ವಯಸ್ಸಾದ ಆಕಳನ್ನು ಸಿ.ಟಿ.ರವಿ ‌ಮನೆ ಮುಂದೆ ಕಟ್ಟಬೇಕಾ? ಬಿಜೆಪಿ ಮುಖಂಡರ ಮನೆ ಮುಂದೆ ತರಬೇಕಾ? ನಾವು ಏನು ತಿನ್ನಬೇಕು ನಮಗೆ ಗೊತ್ತು; ತಂಗಡಗಿ

ವಿಜಯಪರ್ವ ಸುದ್ದಿ, ಕೊಪ್ಪಳ
ವಯಸ್ಸಾದ ಆಕಳನ್ನು ಸಿ.ಟಿ. ರವಿ ಮನೆ ಮುಂದೆ ಕಟ್ಟಬೇಕಾ? ಸ್ಥಳೀಯ ಬಿಜೆಪಿ ಮುಖಂಡರ ಮನೆ ಮುಂದೆ ಕಟ್ಟಬೇಕಾ? ಸಂವಿಧಾನ ಆಹಾರದ ಹಕ್ಕು ನೀಡಿದೆ ಏನು ತಿನ್ನಬೇಕು ಅನ್ನೋದು ನಮಗೆ ಬಿಟ್ಟಿದ್ದು ಎಂದು ಮಾಜಿ ಮಂತ್ರಿ ಶಿವರಾಜ ತಂಗಡಗಿ ಪ್ರಶ್ನಿಸಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಭಾನುವಾರ ಮಾತನಾಡಿ, ಕೇಂದ್ರ ಮತ್ತು ತಾಜ್ಯ ಸರ್ಕಾರಗಳು ಗೋ ಹತ್ಯೆ ನಿಷೇಧ ಮಾಡುವ ಮುನ್ನ ಅದರ ಸಾಧಕ ಬಾಧಕ ಚರ್ಚಿಸಬೇಕು.… ..ಮುಂದೆ ಓದಿ

ಕೆಡಿಪಿ ಸಭೆಗೆ ಪತ್ರಕರ್ತರಿಗೆ ನಿರ್ಬಂಧ; ಹಲೋ ಹಲೋ ಕೌರವೇಶ, ಇದೇನಿದು ಪತ್ರಕರ್ತರ ಮೇಲೆ ದ್ವೇಷ!

ವಿಜಯಪರ್ವ ಸುದ್ದಿ, ಕೊಪ್ಪಳ
“ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಮಂತ್ರಿ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ‌ ಇಂದು ಕೆಡಿಪಿ ಸಭೆ ನಡೆಯಲಿದೆ. ಸಭೆಗೆ ಪರ್ತಕರ್ತರಿಗೆ ಅನುಮತಿ ಇಲ್ಲ. ಸಭೆ ಮುಗಿದ ಬಳಿಕ ಮಂತ್ರಿಗಳು ಮಾಹಿತಿ ನೀಡಲಿದ್ದಾರೆ”
ಕೊಪ್ಪಳದ ವಾರ್ತಾ ಇಲಾಖೆಯಿಂದ ಕೊಪ್ಪಳದ ಪತ್ರಕರ್ತರಿಗೆ ಕಳುಹಿಸಲಾದ ವಾಟ್ಸಾಪ್ ಸಂದೇಶವಿದು.

ಹೌದು, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್ ಅಧ್ಯಕ್ಷತೆಯಲ್ಲಿ ಇಂದು (ನ.20) ಕೆಡಿಪಿ ಸಭೆ ಕರೆಯಲಾಗಿದೆ.… ..ಮುಂದೆ ಓದಿ

ಕಾಡಾ ಅಧ್ಯಕ್ಷ ಸ್ಥಾನಕ್ಕೆ ಹೆಚ್ಚಿದ ಪೈಪೋಟಿ; 3 ಜಿಲ್ಲೆ ಬಿಜೆಪಿ ಮುಖಂಡರ ಜಾತಿ ಲೆಕ್ಕಾಚಾರ, ಲಾಭಿ!

ವಿಜಯಪರ್ವ ಸುದ್ದಿ, ಕೊಪ್ಪಳ
ಬಸನಗೌಡ ತುರವಿಹಾರ ಕಾಡಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಸೇರಿದ ಬೆನ್ನಲ್ಲೆ 3 ಜಿಲ್ಲೆಯ ಬಿಜೆಪಿ ಮುಖಂಡರು ತೆರವಾದ ಅಧಿಕಾರ ಹಿಡಿಯಲು ಪೈಪೋಟಿ ಆರಂಭಿಸಿದ್ದಾರೆ.

ಪ್ರತಾಪಗೌಡ ಪಾಟೀಲ್ ಗೆ ಬಿಜೆಪಿ ಟಿಕೇಟ್ ಪಕ್ಕಾ ಎಂಬುದನ್ನು ಅರಿತ ಮಸ್ಕಿ ವಿಧಾನಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಸನಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಕಾಂಗ್ರೆಸ್ ಅಭ್ಯರ್ಥಿ ಆಗೋದು ಬಹುತೇಕ ಖಚಿತವಾಗಿದೆ.… ..ಮುಂದೆ ಓದಿ

ಉಪ ಚುನಾವಣೆ ಫಲಿತಾಂಶ ನೋಡಿ ಮಾಜಿ ಸಿಎಂ ಸಿದ್ದರಾಮಯ್ಯರನ್ನು ಕಾಂಗ್ರೆಸ್ ಬದಲಿಸಬಹುದು; ಡಿಸಿಎಂ

ವಿಜಯಪರ್ವ ‌ಸುದ್ದಿ,‌ ಕುಕನೂರು
ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನ ಆಯ್ಕೆ ಮಾಡಿರೋ‌ ಶಿರ ಮತ್ತು ಆರ್ ಆರ್ ನಗರ ಮತದಾರರಿಗೆ ಧನ್ಯವಾದ.‌ ಇನ್ಮುಂದೆ‌ ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಎಂದೂ ಅಧಿಕಾರ ಹಿಡಿಯಲು ಸಾಧ್ಯವಿಲ್ಲ.‌ ಮುಂದಿನ 2023 ಮತ್ತು 2028ರ‌ ಸಾರ್ವತ್ರಿಕ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಡಿಸಿಎಂ, ಉನ್ನತ ಶಿಕ್ಷಣ‌ ಮಂತ್ರಿ‌ ಡಾ.ಸಿ.ಅಶ್ವಥನಾರಾಯಣ ಭರವಸೆ ವ್ಯಕ್ತಪಡಿಸಿದರು.…
..ಮುಂದೆ ಓದಿ

ನಗರಸಭೆ ಸದಸ್ಯನ ವ್ಯಪಹರಣ ಪ್ರಕರಣ; ಆರೋಪಿಗಳ‌ ಬಂಧನಕ್ಕೆ ಕುಟುಂಬಸ್ಥರ ಒತ್ತಾಯ

ವಿಜಯಪರ್ವ ಸುದ್ದಿ, ಗಂಗಾವತಿ
ಇಲ್ಲಿನ ನಗರಸಭೆ ಸದಸ್ಯ ಮನೋಹರ ಸ್ವಾಮಿ ವ್ಯಪಹರಣ ಮಾಡಿರುವ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಕುಟುಂಬಸ್ಥರು ಬುಧವಾರ ಮನವಿ ಸಲ್ಲಿಸಿದರು.

ಉದ್ಯಮಿ ಶಶಿಧರ ಸ್ವಾಮಿ ನೇತೃತ್ವದಲ್ಲಿ ನಗರ ಠಾಣೆಗೆ ಆಗಮಿಸಿದ ಸುಮಾರು 50ಕ್ಕೂ ಹೆಚ್ಚು ಕುಟುಂಬ ಸದಸ್ಯರು, ಗಂಗಾವತಿ ನಗರ ಠಾಣೆ ಪಿಐ ವೆಂಕಟಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಮನೋಹರ ಸ್ವಾಮಿ ವ್ಯಪಹರಣ ಮಾಡಿರುವ ಕೇವಲ 3 ಆರೋಪಿಗಳನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ.… ..ಮುಂದೆ ಓದಿ

ಹಾಲಿ-ಮಾಜಿ‌ ಶಾಸಕರ‌ ಪ್ರತಿಷ್ಠೆಗೆ ವೇದಿಕೆ ಆಯ್ತಾ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ?

ವಿಜಯಪರ್ವ ಸುದ್ದಿ, ಗಂಗಾವತಿ
ಗಂಗಾವತಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ನವೆಂಬರ್ 2ಕ್ಕೆ ನಿಗದಿಯಾಗಿದೆ.‌ ಚುನಾವಣೆ ದಿನ ನಿಗದಿಯಾದ ದಿನದಿಂದ ‌ದಿನಕ್ಕೊಂದು ಹೈಡ್ರಾಮಾ ನಡೆಯುತ್ತಿದ್ದು, ಹಾಲಿ- ಮಾಜಿ ಶಾಸಕರ ಪ್ರತಿಷ್ಠೆಗೆ ಚುನಾವಣೆ ವೇದಿಕೆಯಾಗಿದೆ.

ಈಗಾಗಲೇ ಅಧ್ಯಕ್ಷ ಸ್ಥಾನದ ಮೀಸಲಾತಿ ಬದಲಾವಣೆ ಮಾಡಿಸಿರೋ ಶಾಸಕ ಪರಣ್ಣ ಮುನವಳ್ಳಿ ನಗರಸಭೆಯಲ್ಲಿ ಅಧಿಕಾರ ಹಿಡಿಯಲು‌ ಶತ‌ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಬಿಜೆಪಿಯಿಂದ ಹೊರ ಬಂದಿರೋ ಮುಖಂಡ ಸೈಯದ್ ಅಲಿ, ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಮುಖಭಂಗ ಮಾಡುಲು ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಪಾಳೆಯದಲ್ಲಿ‌ ನಿಂತು ಗೇಮ್ ಪ್ಲೇ ಮಾಡುತ್ತಿದ್ದಾರೆ.‌… ..ಮುಂದೆ ಓದಿ

ಶಾಸಕ ಬಸನಗೌಡ ಯತ್ನಾಳರನ್ನ ಕೂಡಲೇ ಪಕ್ಷದಿಂದ ಕಿತ್ತು ಹಾಕಿ, ಅಯೋಗ್ಯರ ಹೇಳಿಕೆಗೆ ಬಿಜೆಪಿ ಜಗ್ಗಲ್ಲ: ಈಶ್ವರಪ್ಪ

ವಿಜಯಪರ್ವ ಸುದ್ದಿ, ಕೊಪ್ಪಳ
ಬಾಯಿ ಚಪಲಕ್ಕೆ ಮಾತನಾಡುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಕೂಡಲೇ ಪಕ್ಷದಿಂದ ಕಿತ್ತುಹಾಕಬೇಕು ಎಂದು ರಾಜ್ಯಾಧ್ಯಕ್ಷರಿಗೆ ಒತ್ತಾಯ ಮಾಡುತ್ತೇನೆ. ಅಯೋಗ್ಯ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.

ಕೊಪ್ಪಳದ ಶಿವಶಾಂತವೀರ ಮಂಗಲ ಭವನದಲ್ಲಿ ಆಯೋಜಿಸಿದ್ದ ಬಿಜೆಪಿ ಪ್ರಮುಖರ ಸಭೆಯಲ್ಲಿ ಬುಧವಾರ ಮಾತನಾಡಿದರು.

ಇತ್ತೀಷೆಗಷ್ಟೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆದಿದೆ.‌… ..ಮುಂದೆ ಓದಿ

ಕಳಪೆ ಬೀಜ ಪತ್ತೆ ಪ್ರಕರಣದ ಕ್ರಮಕ್ಕೆ ಶಿಫಾರಸು; ಕೃಷಿ ಮಂತ್ರಿ ಬಿ.ಸಿ‌ ಪಾಟೀಲ್‌

ವಿಜಯಪರ್ವ ಸುದ್ದಿ, ಕೊಪ್ಪಳ
ರೈತರಿಗೆ ಕಳಪೆ ಬೀಜ, ಗೊಬ್ಬರ‌ ವಿತರಿಸಿದ ಪ್ರಕರಣ ಗಮನಕ್ಕೆ ಬಂದಿದ್ದು, ಪೂರೈಕೆಯಾದ ಗೊಬ್ಬರವನ್ನು ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಪ್ರಯೋಗಾಲಯದ ವರದಿ ಬಂದಿದ್ದು, ಕಳಪೆ ಗೊಬ್ಬರ ರೈತರಿಗೆ ಮಾರಾಟ ಮಾಡಿರುವುದು ಸಾಬೀತಾಗಿದೆ. ಮಾರಾಟವಾದ ಗೊಬ್ಬರ ಕಂಪನಿ ಹಾಗೂ ಮಾರಾಟ ಮಾಡಿದ ಅಂಗಡಿ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಕೃಷಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಸಿ.ಪಾಟೀಲ್…
..ಮುಂದೆ ಓದಿ

ಎಸ್ಟಿ ಮೀಸಲಾತಿ 7.5ಗೆ ಏರಿಕೆ ಮಾಡದಿದ್ದರೆ ರಾಜ್ಯಾದ್ಯಂತ ಹೋರಾಟ

ವಿಜಯಪರ್ವ ಸುದ್ದಿ, ಕೊಪ್ಪಳ

ಸೆಪ್ಟೆಂಬರ್ 21ರಿಂದ ನಡೆಯುವ ಅಧಿವೇಶನದಲ್ಲಿ ಎಸ್ಟಿ ಮೀಸಲಾತಿ ಶೇಕಡಾ 7.5ಕ್ಕೆ ಏರಿಕೆ ಮಾಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಸುರೇಶ ದೊಣ್ಣಿ ಹೇಳಿದರು.

ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಮೀಸಲಾತಿ ಏರಿಕೆಗೆ ನಾಯಕ ಸಮುದಾಯ ಅನೇಕ ವರ್ಷದಿಂದ ಹೋರಾಡುತ್ತಾ ಬಂದರೂ ಬೇಡಿಕೆ ಈಡೇರಿಲ್ಲ.… ..ಮುಂದೆ ಓದಿ

ಜಿಂಕೆ ಬೇಟೆಗಾರರ ಎಡೆಮುರಿ ಕಟ್ಟಿದ ಅರಣ್ಯಾ ಇಲಾಖೆ; 20 ಜಿಂಕೆ ಚರ್ಮ ವಶ, 7 ಆರೋಪಿಗಳು ಅಂದರ್

ವಿಜಯಪರ್ವ ಸುದ್ದಿ, ಕೊಪ್ಪಳ
ಮಾರುವೇಷದಲ್ಲಿ ದಾಳಿ ಮಾಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದ ತಂಡದ ಎಡೆಮುರಿ ಕಟ್ಟಿದ್ದಾರೆ. ಯಲಬುರ್ಗಾ ತಾಲೂಕಿನ ಹುಣಸಿಹಾಳ ಗ್ರಾಮದ 6 ಜನ, ಕುಕನೂರು ತಾಲೂಕು ಇಟಗಿ ಗ್ರಾಮದ ಒಬ್ಬ ಸೇರಿ 7 ಜನರನ್ನ ಬಂಧಿಸಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಬೇಟೆಯಾಡಿದ್ದ ಸುಮಾರು 20 ಜಿಂಕೆ ಚರ್ಮವನ್ನು ಹುಬ್ಬಳ್ಳಿ, ಬೆಂಗಳೂರು, ಮಂಗಳೂರು ಮತ್ತಿತರ ಭಾಗಗಳಿಗೆ ಮಾರಾಟ ಮಾಡುತ್ತಿದ್ದ 7 ಆರೋಪಿಗಳನ್ನು ಅರಣ್ಯ ಅಧಿಕಾರಿಗಳ ತಂಡ ಬಂಧಿಸಿದೆ.… ..ಮುಂದೆ ಓದಿ

error: Content is protected !!