ಇದು ಗಂಗಾವತಿ ಮಟ್ಕಾ ಸ್ಪೆಷಲ್‌!

ವಿಜಯ ಪರ್ವ ಸುದ್ದಿ | ಕೊಪ್ಪಳ

ಪೊಲೀಸರು ಏನೇ ಹೇಳಲಿ, ಎಷ್ಟೇ ದಾಳಿ ನಡೆಸಲಿ, ಕೊಪ್ಪಳ ಜಿಲ್ಲೆಯಲ್ಲಿ ಮಟ್ಕಾ ದಂಧೆ ಅಬಾಧಿತವಾಗಿ ನಡೆದಿದೆ ಎಂಬುದನ್ನು ಈ ವಿಡಿಯೊ ಸ್ಪಷ್ಟಪಡಿಸುತ್ತದೆ.

https://youtu.be/RpnIMHgNETM

ಇದು ಗಂಗಾವತಿ ನಗರಕ್ಕೆ ಅಂಟಿಕೊಂಡಂತಿರುವ ದಾಸನಾಳ ಗ್ರಾಮದಲ್ಲಿ ನಡೆಯುತ್ತಿರುವ ಮಟ್ಕಾದ ಒಂದು ತುಣುಕು ಮಾತ್ರ.

ಇಲ್ಲಿ ಮಟ್ಕಾ ಆಡಿಸುವವರಿಗೆ ರಾಜಕೀಯ ವ್ಯಕ್ತಿಗಳ ಬೆಂಬಲ ಇದೆ ಎಂಬುದು ಜನರಾಡಿಕೊಳ್ಳುವ ಬಹಿರಂಗ ಸತ್ಯ...ಮುಂದೆ ಓದಿ

ಲಕ್ಷ ರೂಪಾಯಿ ಎಗರಿಸಿದ ಚಾಲಾಕಿ ಕಳ್ಳ: ಸಿಸಿಟಿವಿಯಲ್ಲಿ ದಾಖಲು

ವಿಜಯ ಪರ್ವ ಸುದ್ದಿ | ಕೊಪ್ಪಳ

ಚಾಲಾಕಿ ಕಳ್ಳನೊಬ್ಬ ಕ್ಷಣಾರ್ಧದಲ್ಲಿ ರೂ.1.05 ಲಕ್ಷ ನಗದನ್ನು ಬೈಕ್‌ ಡಿಕ್ಕಿಯಿಂದ ಎಗರಿಸಿದ ಘಟನೆ ನಗರದ ಕಾವೇರಿ ಪೆಟ್ರೋಲ್‌ ಬಂಕ್‌ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಇಡೀ ಘಟನೆ ಒಂದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುದ್ದು, ಪೊಲೀಸರು ಚಾಲಾಕಿ ಕಳ್ಳನ ಪತ್ತೆಗೆ ಶ್ರಮಿಸುತ್ತಿದ್ದಾರೆ.

ಲಾಚನಕೇರಿಯ ಚನ್ನಪ್ಪಗೌಡ ತಂದಿ ಹನುಮನಗೌಡ ಪಾಟೀಲ್‌ ಎಂಬ ರೈತ, ತಮ್ಮ ಬೆಳೆಯನ್ನು ಎಪಿಎಂಸಿಯಲ್ಲಿ ಮಾರಿ, ಅಲ್ಲಿ ನೀಡಿದ್ದ ಚೆಕ್‌ ಅನ್ನು ಕೆನರಾ ಬ್ಯಾಂಕ್‌ನಲ್ಲಿ ನಗದೀಕರಿಸಿದ್ದರು...ಮುಂದೆ ಓದಿ

ಓಡಿಹೋದ ಅನುಮಾನಾಸ್ಪದ ವ್ಯಕ್ತಿ; ಪಿಸ್ತೂಲ್‌ ಹಿಡಿದು ಬೆನ್ನತ್ತಿದ ಎಸ್‌ಪಿ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ತಾಲೂಕಿನ ಅಳವಂಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ, ಇಂದು ವಾಹನಗಳ ದಾಖಲಾತಿ ಪರಿಶೀಲನೆ ಕಸರತ್ತು ಪೊಲೀಸರ ದೊಡ್ಡ ಕಾರ್ಯಾಚರಣೆಗೆ ಕಾರಣವಾಗಿದೆ.

ಮಾಮೂಲು ದಾಖಲಾತಿ ಪರಿಶೀಲನೆ ವೇಳೆ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಬೈಕ್ ಬಿಟ್ಟು ಓಡಿ ಹೋಗಿದ್ದಾನೆ. ಹೀಗಾಗಿ ಕಳೆದ ನಾಲ್ಕೈದು ಗಂಟೆಗಳಿಂದ ಪೊಲೀಸರು ಸುತ್ತಮುತ್ತಲಿನ ಹೊಲಗಳಲ್ಲಿ  ತೀವ್ರ ಶೋಧ ನಡೆಸಿದ್ದಾರೆ.

ಖುದ್ದು ಎಸ್‌ಪಿ ಟಿ...ಮುಂದೆ ಓದಿ

ಮದ್ಯ ಅಕ್ರಮ ಸಾಗಣೆ; ಅಳವಂಡಿ ಪೊಲೀಸರ ದಾಳಿ – ಮದ್ಯ, ನಗದು ವಶ

ವಿಜಯಪರ್ವ ಸುದ್ದಿ‌ | ಕೊಪ್ಪಳ

ತಾಲೂಕಿನ ಕವಲೂರು ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ರೂ. 22,666 ಮೌಲ್ಯದ ಮದ್ಯ ಹಾಗೂ ರೂ. 1,78,000 ನಗದು ಹಣವನ್ನು ಅಳವಂಡಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕವಲೂರು ಗ್ರಾಮದಲ್ಲಿ ಒಂದು ಟಾಟಾ ಇಂಡಿಕಾ ಕಾರಿನಲ್ಲಿ ಅಕ್ರಮವಾಗಿ ಮದ್ಯ ಹಾಗೂ ಹಣ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಪಿಎಸ್ಐ ಮಾರ್ತಂಡಪ್ಪ, ಎಚ್.ಸಿ.… ..ಮುಂದೆ ಓದಿ

ಕೊಪ್ಪಳದ ಪಿಎಸ್‌ಐ ಹುದ್ದೆಯ ಅಧಿಕಾರಿಗಳಿಗೆ ಕರ್ತವ್ಯ ಮರುಹಂಚಿಕೆ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಜಿಲ್ಲೆಯಲ್ಲಿ ಸದ್ಯ ಅಸ್ತಿತ್ವದಲ್ಲಿರುವ ಪಿಎಸ್‌ಐ ಹುದ್ದೆಗಳನ್ನು ಮರುಗೊತ್ತುಪಡಿಸಿ, ಸದರಿ ಹುದ್ದೆಗಳ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ಮರುನಿಗದಿಗೊಳಿಸಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ. ಶ್ರೀಧರ್‌ ಆದೇಶ ಹೊರಡಿಸಿದ್ದಾರೆ.

ಆ ಪ್ರಕಾರ:

  1. ಈ ಮುಂಚೆ ಇದ್ದ ಪಿಎಸ್‌ಐ (ಕ್ರೈಮ್)‌ ಹುದ್ದೆ ರದ್ದಾಗಿದೆ. ಅದರ ಬದಲು, ಆ ಹುದ್ದೆಯನ್ನು ಪಿಎಸ್‌ಐ (ಇನ್ವೆಸ್ಟಿಗೇಶನ್)‌‌ ಅಂದರೆ, ಪಿಎಸ್ಐ (ವಿಚಾರಣೆ) ಎಂದು ಮರುನಾಮಕರಣ ಮಾಡಲಾಗಿದ್ದು, ಅದಕ್ಕೆ ತಕ್ಕಂತೆ ಕರ್ತವ್ಯಗಳನ್ನು ವಿಧಿಸಲಾಗಿದೆ. 
..ಮುಂದೆ ಓದಿ

850 ಪಿಎಸ್‌ಐ ಹಾಗೂ 8,000 ಕಾನ್ಸ್‌ಟೇಬಲ್‌ ಹುದ್ದೆ ಭರ್ತಿ

ವಿಜಯ ಪರ್ವ ಸುದ್ದಿ | ಕೊಪ್ಪಳ

ರಾಜ್ಯದ ಪೊಲೀಸ್ ಠಾಣೆಗಳಲ್ಲಿ ದಾಖಲಾಗುವ ಅಪರಾಧ ಪ್ರಕರಣಗಳನ್ನು ಆಧರಿಸಿ ಪಿಎಸ್‌ಐ ಹಾಗೂ ಕಾನ್ಸ್‌ಟೇಬಲ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಸರಕಾರ ಆದೇಶ ಹೊರಡಿಸಿದೆ. ಇವೆಲ್ಲವೂ ನೇರ ನೇಮಕಾತಿ ಆಗಲಿವೆ ಎನ್ನಲಾಗಿದೆ.

ಆ ಪ್ರಕಾರ, 850 ಪಿಎಸ್‌ಐ ಹಾಗೂ 8,000 ಕಾನ್ಸ್‌ಟೇಬಲ್‌ಗಳನ್ನು ನೇಮಕಾತಿ ಮಾಡಿಕೊಳ್ಳಲು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಈ ಮುಂಚೆ ನಿರ್ಧರಿಸಿದ್ದ 850 ಕಾನ್ಸ್‌ಟೇಬಲ್‌ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸಲಾಗಿದೆ...ಮುಂದೆ ಓದಿ

ಸಿಪಿಐ ಉದಯರವಿ ದೂರವಾಣಿ ವಿವಾದ

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊಪ್ಪಳ ಜಿಲ್ಲೆ ಗಂಗಾವತಿಯ ಗ್ರಾಮೀಣ ಸಿಪಿಐ ಉದಯರವಿ ಅವರು ಕೊಪ್ಪಳ ನಗರದ ನಿವಾಸಿ ಹಾಗೂ ದಲಿತ ನಾಯಕ ಮಲ್ಲಿಕಾರ್ಜುನ ಪೂಜಾರ ಅವರಿಗೆ ಮಾಡಿರುವ ದೂರವಾಣಿ ಕರೆ ಸಾಕಷ್ಟು ವಿವಾದ ಮೂಡಿಸಿದೆ.

ಜೂನ್‌ 1 ಮಧ್ಯಾಹ್ನ 1.03 ಕ್ಕೆ ಮಲ್ಲಿಕಾರ್ಜುನ ಪೂಜಾರ್‌ ಅವರಿಗೆ ಕರೆ ಮಾಡಿರುವ ಉದಯರವಿ ಅವರು ತಮ್ಮ ಪರಿಚಯ ಹೇಳಿಕೊಂಡು, ಗಂಗಾವತಿಯ ಗ್ರಾಮೀಣ ಸಿಪಿಐ ಠಾಣೆಗೆ ಬರುವಂತೆ ಸೂಚಿಸುತ್ತಾರೆ...ಮುಂದೆ ಓದಿ

ಪೊಲೀಸರ ಮಾನವೀಯ ಮುಖಗಳು…

ವಿಜಯ ಪರ್ವ ಸುದ್ದಿ | ಕೊಪ್ಪಳ

ಕೊರೊನಾ ದಿಗ್ಬಂಧನ ತಂದಿರುವ ಈ ಸಂಕಷ್ಟ ಕಾಲದಲ್ಲಿ, ಕೊರೊನಾ ನಂತರ ಅತಿ ಹೆಚ್ಚು ಭೀತಿ ಮೂಡಿಸಿದ್ದು ಪೊಲೀಸರು. ಲಾಕ್‌ ಔಟ್‌ ಪ್ರಾರಂಭವಾದ ದಿನವೇ ಪೊಲೀಸರ ಕಾರ್ಯಾಚರಣೆ ರಾಜ್ಯಾದ್ಯಂತ ಜನರಲ್ಲಿ ಆಕ್ರೋಶ ಮೂಡಿಸಿತ್ತು.  ನಂತರ, ಜನರೊಂದಿಗೆ ಮಾನವೀಯವಾಗಿ ವರ್ತಿಸಬೇಕೆಂದು ಖುದ್ದು ಪೊಲೀಸ್‌ ಮಹಾನಿರ್ದೇಶಕರೇ ಆದೇಶ ಹೊರಡಿಸಬೇಕಾಯಿತು.

ಇಲ್ಲಿರುವುದು ಪೊಲೀಸರ ಇನ್ನೊಂದು ಮುಖ...ಮುಂದೆ ಓದಿ