವಿಜಯಪರ್ವ ಸುದ್ದಿ, ಕನಕಗಿರಿ

ಬಿಜೆಪಿಯಲ್ಲಿ ಬೀಜದ ಹೋರಿಗಳಿಲ್ಲ. ಅಲ್ಲಿ ಇರುವವರೆಲ್ಲ ಕಾಂಗ್ರೆಸ್, ಜೆಡಿಎಸ್ ಬೀಜಗಳು. ಬಿಜೆಪಿಯವರು ನಮ್ಮವರನ್ನೇ ಎತ್ತಿಕೊಂಡು ಹೋಗಿ ತಮ್ಮ ಪಕ್ಷದವರು ಎನ್ನುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಮಂತ್ರಿ ಶಿವರಾಜ ತಂಗಡಗಿ ವ್ಯಂಗ್ಯವಾಡಿದ್ದಾರೆ. ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ಕಾಂಗ್ರೆಸ್ ನಿಂದ ಆಯೋಜಿಸಿದ್ದ ಟ್ರ್ಯಾಕ್ಟರ್ ರ್ಯಾಲಿಯ ಪೂರ್ವಭಾವಿ ಸಭೆಯಲ್ಲಿ ಗುರುವಾರ ಮಾತನಾಡಿದರು.

ಕನಕಗಿರಿ ವಿಧಾನಸಭೆ ಕ್ಷೇತ್ರದ ಅನೇಕ ಕಡೆ ಗ್ರಾಪಂ ಸದಸ್ಯರನ್ನು ಕರೆದುಕೊಂಡು ಹೋಗಿ, ಶಾಸಕರು ನಮ್ಮವರು ಎನ್ನುತ್ತಿದ್ದಾರೆ.… ..ಮುಂದೆ ಓದಿ

ಗಂಗಾವತಿ ನಗರಸಭೆ ಮತ್ತೇ “ಕೈ” ವಶ; ಬಿಜೆಪಿಗೆ ಮುಖಭಂಗ; ಉಪಾಧ್ಯಕ್ಷೆ‌ ವಿರುದ್ಧ ತಿಂಗಳೊಳಗೆ ಕ್ರಮ; ಶಾಸಕ

ವಿಜಯಪರ್ವ ಸುದ್ದಿ, ಗಂಗಾವತಿ
ಕಾಂಗ್ರೆಸ್ ‌ನಿಂದ ಆಯ್ಕೆಯಾದ ನಗರಸಭೆ ಸದಸ್ಯನ ಅಪಹರಣದಿಂದ ಕುತೂಹಲ ಕೆರಳಿಸಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಶಾಂತಿಯುತ ತೆರೆ ಬಿದ್ದಿದೆ.‌ ನಗರಸಭೆ ಅಧಿಕಾರ ಮತ್ತೇ ಕಾಂಗ್ರೆಸ್ ಪಾಲಾಗಿದ್ದು, ಅಧಿಕಾರ‌ ಹಿಡಿಯುವ ಕಮಲ ಪಾಳೆಕ್ಕೆ ಮುಖಭಂಗವಾಗಿದೆ.

ಕಳೆದ 15 ದಿನದಿಂದ ದಿನಕ್ಕೊಂದು ಹೈಡ್ರಾಮಾ ಸೃಷ್ಠಿಗೆ ಕಾರಣವಾಗಿದ್ದ ಗಂಗಾವತಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಕಾಂಗ್ರೆಸ್- ಬಿಜೆಪಿಗೆ ಸವಾಲಾಗಿತ್ತು.‌… ..ಮುಂದೆ ಓದಿ

ಭಾರತೀಯ ಪ್ರಜಾಸಂಘ(ಭೀಮನಡೆ)ದ ಮಾಸಿಕ ಸಭೆ

ವಿಜಯಪರ್ವ ಸುದ್ದಿ, ಕೊಪ್ಪಳ:
ಭಾರತೀಯ ಪ್ರಜಾಸಂಘ (ಭೀಮನಡೆ)ದ ತಾಲೂಕು ಘಟಕದ ಅಧ್ಯಕ್ಷರ ಸಭೆ ಕೊಪ್ಪಳದಲ್ಲಿ ನಡೆಯಿತು. ಸಂಘಟನೆ ಜಿಲ್ಲಾಧ್ಯಕ್ಷ ನಾಗರಾಜ ಕಟ್ಟಿಮನಿ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಇತ್ತೀಚಿಗೆ ದಲಿತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದು, ಇದರ ವಿರುದ್ಧ ಸಂಘಟನೆ ಹೋರಾಟ ರೂಪಿಸಬೇಕಿದೆ ಎಂದರು.
ಇದೇ ವೇಳೆ ಸಂಘಟನೆ ಜಿಲ್ಲಾ ಸಂಚಾಲಕ ಗೋವಿಂದರಾಜ ಬೂದಗುಂಪಾ ಅವರ 36ನೇ ಹುಟ್ಟಿದ ದಿನ ಆಚರಿಸಲಾಯಿತು.…
..ಮುಂದೆ ಓದಿ

error: Content is protected !!